" ಗುಂಡಿನ ಮತ್ತೇ ಗಮ್ಮತ್ತು " ಅಂತ ಕೇಳೀದೀವಿ...ಇದ್ಯಾವುದು "ಗುಂಡ್ಯ ಗಮ್ಮತ್ತು " ಅಂತೀರಾ
...ಹಾಗಾದ್ರೆ ಮುಂದೆ ಓದಿ....
ಪಶ್ಚಿಮ ಘಟ್ಟದ ಬಿಸಿಲೆ ಅರಣ್ಯದಲ್ಲಿ ಹರಿಯುವ ಆ ಸುಂದರ ನದಿಯನ್ನು ನೋಡುತ್ತಿದ್ದ ನನಗೆ ( i mean ಶಂಭುಲಿಂಗ !) ಅಚಾನಕ್ ಆಗಿ ಘನ ಸರ್ಕಾರದ ’ ಶಾಕ್ ’ ಮಂತ್ರಿಗಳ ದರ್ಶನವಾಯಿತು.
ಇಂತಹ ಅವಕಾಶವನ್ನು ನಾನು ಬಿಡಲಿಲ್ಲ...ಮಾತಿಗೆಳೆದೇ ಬಿಟ್ಟೆ ’ಶಾಖಾ’ನುಭಾವರನ್ನು....
" ..ಈ ಗುಂಡ್ಯ ಜಲವಿದ್ಯುತ್ ಯೋಜನೆಯೇ ಬೇಕಾ ಸಾರ್ ನಿಮಗೆ ..? ಬೇರೆಲ್ಲೂ ಉತ್ಪಾದನೆ ಮಾಡೋಕಾಗಲ್ವೆ...ನೋಡಿ ಸರ್ ಇಲ್ಲಿ ಸ್ವಚ್ಚವಾಗಿ ಹರಿಯುತ್ತಿರೋ ನದಿಯನ್ನ..ಇದು ’ಕುಮಾರಧಾರ’ ಅಂತ..ಈ ನದಿ ಹರಿದು ಬರೋದು ಅಮೂಲ್ಯ ಖನಿಜ ಸಂಪತ್ತು ಹಾಗೂ ಅತ್ಯಮೂಲ್ಯ ಆಯುರ್ವೇದ ಔಷಧೀಯ ಸಸ್ಯಗಳಿರುವ ಸುಂದರ ಅರಣ್ಯದಿಂದ..ನಿಮಗೆ ಗೊತ್ತಾ ಸಾರ್ ..ಈ ನದಿಯಲ್ಲಿ ಮಿಂದರೆ ಚರ್ಮರೋಗಗಳೂ ಕಮ್ಮಿಯಾಗುತ್ತೆ..ಇಲ್ಲಿ ವಿದ್ಯುತ್ ಯೋಜನೆಗೆ ನೀವು ಅಣೆಕಟ್ಟು ನಿರ್ಮಿಸಿದರೆ ಈ ನದಿ ಬತ್ತಿ ಹೋಗುತ್ತೆ ..ಮತ್ತೆ ಹಿನ್ನೀರು ಅರಣ್ಯದೊಳಗೆ ನುಗ್ಗಿದರೆ ಪ್ರಾಣಿ..ಪಕ್ಷಿಗಳು ಸತ್ತು ಹೋಗುತ್ವೆ..ನೂರಾರು ಹೆಕ್ಟೇರ್ ಕಾಡು ನಾಶ ಆಗುತ್ತೆ..ಅಪಾರ ಸಸ್ಯಸಂಪತ್ತೂ ಮುಳುಗಿಹೋಗುತ್ತೆ....ಬೇಕಾ ಸಾರ್ ಇದು ? "
"ಹಿನ್ನೀರು.. ಡಾಲರ್ಸ್ ಕಾಲೋನಿತನಕ ಏನು ಬರೋದಿಲ್ವಲ್ಲ...ಬಿಡಯ್ಯಾ ಮತ್ತೆ..!!"
