Jan 4, 2010

ಪದಾಭಾಸಗಳು

ಕನ್ನಡದಲ್ಲಿ ಪದಾಭಾಸಗಳು ನಿಚ್ಚಳ ಮತ್ತು ಹೆಚ್ಚಳವಾಗಿಯೇ ಇವೆ. ’ಹೋಗು’ ವಿಗೆ ’ಓಗು’ , ’ಹೊಡೆ’ ಗೆ ’ವಡೆ’, ’ಭಾಷೆ’ಗೆ ’ಭಾಸೆ’ ಹೀಗೆ(ಈಗೆ!) ಹಲವಾರು ಆಭಾಸಗಳು ನುಸುಳುತ್ತಲೇ ಇರುತ್ತವೆ. ಈಗ ಕೆಲವು ಊರುಗಳ ಹೆಸರನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತೇನೆ.

೧. ಮುರುಡೇಶ್ವರ:- ಕರಾವಳಿಯ ಪ್ರಭಾವಳಿಯಂತಿರುವ ಈ ಶಿವಕ್ಷೇತ್ರವನ್ನು ಬಲ್ಲದವರ‍್ಯಾರು. ಆದರೆ ’ಮುರುಡೇಶ್ವರ’ ಎಂಬುದಕ್ಕೆ ಕನ್ನಡದಲ್ಲಿ ಸ್ಪಷ್ಟ ಅರ್ಥವಿಲ್ಲ. ಮುರುಡ+ಈಶ್ವರ ದಲ್ಲಿ ’ಈಶ್ವರ’ ಸರಿಯಾದರೂ "ಮುರುಡ" ಆಭಾಸದಿಂದ ಕೂಡಿದೆ. ಇದರ ಸ್ಪಷ್ಟ ಹೆಸರು "ಮೃಡೇಶ್ವರ". ’ಮೃಡ’ ಎಂದರೆ ಶಿವ, ’ಈಶ್ವರ’ ಎಂದರೆ ಪರಮ(ಉಚ್ಛ). ಹೀಗಾಗಿ ಮೃಡೇಶ್ವರ ಅತ್ಯಂತ ಸೂಕ್ತ ಪದ. ಮೃಡೇಶ್ವರ ಕ್ಷೇತ್ರದಲ್ಲೂ ಸಹ ದೇವಾಲಯದಲ್ಲಿ ಇದೇ ಪದ ಬಳಸಿದ್ದಾರೆ. ಪುರಾಣಗಳೂ ಮೃಡೇಶ್ವರ ಎಂದೇ ಹೇಳುತ್ತವೆ.


೨. ಬೀದರ್ :- ’ಬಿದರಿ’ ಕಲೆಗೆ ಪ್ರಸಿದ್ದಿಯಾದ ಈ ಊರು ’ಬಿದರಿ’ ಎಂದೇ ಕರೆಯಲ್ಪಡುತ್ತಿತ್ತು. ನಂತರ ಆಭಾಸವಾಗಿ ’ಬೀದರ’ ಅಥವಾ ’ಬೀದರ್’ ಆಗಿದೆ. ಹಾಗೆಯೇ ’ಬೆಂಗಳೂರು’, ’ಮೈಸೂರು’ ಇತ್ಯಾದಿಗಳು ಪದಾಭಾಸದಿಂದ ಮೂಲಾರ್ಥವನ್ನೇ ಕಳೆದುಕೊಂಡು ಇಂದು ಅರ್ಥವೇ ಇಲ್ಲವಾಗಿಸಿ ಕೊಂಡಿವೆ. ಹೀಗೇ ಹುಡುಕುತ್ತಾ ಹೋದರೆ ಅರ್ಥವೇ ಇಲ್ಲದ ಸಾಕಷ್ಟು ಊರುಗಳು ದೊರೆಯುತ್ತವೆ.

ಹಾಗೆಯೇ ಕೆಲವೊಂದು ಪದಗಳು ಆಭಾಸವಾಗಿ ಕಂಡರೂ ಅವು ದೊಡ್ಡ ಅರ್ಥವನ್ನೇ ನೀಡುತ್ತಿರುತ್ತವೆ.
ಉದಾಹರಣೆಗೆ....

ಬಹಳ ವರ್ಷಗಳ ಹಿಂದೆ ಮುಂಬೈನಲ್ಲಿ ಬಹು ಮಹಡಿ ಕಟ್ಟಡವೊಂದು ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದು ಸುಮಾರು ೫೬ ಬಾಲಕಾರ್ಮಿಕರು ಮೃತಪಟ್ಟರು. ಆಗ ಪ್ರಖ್ಯಾತ ಆಂಗ್ಲ ದಿನ ಪತ್ರಿಕೆಯೊಂದು ಪ್ರಕಟಿಸಿದ ಹೆಡ್ ಲೈನ್ ಹೀಗಿತ್ತು.
"Sons of toil under tons of soil" (ಶ್ರಮಪಡುವ ಮಕ್ಕಳು ಮಣ್ಣಿನ ಕೆಳಗೆ!)

ಹಾಗೆಯೇ ಸನ್ಮಾನ್ಯ ವೈಎನ್ಕೆ ಯವರ ಪದಪುಂಜವೊಂದನ್ನು ಓದಿರಿ

Mary rose
sat on a pin
Mary rose !

ಇದರರ್ಥ ತಕ್ಷಣಕ್ಕೆ ಹೊಳೆಯಬಲ್ಲುದೆ ? ಒಂದು ಕ್ಲೂ ಕೊಡುತ್ತೇನೆ...’ಮೇರಿರೋಸ್’ ಹುಡುಗಿಯ ಹೆಸರು. ಉತ್ತರ ತಮಗೆ ಗೊತ್ತಿದೆ ಎಂದು ನಂಬುತ್ತೇನೆ..!!
ಉತ್ತರವನ್ನು ದಯಮಾಡಿ ಪ್ರತಿಕ್ರಯಿಸಿ.
ಹೀಗೆ ಕೆಲವೊಂದು ಪದಗಳು ಆಭಾಸಕ್ಕೀಡುಮಾಡಿದರೆ ಕೆಲವೊಂದು ಪದಗಳು ವಿಶಾಲ ಆರ್ಥವನ್ನು ಕೊಡುತ್ತವೆ.
ವಂದನೆಗಳೊಂದಿಗೆ......

18 comments:

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ... ಅರ್ಥವಾಯಿತು ಬಿಡಿ....
ನಿಜ ರೀ...
ಮುಂಚೆ ಏನೋ ಇದ್ದದ್ದು, ಈಗ ಏನೋ ಆಗಿಹೋಗುತ್ತದೆ...
ನನ್ನ ಸ್ವಂತ ಊರಿನ ಹೆಸರಿನ ಹಣೆಬರಹವು ಇದೆ ಆಗಿದೆ...
ಮುಂಚೆ "ಕುಂತಳ್ ನಗರ" ಇದ್ದದ್ದು ಈಗ "ಕುಡತಿನಿ" ಆಗಿದೆ...
ಇನ್ನು ಜನರ ಬಾಯಲ್ಲಿ ಅದು... "ಕುಡಿತಿನಿ" ಯಾಗಿದೆ...

Subrahmanya said...

ಹಾಗೇ ಬಿಸಿಲೆ ಅರಣ್ಯದಲ್ಲಿ ಸಿಗೋ ’ಎಡಕುಮೇರಿ’ ಗೊತ್ತಲ್ಲಾ...ಅದು ’ಎಡಕುಮರಿ’ ಶಿವು ಅವರೆ. ಎಡ ಭಾಗದಲ್ಲಿ ಬರೋ ಕಣಿವೆ ಅಂತ ಅಷ್ಟೆ !. ಮೇರಿ ರೋಸ್ ಬಗ್ಗೆ ಗೊತ್ತಾಯ್ತು ಅಂದ್ರಿ...ಆದ್ರೂ ಹೆಳ್ತೀನಿ...ಮೇರಿ ರೋಸ್ ಪಿನ್ ಮೇಲೆ ಕುಳಿತಳು ..( ಪಿನ್ ಚುಚ್ಚದೇ ಬಿಡುತ್ತದೆಯೇ ? ) ಮೇರಿ ರೋಸ್ ಎದ್ದಳು ...simple. ಇಲ್ಲಿ Rise ನ past ರೋಸ್ (Rose) ಆಗುತ್ತೆ.
ಧನ್ಯವಾದಗಳು ....

ಚುಕ್ಕಿಚಿತ್ತಾರ said...

ಚೆ೦ದದ ಬರಹ... ನಾನೂ ಕೆಲ ಉದಾಹರಣೆ ಕೊಡಲೇ...
ಅಕ್ಕಿಯು ಅಕ್ಕಿಯನ್ನು ತಿ೦ದಿತು..
ಅಕ್ಕಿಯು ಆರಿ ಹೋಯಿತು..
ಸರಸ್ವತೀ ಪುರದ ಹಪ್ಪಿನಲ್ಲಿ ಬಸ್ ಓಗುತ್ತಿತ್ತು...!!!!
ವ೦ದನೆಗಳು.

ಸೀತಾರಾಮ. ಕೆ. / SITARAM.K said...

