ಪ್ರಸಾದ ಇಲ್ವೆ....?!! ಎಂದು ಮಾತ್ರ ಕೇಳ್ಬೇಡಿ....... ಇಲ್ಲಿ ಮೇಲಿನೆರೆಡು ವಿಚಾರಗಳ ಬಗ್ಗೆ ಮಾತ್ರ ಪ್ರಸ್ತಾಪಿಸುತ್ತಿದ್ದೇನೆ.....
ಸಾಮಾನ್ಯವಾಗಿ ದೇವಾಲಯಗಳಿಗೆ ಭೇಟಿಯಿತ್ತಾಗ ಮಂಗಳಾರತಿ ಮತ್ತು ತೀರ್ಥ ತೆಗೆದುಕೊಳ್ಳದೆ ಬರುವವರು ವಿರಳ. ಸುಮ್ಮನೆ ಕೈನೀಡಿ ತೆಗೆದುಕೊಳ್ಳುವವರೂ ಇದ್ದೇವೆ. ಹಾಗಾದರೆ ಅವುಗಳನ್ನೇಕೆ ತೆಗೆದುಕೊಳ್ಳಬೇಕು ? ಮಂಗಳಾರತಿಯೇ ಮೊದಲೇಕೆ ? ತೀರ್ಥ ನಂತರವೇಕೆ ? ಈ ಪ್ರಶ್ನೆಗಳಿಗೆ ಇಲ್ಲಿದೆ ನನ್ನದೊಂದು ವಿಚಾರ...
ದೇವರ ಶಿಲಾ ಮೂರ್ತಿಗೆ (ಅಥವಾ ಲಿಂಗಕ್ಕೆ) ಜಲಾಭಿಷೇಕ ಮಾಡುವುದು ನಿತ್ಯವಿಧಿಗಳಲ್ಲಿ ಒಂದು. ಅಂತಹ ದೇವರ ಮೂರ್ತಿ ಅಥವಾ ಲಿಂಗವನ್ನು ನಿರ್ದಿಷ್ಟ ಶಿಲೆಗಳಿಂದ ಮಾಡಿರುತ್ತಾರೆ. ಸಾಮಾನ್ಯವಾಗಿ ’ಸಾಲಿಗ್ರಾಮ ಶಿಲೆ’ , ’ಕೃಷ್ಣ ಶಿಲೆ’ ಹಾಗೂ ’ನವರತ್ನ ಶಿಲೆ’ ಗಳಿಂದ ಕೆತ್ತಲ್ಪಟ್ಟ ಮೂರ್ತಿಗಳಿರುತ್ತವೆ. (ಗ್ರಾನೈಟ್, ಬಳಪದ ಕಲ್ಲು, ಇನ್ನಿತರ ಶಿಲೆಗಳು ಶಾಸ್ತ್ರೋಕ್ತ ರೀತಿ ಪೂಜಾರ್ಹವಲ್ಲ!.) ಈ ಶಿಲೆಗಳು ಅಪೂರ್ವವಾದ ಶಕ್ತಿಯನ್ನು ಹೊಂದಿರುವುದರ ಜೊತೆಗೆ ಸಾಕಷ್ಟು ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಅಂತಹ ಶಿಲೆಯ ಮೇಲೆ ಬಿದ್ದ ನೀರು ತನ್ನ ಜೊತೆ ಎಲ್ಲಾ ಸತ್ವಗುಣಗಳನ್ನು ತಂದಿರುತ್ತದೆ. ಅಂತಹ ನೀರನ್ನು ಒಂದು ಪಾತ್ರೆಯಲ್ಲಿ ಹಿಡಿದಿಡಲಾಗುತ್ತದೆ. (ಇಲ್ಲಿ ಹಾಲು, ಮೊಸರು, ಇತ್ಯಾದಿಗಳಿಂದ ಕೂಡಿದ ಪಂಚಾಮೃತವನ್ನು ಪ್ರಸ್ತಾಪಿಸುವುದಿಲ್ಲ. ಕಾರಣ ಅದು ಶುಧ್ಧ ತೀರ್ಥವೇ ಅಲ್ಲ!) ನಂತರ ಅಭಿಷೇಕ ಹಾಗೂ ಮಂಗಳಾರತಿ ಸಮಯಗಳಲ್ಲಿ ಜೋರಾಗಿ ಘಂಟಾನಾದವನ್ನು ಮಾಡಲಾಗುತಿರುತ್ತದೆ. ಆ ನಾದದ ಮಾರ್ದನಿಯೊಂದಿಗೆ ಅದರಿಂದ ’ಅಯಾನಿಕ್’ ತರಂಗಗಳೂ ( Ionic waves ) ಸಹ ಉತ್ಪತ್ತಿಯಾಗುತ್ತದೆ. ಇಂತಹ ಅಯಾನ್ ಗಳು ಗರ್ಭಾಂಗಣದ ತುಂಬೆಲ್ಲಾ ಪ್ರವೇಶಿಸಿ ಹಿಡಿದಿಟ್ಟ ತೀರ್ಥದಲ್ಲೂ ವಿಲೀನವಾಗುತ್ತವೆ. "ಅಯಾನ್" ಗಳಿಗೆ ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುವ ಶಕ್ತಿಯು ಇದ್ದು ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಸತ್ವಗಳನ್ನು ಒದಗಿಸುತ್ತದೆ. ಇಂತಹ ಅಯಾನ್ ಯುಕ್ತ ಅಥವಾ ಖನಿಜಯುಕ್ತ ತೀರ್ಥಕ್ಕೆ ಅಂತಿಮವಾಗಿ ತುಳಸಿಯನ್ನು ಸೇರಿಸಲಾಗುತ್ತದೆ. ತುಳಸಿಗೆ ಆಯುರ್ವೇದದಲ್ಲಿ ಎಂತಹ ಪ್ರಮುಖ ಸ್ಥಾನವಿದೆ ಎಂಬುದು ತಿಳಿದಿರುವ ವಿಚಾರವೇ. ಇವುಗಳೆಲ್ಲದರಿಂದ ಕೂಡಿದ ಜಲ ಕೇವಲ ಜಲವಾಗದೇ ಔಷಧೀಯ ಗುಣಗಳುಳ್ಳ ತೀರ್ಥವಾಗುತ್ತದೆ. (ಇನ್ನು ಪಚ್ಚಕರ್ಪೂರ, ಕೇಸರಿ ಮುಂತಾದವುಗಳನ್ನು ತೀರ್ಥಕ್ಕೆ ಬೆರೆಸುತ್ತಾರೆ. ಅದೇನು ಅಷ್ಟು ಉಚಿತವಲ್ಲ. ಇಂದು ಉತ್ತಮ ಪಚ್ಚಕರ್ಪೂರ, ಕೇಸರಿ ದೊರೆಯುವುದೇ ದುರ್ಲಭವಾಗಿದೆಯಲ್ಲಾ!).
ಇನ್ನು ಮಂಗಳಾರತಿಯ ವಿಷಯಕ್ಕೆ ಬಂದರೆ ತುಪ್ಪದಲ್ಲಿ ಅದ್ದಿದ(ನೆನೆಸಿದ) ಹತ್ತಿಯಿಂದ ಮಾಡಿದ
( ನಿರ್ಧಿಷ್ಟವಾಗಿ ಹೇಳಿದ್ದೇನೆ....ಗಮನಿಸಿ... ’ಕರ್ಪೂರ’ ಇಂದು ಇಂಗಾಲ ಮತ್ತು ವ್ಯಾಕ್ಸ್ ಮಯವಾಗಿಹೋಗಿದೆ.) ಬತ್ತಿಯನ್ನು ಹಚ್ಚಿ ಬೆಳಗುವುದರಿಂದ...... ಆರತಿ ಮಾಡುವುದನ್ನು ನೋಡುವುದರಿಂದ ಏಕಾಗ್ರತೆ ಸಿಧ್ದಿಸುವುದಲ್ಲದೆ ಅಂತಹ ಆರತಿಯ ಮೇಲೆ ನಮ್ಮ ಬಲ ಅಂಗೈಯನ್ನು ಸ್ವಲ್ಪಹೊತ್ತು ಹಿಡಿದರೆ ಶಾಖ ಅಂಗೈ ಮೂಲಕ ಪ್ರವೇಶವಾಗಿ ’ನರವ್ಯೂಹ’ ಹೆಚ್ಚು ಕ್ರಿಯಾಶೀಲವಾಗುತ್ತದೆ. ಜೊತೆಗೆ ಅಂಗೈನಲ್ಲಿ ಇರಬಹುದಾದ ಎಲ್ಲಾ ಕ್ರಿಮಿಕೀಟಗಳು ನಾಶವಾಗುತ್ತದೆ. ಈ ರೀತಿ ಶುಧ್ದ ಅಂಗೈನಿಂದ ಮೇಲೆ ಹೇಳಿದ ತೀರ್ಥವನ್ನು ತೆಗೆದುಕೊಂಡು ಕುಡಿದರೆ ನಮ್ಮ ದೇಹಕ್ಕೆ ಆರೋಗ್ಯ ಲಭಿಸುತ್ತದೆಯಲ್ಲವೆ!!? ಇನ್ನು ಮೂರು ಬಾರಿ ತೆಗೆದುಕೊಳ್ಳುವುದು ಒಂದು ಬಾರಿ ತೆಗೆದುಕೊಳ್ಳುವುದೆಲ್ಲಾ ಶಾಸ್ತ್ರಾಧಾರಿತ ವಿಚಾರ. ’ಅಕಾಲ ಮೃತ್ಯುಹರಣಂ’ ಎಂಬ ಸೂಕ್ತ ಹೇಳಿ ತೆಗೆದುಕೊಳ್ಳಲೂ ಬಹುದು. ಸೂಕ್ತ ಹೇಳಿದಾಕ್ಷಣ ಅಕಾಲ ಮೃತ್ಯು ಪರಿಹಾರವಾಗುತ್ತದೆಯೆ? ಆತ್ಮಶುಧ್ದಿಯಿರಬೇಕಷ್ಟೆ !! . ಆದ್ದರಿಂದ ಮೊದಲು ಆರತಿ ನಂತರ ತೀರ್ಥ ಸರಿಯಾದ ಕ್ರಮ. ಇಂದಿನ ದೇವಾಲಯಗಳು ಹೈಟೆಕ್ ( ಟೈಲ್ಸ್, ಎಗ್ಸಾಸ್ಟ್ ಫ಼್ಯಾನ್ , ಇತ್ಯಾದಿ ..!) ವ್ಯವಸ್ಥೆಗಳನ್ನು ಹೊಂದಿರುವುದರಿಂದ ಮೇಲಿನ ಪಾವಿತ್ರ್ಯತೆಯನ್ನು ನೀರಿಕ್ಷಿಸಿವುದು ತಪ್ಪಾಗಬಹುದು....
..................................................................................................................................
ವಂದನೆಗಳೊಂದಿಗೆ
24 comments:
ನಿಮ್ಮ ಬರಹ ಮಾಹಿತಿಪೂರ್ಣವಾಗಿದೆ.
ಎಷ್ಟೋ ಸಲ ಕ್ರಿಯೆಯ ಹಿ೦ದಿನ ಉದ್ದೇಶ ಅರ್ಥವಾಗಿರುವುದಿಲ್ಲ.
ವ೦ದನೆಗಳು.
tumbaa chennagi tiLisikottideeri..
dhanyavaadagaLu
ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ. ಮು೦ದೆಯೂ ನಿಮ್ಮಿ೦ದ ಈ ರೀತಿಯ ಮಾಹಿತಿಗಳು ನಮ್ಮನ್ನು ತಲುಪುತ್ತಿರಲಿ.ಧನ್ಯವಾದಗಳು.
राज पिचले जन्म का ದ ಬದಲು राज अगले जन्म का ಆಗಿದ್ದರೆ ಎಲ್ಲಾರೂ ಕೆಲಸ ಎಲ್ಲಾ ಬಿಟ್ಟು ಮು೦ದಿನ ಜನ್ಮಕ್ಕೆ ಪ್ಲಾನ್ ಹಾಕ್ತಾ ಕೂರ್ತಿದ್ರೇನೊ.ಸಧ್ಯ ಹಿ೦ದಿನ ಜನ್ಮದ್ದಷ್ಟೆ ತೋರಿಸುತ್ತಿದ್ದಾರೆ.
ಚೆನ್ನಾಗಿದೆ ಖೊನೆಖಿಡಿ.
ಚುಕ್ಕಿಚಿತ್ತಾರದವರಿಗೂ , ’ಮನಸು’ ಮಾಡಿದವರಿಗೂ..ಹಾಗೂ ಮನಮುಕ್ತರಿಗೂ ಶಂಭುಲಿಂಗನ ಧನ್ಯವಾದಗಳು. ಪ್ರೋತ್ಸಾಹ ಹೀಗೇ ಇರಲಿ.
olle maahiti kottiddeeri.nanagu nambike iralilla e sampradaaya haagu aacharanegala bagge:) ega avugala mahatwa gottytu:)
ಗೌತಮ್ ಹಗಡೆಯವರಿಗೆ ಸ್ವಾಗತ. ವಿಜಯಶ್ರೀ ಯವರು ಹೇಳಿದಂತೆ ಕ್ರಿಯೆಗಳ ಹಿಂದಿನ ಅರ್ಥ ಕೆಲವೊಮ್ಮೆ ತಿಳಿದಿರುವುದಿಲ್ಲ. ಮೆಚ್ಚಿದ್ದಕ್ಕೆ ಧನ್ಯ್ವಾದಗಳು. ಸದಾ ಬರುತ್ತಿರಿ.