" ಹೀಗೆ ಹೇಳ್ದ್ರೆ ಹೇಗೆ ಸರ್... ಈಗಾಗ್ಲೆ ಆಹಾರ ಸಿಗ್ದೆ ಆನೆಗಳೆಲ್ಲಾ ಊರೊಳಗೆ ನುಗ್ಗಿ ದಾಂಧಲೆ ಮಾಡ್ತಿವೆ. ನೂರಾರು ಜೀವಗಳೂ ಹೋಗಿವೆ. ಇನ್ನು ಕಾಡೂ ಕಮ್ಮಿಯಾದ್ರೆ ಹುಲಿ-ಚಿರತೆಗಳೂ ಊರಿಗೆ ಬರುತ್ವೆ ..ಬದ್ಕೊಧ್ಹೇಗೆ ಹೇಳಿ..ಅದೂ ಅಲ್ದೆ ಯೋಜನೆ ಹೆಸ್ರಲ್ಲಿ ಅಮೂಲ್ಯ ಮರಗಳ ಲೂಟಿಯೂ ನೆಡೆಯುತ್ತೆ..ಕಳ್ಳರಿಗೆ ದಾರಿ ಮಾಡಿಕೊಟ್ಟ ಹಾಗೆ ಇದು...ಯೋಜನೆ ಅನುಷ್ಟಾನಕ್ಕೂ ಕಾಡು ನಾಶವಾಗುತ್ತೆ ಯೋಜನೆಯ ನಂತರವೂ ನಾಶವಾಗುತ್ತೆ... ನೀವು ಯೋಜನೆ ಕೈ ಬಿಡದಿದ್ರೆ ನಾನು ಇಲ್ಲಿಯ M.L.A. ಸಾಹೇಬ್ರ ಜೊತೆ ಧರಣಿ ಮಾಡ್ತಿನಿ.."
" ಮಾಡಯ್ಯ....ನನಗೂ ಸ್ವಲ್ಪ ಪ್ರಚಾರ ಸಿಗುತ್ತೆ.. ಇಷ್ಟಕ್ಕೂ ಆ M.L.A ನೂ ನಮ್ ಪಾರ್ಟೀನೇ ತಿಳ್ಕೊ..!!"
"ಆದ್ರೂ ಸರ್...ನೀವು ಯೋಚನೆ ಮಾಡ್ಬೇಕು..ಈಗಾಗ್ಲೆ ಜನರ ಪರವಾಗಿ "ಜೈರಾಮ್ ರಮೇಶ್" "ಬಹುಗುಣ" " ಶ್ರೀ ವಿದ್ಯಾಪ್ರಸನ್ನ ತೀರ್ಥರು " ಮಲೆನಾಡು ಹೋರಾಟ ಸಮಿತಿಯವರು ಎಲ್ರೂ ವಿರೋಧ ಮಾಡ್ತಿದ್ದಾರೆ...ಮೇಧಾಪಾಟ್ಕರ್ ಕೂಡ ಬರೋರಿದ್ದಾರೆ... ಬೇರೇ ಎಲ್ಲಾದ್ರು ವಿದ್ಯುತ್ ಉತ್ಪಾದಿಸಿ...ಇಲ್ಲಿಯ ಪ್ರಕೃತಿ ಅತ್ಯಮೂಲ್ಯ ...ನಾವು-ನೀವು ಇದ್ನೆಲ್ಲಾ ಸೃಷ್ಟಿಸೋಕೆ ಆಗೋಲ್ಲ ಸರ್... "
" ಸೃಷ್ಟಿ ಮಾಡೋದು ಬ್ರಹ್ಮ ಅಲ್ವೇನಯ್ಯಾ.....ಇನ್ನೊಂದ್ಸಲ ಎಲ್ಲಾ ಸೃಷ್ಟಿಸ್ತಾನೆ ಬಿಡು !! "
"ನಮ್ಮದು ಪ್ರಜಾಪ್ರಭುತ್ವ ಸಾರ್...ಅಲ್ಲಿನ ಸ್ಥಳೀಯರ ನಿರ್ಧಾರಕ್ಕೆ ಬೆಲೆ ಕೊಡ್ಬೇಕು ...ಅವರಿಗೇ ಬೇಡವಾದ್ದು ನಿಮಗ್ಯಾಕೆ ? ಕುಕ್ಕೆ ಸುಬ್ರಹ್ಮಣ್ಯ, ಮಾರನಹಳ್ಳಿ, ಬಿಸಲೆ ಅರಣ್ಯದೊಳಗಿನ ಊರುಗಳು, ಇನ್ನೂ ಸಾಕಷ್ಟು ಪ್ರದೇಶಗಳು ಈ ಯೋಜನೆಯಿಂದ ಭಾದಿತವಾಗುತ್ತೆ ...ಇನ್ನಷ್ಟು ಪರಿಸರ ಮಾಲಿನ್ಯ ಉಂಟಾಗುತ್ತೆ...ತಾಪ ಇನ್ನಷ್ಟು ಹೆಚ್ಚಾಗುತ್ತೆ...ಚುನಾವಣೆ ಸಮಯದಲ್ಲಿ ಯಾರಿಂದಲೋ ದುಡ್ಡು ತಗೊಂಡು ಅವರ ಆಸೆ ಪೂರೈಸೋದಕ್ಕೆ ಪರಿಸರ ಬಲಿ ಕೊಡೋದು ನ್ಯಾಯಾನಾ ಸರ್ ? "
" ಚುನಾವಣೆ ಬಂದಾಗ ನೀನು ಬಾರಯ್ಯಾ....ನಿನಗೂ ಕೊಡ್ತೀನಿ...ಓಟು ಹಾಕೋದಷ್ಟೇ ನಿನ್ನ ಕೆಲಸ..ಉಳಿದದ್ದು ಸರ್ಕಾರದ ಕೆಲಸ...ಸುಮ್ನೇ ಹೋಗಯ್ಯಾ...!!"