ಅಭಾಸಗಳ ದೊಡ್ಡ ಪಟ್ಟಿಯೇ ತಯಾರಿ ಆಗಿಬಿಡುತ್ತೆ.
ಬೆ೦ದ ಕಾಳೂರು-ಬೆ೦ಗಳೂರು-ಬ್ಯಾ೦ಗ್ಲುರ್
ಹೊಸಪೇಟೆ-ಹೊಸ್ಪೆಟ್
ಬಳ್ಳಾರಿ- ಬೆಲ್ಲಾರಿ
ಬೆಳಗಾ೦ವಿ-ಬೆಲ್ಗಾಮ್
ಹುಬ್ಬಳ್ಳಿ -ಹುಬ್ಲಿ.
ಊರಷ್ಟೇ ಅಲ್ಲ ಹೆಸರುಗಳು ಸಹ ಆಗಿವೆ ತಾವು ಹೇಳಿದ೦ತೆ...

ಮನಮುಕ್ತಾ said...

ಚೆನ್ನಾಗಿದೆ.. ಪದಾಭಾಸದಬಗ್ಗೆ ಬರೆದದ್ದು.
ಕೆಲವೊಮ್ಮೆ ವಾಡಿಕೆಯಲ್ಲಿ ಆಭಾಸಗಳೆ ಸರಿ ಎ೦ಬ ಭಾಸವೂ ಆಗಿಬಿಡುತ್ತದೆ.
ಮುರುಡೇಶ್ವರ ಅಲ್ಲ, ಮೃಡೇಶ್ವರ ಎ೦ದು ಈಗಲೇ ತಿಳಿದಿದ್ದು.
ಧನ್ಯವಾದಗಳು.

Subrahmanya said...

ಚುಕ್ಕಿಚಿತ್ತಾರದವರೆ ...
ನೀವು ಹೇಳಿದ್ದೂ ಚೆನ್ನಾಗಿದೆ. ಇಲ್ಲೊಂದು ಕೈಲಾಸಂ ರವರ ಪದಮೋಡಿಯ ಝಲಕ್ ಇದೆ ಓದಿ
ಕೈಲಾಸಂ : ಏನಯ್ಯಾ ಆ ಪಾವಗಡದ ಗುಂಡೂರಾಯ i mean... in short 'PG' ಅವ್ನಿಗೆ ಯಾರ್ತಾನೆ ಬುದ್ಧಿ ಹೇಳೋಕಾಗುತ್ತೆ ಹೇಳು ? an ' I ' is required in between to make him a PIG ! thats all .. ಧನ್ಯವಾದಗಳು.


ಹಾಗೇ ಸೀತಾರಾಮರಿಗೂ, ಮನಮುಕ್ತರಿಗೂ ಮತ್ತು ನನ್ನ ತಾಣಕ್ಕೆ ಬಂದ ದಿನಕರ ಮೊಗೇರ ಅವರಿಗೂ ಧನ್ಯವಾದಗಳು

AntharangadaMaathugalu said...

ನಿಮ್ಮ ’ಪದಾಭಾಸ’ ಚೆನ್ನಾಗಿದೆ. ಹುಡುಕುತ್ತಾ ಹೋದರೆ ಸಾವಿರಾರು ಇಂತಹ ಪದಗಳು ಸಿಗುತ್ತವೆ. ಯಾವುದು ರೂಢಿಯಲ್ಲಿರತ್ತೋ ಅದೇ ನಿಜ ಎನ್ನುವ ಪರಿಸ್ಥಿತಿಯಾಗಿ ಹೋಗಿದೆ..... ’ಮೃಡೇಶ್ವರ’ ಅಂತ ಗೊತ್ತೇ ಇರಲಿಲ್ಲ. ಧನ್ಯವಾದಗಳು. ನನ್ನ ಅಂತರಂಗದ ಮಾತುಗಳನ್ನೋದಲು ಬನ್ನಿ.....

ಶ್ಯಾಮಲ

Subrahmanya said...

ಶ್ರೀಮತಿ ಶ್ಯಾಮಲಾ ರವರೆ,
ಪ್ರತಿಕ್ರಿಯಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಅಂತರಂಗವನ್ನೂ ಓದಿ ಬಂದೆ !!. ಚೆನ್ನಾಗಿದೆ. ಹೀಗೇ ಬರುತ್ತಿರಿ...

ಸವಿಗನಸು said...

ಮೃಡೇಶ್ವರ ಎ೦ದು ಈಗಲೇ ತಿಳಿದಿದ್ದು....
ಚೆ೦ದದ ಬರಹ...
ಧನ್ಯವಾದಗಳು...

Subrahmanya said...

ಸವಿಗನಸುರವರಿಗೆ ಸ್ವಾಗತ. ಧನ್ಯವಾದಗಳು

Anonymous said...

