Dec 15, 2009

ಭಾಷಾಭಿಮಾನ !

" ಕನ್ನಡದ್ಮಕ್ಳು ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಪ್ರಾರಂಭಿಸಿ ಕನ್ನಡ ಭಾಷೆಯ ಆಭಿವೃಧ್ದಿಗಾಗಿ ಹಗಲಿರುಳೂ ಶ್ರಮಿಸಬೇಕು. ಕನ್ನಡದ ಸಂಪೂರ‍್ಣ ಅನುಷ್ಟಾನಕ್ಕಾಗಿ ನಿಮ್ಮ ಶಾಲೆಗಳು, ಮನೆ, ಹಾಗೂ ಎಲ್ಲೆಡೆಯಲ್ಲಿಯೂ ಕನ್ನಡ ಭಾಷೆಯಲ್ಲಿಯೆ ಮಾತನಾಡಬೇಕು. ನಿಮಗೆ ಕನ್ನಡ ಭಾಷೆ ಅತ್ಯಂತ ಸರಳ ಎನ್ನಿಸಬೇಕೆಂದರೆ ಹೆಚ್ಚು ಕನ್ನಡ ಕಾದಂಬರಿಗಳು, ಲೇಖನಗಳು, ಹಾಗೂ ಕವನ ಗಳನ್ನು ಓದಬೇಕು ! ಇನ್ನೂ ಸರಳವಾಗಿ ಹೇಳಬೇಕೆಂದರೆ ನನ್ನ ಲೇಖನಗಳು , ಕಾದಂಬರಿಗಳನ್ನು ನೀವು ಕೊಂಡು ಓದಿದಲ್ಲಿ ನಿಮ್ಮ ಕನ್ನಡಾಭಿಮಾನ ಉತ್ತುಂಗಕ್ಕೇರುವುದರಲ್ಲಿ ಯಾವುದೇ ಸಂದೇಹವಿಲ್ಲ. ಉದಾಹರಣೆಗೆ ನನ್ನ ಮಕ್ಕಳನ್ನೇ ತೆಗೆದುಕೊಳ್ಳಿ...(ಸನ್ಮಾನ್ಯರು ’ಮಗಳು’ ಎನ್ನಲಿಲ್ಲಾವಲ್ಲಾ ಎಂದು ಸಂಭು ವಿನ ಚಡಪಡಿಕೆ !!) ಈದಿನ ಅವರೆಲ್ಲಾ ಆಮೇರಿಕಾದಲ್ಲಿ ವೈದ್ಯರಾಗಿದ್ದಾರೆ ! ಹೇಗೆ ಹೇಳಿ ನೋಡೋಣ ? ಅವರೆಲ್ಲಾ ನಿಮ್ಮಂತೆ ಕನ್ನಡ ಮಾಧ್ಯಮದಲ್ಲಿ ಓದ್ದೇ ಇದ್ದರೂ ಸಹ ಕೇವಲ ನನ್ನ ಕಾದಂಬರಿ , ಪ್ರಬಂಧ ಗಳನ್ನು ಓದಿ ಪ್ರಭಾವಿತರಾಗಿ ಈದಿನ ಉತ್ತುಂಗದಲ್ಲಿದ್ದಾರೆ ! ( ಕೂಸುಗಳು ಕರತಾಡಿಸಿದವು !) ..ಮಕ್ಕಳೇ....ನಿಮ್ಮ ತಂದೆ-ತಾಯಿಯರನ್ನು ಮಮ್ಮಿ-ಡ್ಯಾಡಿ ಎನ್ನುವ ಬದಲು ಅಪ್ಪ-ಅಮ್ಮ ಎನ್ನಿ, ಅದರಲ್ಲಿ ಪ್ರೀತಿ ತುಂಬಿರುತ್ತೆ. ನನ್ನ ಮಕ್ಕಳು ನನ್ನನ್ನು ಡ್ಯಾಡಿಅಂತ್ಲೇ ಕರೆಯೋದು...