ನನ್ನ ಕೊನೆ ಪ್ರಯತ್ನ ....
" ಸಾರ್ ಹೇಗೂ 2012 ಕ್ಕೆ ಜಗತ್ಪ್ರಳಯ ಆಗುತ್ತೆ...ನನಗೆ ಪಕ್ಕಾ ಮಾಹಿತಿ ಬಂದಿದೆ ! ಯಾರೂ ಇರೋಲ್ಲ ಅಂದಮೇಲೆ ಈ ಯೋಜನೆ ಯಾಕೆ ಸರ್....ನಿಮಗೆ ಬೇಕಾಗಿರೋದು ಈ ಯೋಜನೆಯಿಂದ ಬರೋ ಹಣ ತಾನೆ...ಒಂದು ಕೆಲಸ ಮಾಡಿ..ಈ ಯೋಜನೆಯ ಪೂರ್ತಿ ಹಣವನ್ನು ನೀವು ಮತ್ತೆ ನಿಮ್ಮ "ಕಡೆಯವರು" ಹಂಚಿಕೊಂಡುಬಿಡಿ...ನಾವೇನೂ ಕೇಳೋಕೆ ಬರೋದಿಲ್ಲ.. ಬೇಕಾದ್ರೆ ನೆರೆ ಪರಿಹಾರಕ್ಕೆ ದೇಣಿಗೆ ಎತ್ತಿ ಕೊಟ್ವಲ್ಲಾ..ಹಾಗೂ ಕೊಟ್ಟು ಬಿಡ್ತೀವಿ...ಆದ್ರೆ ದಯವಿಟ್ಟು ಈ ಮೂಕ ಪ್ರಾಣಿಗಳನ್ನ, ಸ್ವಚ್ಚಂದವಾಗಿ ಹಾರಾಡ್ತಿರೋ ಹಕ್ಕಿಗಳನ್ನ, ಸದಾ ನಗುತ್ತಿರೋ ಸಸ್ಯಗಳನ್ನ, ಹಸಿರು ತುಂಬಿದಕಾಡನ್ನು. ಈ ನದಿ, ಬೆಟ್ಟ, ಈ ಸಮೃದ್ದ ಪರಿಸರವನ್ನ ಅವುಗಳಿಗೋಸ್ಕರ... ಬಿಟ್ಟುಬಿಡಿ ಸಾರ್...ಬೇಕಾದ್ರೆ ನನ್ನ ಬಲಿ ತಗೊಳ್ಳಿ ಸಾರ್ .."
ನನ್ನ ಮಾತು ಅವರ ಕಿವಿಗೆ ಬೀಳಲೇ ಇಲ್ಲ....ತಮ್ಮ ಮೋಟಾರು ಹತ್ತಿ ಬುರ್ ಎಂದರು ....!!
....................................................................................................................................................................
ಖೊನೆ ಖಿಡಿ :
ಅಲ್ಲಿ ಬೀಜರಹಿತ ಹಣ್ಣುಗಳ ಸೇವನೆಯ ಪರಿಣಾಮಗಳ ಬಗ್ಗೆ ವಿಚಾರ ಸಂಕಿರಣ ನೆಡೆಯುತ್ತಿತ್ತು....ಅಲ್ಲಿ ಶಂಭುಲಿಂಗನೂ ಇದ್ದ !