ಮಾಹಿತಿ ಚೆನ್ನಾಗಿದೆ ಭಟ್ರೇ! ಉಳಿದವರ pseudo science theory ಯನ್ನೂ ನೀವು ಅಲ್ಲಗಳೆಯುತ್ತೀರಿ ಎಂದು ನಂಬಿದ್ದೇನೆ! ಹಾಗಾಗಿ ನಿಮ್ಮ ಬರಹಕ್ಕೆ ತೂಕ ಬಂದಿದೆ.
ಸುಪ್ತವರ್ಣ ದವರೇ...
ಪ್ರಾಚೀನ ದೇವಾಲಯಗಳು ನಿರ್ಮಾಣವಾಗಿರುವುದೇ pure science ( ಇದು ಅನೇಕ ಶಾಖೆ ಗಳನ್ನು ಒಳಗೊಂಡಿದೆ ) ನ ಆಧಾರದಲ್ಲಿ. ನಮ್ಮ ಪುರಾಣೇತಿಹಾಸಗಳೂ ಮತ್ತು ಸಂಸ್ಕೃತಿಯ ದ್ಯೋತಕವಾಗಿ. ಇಂದು ದೇವಾಲಯಗಳು ಕೇವಲ ಸಂಪ್ರದಾಯಗಳ ಮತ್ತು ವಾಣಿಜ್ಯೀಕರಣದ ಮೂಸೆ ಯಾಗಿರುವುದರಿಂದ ರಾಜ-ಮಹಾರಾಜರುಗಳ science theory ಗಳು ಮುಚ್ಚಿಹೋಗಿವೆ. ಧನ್ಯವಾದಗಳು.
ಮಾಹಿತಿಯುಕ್ತ ಲೇಖನ.....
ಧನ್ಯವಾದಗಳು...
nimma lekhanada vasthu vishaya sogasaagide sir..hassandavaru nimma parichaya aagali hneshakumar@gmail.com nimma mail id kodi sir
ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ.ಧನ್ಯವಾದಗಳು.
ಈಶಕುಮಾರ್ ರವರಿಗೆ ಸ್ವಾಗತ. ಹೀಗೇ ಬರ್ತಾ ಇರಿ. ಸೀತಾರಾಮ ಗುರುಗಳಿಗೂ ನನ್ನ ಧನ್ಯವಾದಗಳು.
ತುಂಬಾ ಸುಂದರವಾಗಿ, ಸರಳವಾಗಿ ನಮ್ಮ ಸಂಪ್ರದಾಯವನ್ನು ವೈಜ್ಞಾನಿಕತೆಯ ಆಧಾರದ ಮೇಲೆ ವಿವರಿಸಿದ್ದೀರಿ. ಧನ್ಯವಾದಗಳು.
ಶ್ರೀಮತಿ ತೇಜಸ್ವಿನಿ ಹೆಗಡೆಯವರಿಗೆ ಧನ್ಯವಾದಗಳು.
ನಮಸ್ತೆ, ನಿಮ್ ಬ್ಲಾಗ್ ಗೆ ನನ್ನ ಮೊದಲ ಭೇಟಿ.
ಬರೆದಿರುವ ಮಾಹಿತಿ ಬಹಳ ಉಪಯುಕ್ತವಾಗಿದೆ. ಇಂತದ್ದನ್ನೆಲ್ಲಾ ತಿಳಿದುಕೊಂಡಿರಬೇಕು ಎಲ್ಲರೂ. ಇಲ್ಲದಿದ್ದರೆ ಅರ್ಥವಿಲ್ಲದ ಆಚರಣೆಗಳಾಗಿಬಿಡುತ್ತವೆ.
ಧನ್ಯವಾದಗಳು.
’ವಿಕಾಸವಾದ’ ದವರಿಗೂ ಮತ್ತು ’ಆನಂದ’ ರಿಗೂ ಧನ್ಯವಾದಗಳು
ಮೌಡ್ಯವನ್ನು ಹೋಗಲಾಡಿಸಬಲ್ಲ ಲೇಖನ.
ತುಂಬಾ ಚೆನ್ನಾಗಿದೆ.