ಆದ್ರೇ ನಾನ್ಯಾವತ್ತೂ ಅದಕ್ಕೆ ಬೆಲೆ ಕೊಡಲಿಲ್ಲ..ತಿದ್ದಲೂ ಇಲ್ಲ.. ಅವ್ರು ಹಾಗ ಕರೆದಾಕ್ಷಣ ಕನ್ನಡಕ್ಕೆ ಯಾವ ಅವಮಾನವೂ ಆಗೋಲ್ಲ ಆಲ್ವೇ, ನೀವು ಹಾಗೇ ಇದ್ಬಿಡಿ ಅಷ್ಟೇ...!! ನೋಡಿ ಕನ್ನಡಕ್ಕೆ ಈಗ ಶಾಸ್ತ್ರೀಯ ಸ್ಥಾನ ಸಿಕ್ಕಿದೆ ( ಹಾಗಂದ್ರೇನು? ಅಂತ ಮಕ್ಳು ಕೇಳ್ಳಿಲ್ಲ ಅನ್ನೋದೆ ಸಂಬು ವಿಗೆ ಸಮಾಧಾನ), ಕನ್ನಡದ ಘನತೆ ಹೆಚ್ಚಾಗಿದೆ,
ಆದ್ದರಿಂದ ನೀವು ಪ್ರತಿನಿತ್ಯ ಕನ್ನಡವನ್ನೇ ಉಂಡು, ಕನ್ನಡವನ್ನೇ ಹೊದ್ದು ಮಲಗಿ, ಕನ್ನಡದಲ್ಲೇ ಹೇ....(ಸೆನ್ಸಾರ್ ಕಟ್ !) ಕನ್ನಡವನ್ನು ಉಳಿಸಿ ..( ಸನ್ಮಾನ್ಯರಿಗೆ ಜಂಗಮಗಂಟೆಯ ಕರೆ ಬರುತ್ತದೆ...ಅದೇನೋ ಆಂಗ್ಲ ಭಾಷೆಯಲ್ಲಿ ಮಾತನಾಡಿ ...)
ಮಕ್ಕಳೆ ನನಗೊಂದು ಆಂಗ್ಲ ಶಾಲೆಯ ತುರ್ತು ಉದ್ಘಾಟನಾ ಕಾರ್ಯವಿದೆ...ಇನ್ನೊಮ್ಮೆ ಸಿಗುವೆ...ಬರಲೇ..
( ತಮ್ಮ ಫ಼ಾರಿನ್ ಕಾರ್ ಹತ್ತಿ ಬುರ್ ಎಂದು ಹೋಗುತ್ತಾರೆ ! ಕೂಸುಗಳು ಕೊಬ್ರಿ ಬಿಸ್ಕತ್ ತಿನ್ನುತ್ತವೆ ! )
ಸಂದರ್ಭ :- ಕನ್ನಡ ರಾಜ್ಯೋತ್ಸವ ದಂದು ಕನ್ನಡದ ನೆಚ್ಚಿನ ಮೆಚ್ಚಿನ ಸಾಹಿತಿಯೊಬ್ಬರು ಮುಖ್ಯ ’ಅತಿಥಿ’
ಯಾಗಿ ಆಂಗ್ಲ ಶಾಲೆಯೊಂದರಲ್ಲಿ ಆಂಗ್ಲ ಭಾಷೆಯಲ್ಲಿ ಮಾಡಿದ ಭಾಷಣದ ಕನ್ನಾಡಾನುವಾದ !!
ಅನುವಾದಕರು :- ಸಂಭುಲಿಂಗ.

2 comments:

Karthikesh Sarthavalli said...

mukhya atithiya naama ?

Subrahmanya said...

karthikesh Sarthavalli,
ಹೆಸರಿನಲ್ಲೇನಿದೆ boss.....’ಕನ್ನಡ ಹೆಸ್ರಂತೂ ಅಲ್ಲ " !! ......ಹೀಗೇ ಬರ್ತಾ ಇರಿ ..