ಅಲ್ಲೇ ಪ್ರದರ್ಶನಕ್ಕಿಟ್ಟಿದ್ದ ಹಲಸಿನ ಹಣ್ಣೊಂದನ್ನು ತೆಗೆದು ಸುಲಿದೇಬಿಟ್ಟ...ಅತ್ಯಾಶ್ಚರ್ಯದಿಂದ ಅಧಿಕಾರಿಯನ್ನು ಕೇಳಿದ...
ಶಂಭುಲಿಂಗ : ಇದೇನ್ ಬುದ್ದಿ...ಈ ಅಣ್ಣಾಗೇ ಬೀಜ್ವೇ ಇಲ್ಲಾ....
ಅಧಿಕಾರಿ : ಅದು ಸೀಡ್ಲೆಸ್ ಹಣ್ಣು ಕಣಪ್ಪಾ...ಈವಾಗೆಲ್ಲಾ ಹೀಗೇ ಹಣ್ಣುಗಳು ಬರೋದು...
ಶಂಭುಲಿಂಗ : ಅಂಗಾದ್ರೆ... ಇನ್ಮುಂದೆ ಮನುಸ್ರು ಇಂಗೇ ಉಟ್ತಾರಾ ಬುದ್ದಿ ...!!!!!!??
ಸಿವನೇ ಸಂಭುಲಿಂಗ :)
ವಂದನೆಗಳೊಂದಿಗೆ ....................
18 comments:
ಚೆನ್ನಾಗಿದೆ ಭಟ್ ಅವರೆ ಗುಂಡ್ಯ ಜಲವಿದ್ಯುತ್ ಯೋಜನೆಯಿಂದ ನಾಶವಾಗುವ ಪರಿಸರವನ್ನುಳಿಸಲು ನಿಮ್ಮ ಶಂಭುಲಿಂಗ ಮಾಡಿರುವ ಉಪಾಯ!
ಚಿ೦ತನೆಗೆ ಯೋಗ್ಯ ಲೇಖನ..
ಪಶ್ಚಿಮ ಘಟ್ಟ ನಿಜ ಅ೦ದರೆ ಶ್ರೀಗ೦ಧದ ಬೀಡಾಗಿತ್ತು..
ಈಗ ಹುಡುಕಿದರೂ ಬೇರೂ ಸಿಗದಷ್ಟು ಬರಡುಗೊಳಿಸಿದ್ದಾರೆ..
ಎಲ್ಲೆಲ್ಲೂ ಸ್ವಾರ್ಥ.... ಓಟಿಗಾಗಿ ನೋಟು... ಅಷ್ಟೆ...
ಹಾಸ್ಯ ಲೇಪನದಲ್ಲಿ ಗ೦ಭೀರ ವಿಷಯವೊ೦ದನ್ನು ಪ್ರಸ್ತಾವಿಸಿ ಪರಿಸರ ಕಾಳಜಿಯ ಸ೦ದೇಶ ಕೊಟ್ಟಿದ್ದಿರಾ! ಮೂರ್ಖ ದೊರ್ಎಗಳು ಯೆಚ್ಚೆತ್ತಾರೇಯೆ ಇನ್ನಾದರೂ!!.
ಶ೦ಭುಲಿ೦ಗನ ಖಿಡಿ ಸಕತ್ ಎ೦ದಿನ೦ತೇ.
ಚೆ೦ದದ ಬರಹ.
ತು೦ಬಾ ಒಳ್ಳೆಯ ಲೇಖನ...
ಪರಿಸರ ರಕ್ಷಣೆಯ ಬಗ್ಗೆ ಜನ ಎಷ್ಟೇ ಪ್ರಯತ್ನಿಸಿದರೂ ಗದ್ದುಗೆಯಲ್ಲಿನ ಜನಕ್ಕೆ, ಜನರ ಕೂಗು ಕೇಳಲಾರದು, ಪರಿಸರನಾಶದಿ೦ದಾಗುವ ಹಾನಿ ಕಾಣಲಾರದು...ಅಲ್ಲವೆ?
tumba chennagide, haasya baritavaagi vishesha soochaneyannu tiLisiddeeri.
dhanyavaadagaLu
ಗುಂಡ್ಯದ ಕುಟುಕು ಚೆನ್ನಾಗಿದೆ. ಆದರೆ ದಪ್ಪ ಚರ್ಮದವರಿಗೆ ಇದು ಅರ್ಥವಾಗುವದೆ?