ವೆಂಕಟಕೃಷ್ಣ ರವರಿಗೆ ನನ್ನ ಬ್ಲಾಗ್ ಗೆ ಸ್ವಾಗತ....ಮತ್ತು ಮೆಚ್ಚಿದ್ದಕ್ಕೆ ಧನ್ಯವಾದಗಳು
ಮಾಹಿತಿಯುಕ್ತ ಲೇಖನ, ಧನ್ಯವಾದಗಳು.
ನಮಸ್ತೆ, ಸಂಪ್ರದಾಯದ ಹಿಂದೆ ಇರುವ ವೈಜ್ಞಾನಿಕತೆಯನ್ನು ವಿವರಿಸುವ ಉತ್ತಮ ಪ್ರಯತ್ನ/ಉದ್ದೇಶ ಇಲ್ಲಿ ಕಾಣುತ್ತಿದ್ದೇನೆ. ಆದರೆ ಇದನ್ನು ಓದುವಾಗ ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ, ಮುಕ್ತವಾಗಿ ಹೇಳುತ್ತಿದ್ದೇನೆ, ತಪ್ಪು ತಿಳಿಯಬೇಡಿ. ವಿವರಗಳಿಗಾಗಿ ನನ್ನ ಬ್ಲಾಗ್ ನೋಡಿ ಎಂದು ವಿನಂತಿ.
“ಮಂಗಳಾರತಿ ಮತ್ತು ತೀರ್ಥದ ಹಿಂದೆ ಇರುವ ವಿಜ್ಞಾನ”
http://krishnashastry.blogspot.com/2011/11/mangalarati-mattu-teertha.html
ಓದಿದರೆ ಸಂತೋಷ, ಪ್ರತಿಕ್ರಿಯಿಸಿದರೆ ಇನ್ನೂ ಹೆಚ್ಚಿನ ಸಂತೋಷ. ಸಾಧ್ಯವಾದರೆ ನೇರವಾಗಿ ಬ್ಲಾಗಿನಲ್ಲಿಯೇ ಪ್ರತಿಕ್ರಿಯಿಸಿ ಎಂದು ವಿನಂತಿ.
ಭಟ್ಟರು ಉತ್ತಮವಾಗಿ ವಿವರಿಸಿದ್ದಾರೆ.
ಈ ಮನುಷ್ಯನ ಉದ್ದಟತನವ ಗಮನಿಸಿ:- krishnashastry.blogspot.com/2011/11/mangalarati-mattu-teertha.html
ಇಂತಹವರೂ ನಮ್ಮ ಹಿಂದೂ ಸಮಾಜದಲ್ಲಿದ್ದಾರೆ! ಇವನಾರೋ ಬ್ರಾಹ್ಮಣನೇ ಇರಬೇಕು. ಹೆಚ್ಚಿನ ಬ್ರಾಹ್ಮಣರು, ಅವರ ಸ್ಟೇಟಸ್ ಬಿಡಲಾರರು, ಜೊತೆಗೆ ಹಿಂದಿನಿಂದ ಚೂರಿಯಿಕ್ಕುವವರು. ಈ ಮನುಷ್ಯನೇಕೆ, ತನ್ನ ಬ್ರಾಹ್ಮಣತ್ವ ಬಿಟ್ಟು, ಹೊರಜಗತ್ತಿಗೆ ಘೋಷಣೆ ಬಿಗಿಯಬಾರದು? ಎಲ್ಲ ಅಹಂಕಾರದ ಮದ. ಲೋಕ ಕಾಣಿಸಲು ಹೆಚ್ಚು ಸಮಯ ಬೇಕಿಲ್ಲದವನೇ ಎಂದೇಳಲು ಸಂಶಯವಿಲ್ಲ.
Good info......
ಕೃಷ್ಣಶಾಸ್ರ್ತಿಗಳೆ,
ಬಿಡುವಿಲ್ಲದ ಕೆಲಸಗಳಿಂದಾಗಿ ಬ್ಲಾಗಿನ ಕಡೆ ಬರಲಾಗಿರಲಿಲ್ಲ, ಕ್ಷಮಿಸಿ. ನಿಮ್ಮ ಕಾಮೆಂಟನ್ನು ತಡವಾಗಿ ಪ್ರಕಟಿಸುತ್ತಿದ್ದೇನೆ. ನಿಮ್ಮ ಬ್ಲಾಗಿನಲ್ಲೇ ನಾನೂ ಪ್ರತಿಕ್ರಿಯೆ ಬರೆದಿದ್ದೇನೆ. ನಿಮಗೆ ಧನ್ಯವಾದಗಳು.
ರೋಹಿತ್,
ನಿಮಗೂ ಧನ್ಯವಾದಗಳು.
Post a Comment