ಶಂಭುಲಿಂಗರೆ..ಉರ್ಫ್ .. ಸೀ.ಭಟ್ಟರೆ... ನಿಮ್ಮ ಬ್ಲೋಗ್ ಗೆ ಬಂದಿದ್ದು ನೀವು ನನಗೆ ಪ್ರತಿಕ್ರಿಯಿಸಿದ ಮೇಲೆ!ಇದೇನು 'ಶಂಭುಲಿಂಗನ ಪುರಾಣವೇ' ಅಂದ್ಕೊಂಡೆ.. ಆದ್ರೆ ಒಳ್ಳೇದಾಗಿ ಬರೀತೀರಿ. 'ಹ' ಕಾರಕ್ಕೆ 'ಅ' ಕಾರವನ್ನೋ ಇಲ್ಲ 'ಶ'ಕಾರಕ್ಕೆ 'ಸ' ಕಾರವನ್ನೋ ಉಪಯೋಗಿಸಿ ಆಗುವ ಆಭಾಸಗಳು ತುಂಬಾ ಇವೆ ಅಲ್ವಾ??
ಮೂರುಢೇಶ್ವರ ಅನ್ನೋದು ಮೃಢೇಶ್ವರ ದಿಂದ ಬಂದಿದೆ ಅನ್ನೋದು ತಿಳಿಸಿದ್ದಕ್ಕೆ ಧನ್ಯವಾದಗಳು.

Subrahmanya said...

ಶ್ರೀಮತಿ ಸುಮನಾ ರವರಿಗೆ ನನ್ನ ತಾಣಕ್ಕೆ ಸ್ವಾಗತ. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ...ಶಂಭುಲಿಂಗ ಎಂದು ಸಂಭೋದಿಸಿದ್ದು ಖುಷಿಯಾಯಿತು..ಧನ್ಯವಾದಗಳು.

Narayan Bhat said...

ಹೀಗೆಯೇ ವಿಶೇಷತೆಗಳನ್ನು ನಮಗೆ ಪರಿಚಯಿಸುತ್ತಾ ಹೋಗಿ....ಓದೋಕೆ ಚೆನ್ನಾಗಿರುತ್ತೆ.

Subrahmanya said...

ನಿಮ್ಮ ಪ್ರ‍ೋತ್ಸಾಹ ನಿರಂತರವಾಗಿರಲಿ . ಧನ್ಯವಾದಗಳು.

Karthik Kamanna said...

ನಮಸ್ಕಾರ ಶಂಭುಲಿಂಗ ಅವರೇ!
ಬಹಳ ಒಳ್ಳೇ ವಿಷಯ.. ಈ ಪದಾಭಾಸ ತಡೆಯೋಕೆ ಕನ್ನಡ ತಮ್ಮ "ಹುಸಿರು" ಎಂದು ಕೂಗುವ ಪುಂಡ ರಾಜಕೀಯ ನಾಯಕರಿಗೆ ಅಚ್ಚ ಕನ್ನಡ ಹೇಳಿಕೊಡಬೇಕು! ಲೇಖನ ಚೆನ್ನಾಗಿದೆ.

Subrahmanya said...

ಕಾರ್ತೀಕರಿಗೆ ಧನ್ಯವಾದಗಳು

ಸುಪ್ತವರ್ಣ said...

Mary rose sat on a pin so ಮೇರಿ ಎದ್ದಳು! ಈ ಅರ್ಥ ಸರಿಯಿದೆಯೇ?

Subrahmanya said...

ಸರಿಯಿದೆ ಸುಪ್ತವರ್ಣದವರೆ...ಇದು ಮಾನ್ಯ ವೈಎನ್ಕೆ ಯವರ ’ವಂಡರ್ ಕಣ್ಣು ’ ಲೇಖನ ದಲ್ಲಿ ದಶಕಗಳ ಹಿಂದೆ ಬಂದದ್ದು. ಹಾಗೇ ಓದಿಕೊಂಡರೆ ಅರ್ಥ ತಿಳಿಯುದಿಲ್ಲ. ಅದು ತುಂಬಾ ಸರಳ....ಪದಗಳ ಮೋಡಿಯ ಬಗ್ಗೆ ಉದಾಹರಿಸುತ್ತಾ ಮಾಡಿರುವ ಒಂದು ತಮಾಷೆ ಅಷ್ಟೆ. ಶಿವಪ್ರಕಾಶ್ ರ ಪ್ರತಿಕ್ರಿಯೆಯಲ್ಲಿ ವಿವ್ರಿಸಿದ್ದೇನೆ ದಯಮಾಡಿ ನೋಡಿ. ಧನ್ಯವಾದಗಳು.