ಒಳ್ಳೆಯ ಅರ್ಥ ಪೂರ್ಣ ಲೇಖನ.....ತುಂಬ ಚೆನ್ನಾಗಿ ಇದೆ.... ಬಿಸಿಲೆ ಘಾಟ್ ನಲ್ಲಿ ಚಾರಣಕ್ಕೆ ಹೋದಾಗ ನಾವು ಇದಕ್ಕೆ ಬೀಟಿ ನೀಡಿದ್ದೆವು.....ಮನುಷ್ಯನ ಸ್ವಾರ್ಥ needs ಗೋಸ್ಕರ ಎಷ್ಟು ಸಂಪತ್ತುಗಳನ್ನು ಹಾಳು ಮಾಡಲು ಹೊರಟಿದ್ದೇವೆ ಅಲ್ವ....
ನಿಜವಾಗಿ ಒಪ್ಪಲೇಬೇಕಾದ ಖುಷಿಕೊಡುವ ಲೇಖನ, ಬರೆಯಿರಿ ಮುಂದಕ್ಕೆ ...ಸಿವನೇ ಸಂಭುಲಿಂಗ
Sivane sambhulinga... Naayi baala donke.. Yesht helidroo ashte!! :-)
ಸುಬ್ರಹ್ಮಣ್ಯರೇ, ನಮ್ಮ ಘಟ್ಟಗಳಲ್ಲಿರುವ ಜೀವ ಮತ್ತು ಸಸ್ಸ್ಯ ಸಂಪತ್ತಿನ ಬಗ್ಗೆ ತಿಳಿದವರು ಖಂಡಿತಾ ಪರ್ಇಸರ ವಿರೋಧಿ ಯಾವುದೇ ಕಾರ್ಯಕ್ರಮವನ್ನು ವಿರೋಧಿಸೋದು ಅರ್ಥ ಕೊಡುತ್ತೆ.....ಯಾಕಂದ್ರೆ....ಭವಿಷತ್ತಿಗೆ ಅದು ಅಮೂಲ್ಯ...ಚನ್ನಾಗಿದೆ ಗಂಭೀರ ಚಿಂತನೆಗೆಯೋಗ್ಯ ಲೇಖನ
* ’ಭೂರಮೆ’ ಯೊಳಗಣ ’ಸುಮಾ ’ರವರೆ ,
ಪರಿಸರ ನಾಶ ಹೀಗೇ ಮುಂದುವರಿದರೆ ಪ್ರಳಯಾಂತಕರು ಹೇಳುವಂತೆ 2012 ಕ್ಕೆ ಬದಲಾಗಿ ಇನ್ನು ಮುಂಚೆಯೇ ಪ್ರಳಯವಾಗಬಹುದು..:) ನಮ್ಮ ಪರಿಸರವನ್ನು ನಾವು ಉಳಿಸಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿ ಬಂದಿದೆ ... ಧನ್ಯವಾದಗಳು.
* ’ಚುಕ್ಕಿ ಚಿತ್ತಾರ’ ದವರೇ
’ಗಂಧದಗುಡಿ’ ಹಾಡು ಕೇಳಿ ಸಂತೋಷಪಡಬೇಕಷ್ಟೆ..:) ಬೇರಾವ ಅಭಿವೃದ್ಧಿ ಕೆಲಸಕ್ಕೂ ಇರದ ಮುತುವರ್ಜಿ ಇಂತಹುದಕ್ಕೆ ಬಂದಬಿಡುತ್ತದೆ ನಮ್ಮ ಜನ’ನಾಯ’ಕರಿಗೆ..ಧನ್ಯವಾದಗಳು
* ಸೀತಾರಾಮ ಗುರುಗಳೇ..
ಅಷ್ಟೊಂದು ಜನಪರ ಹೋರಾಟಗಳು ನೆಡೆಯುತ್ತಿದ್ದರೂ... ’ಹಿತಾಸಕ್ತಿ’ ಗಳು ಪಟ್ಟು ಸಡಿಲಿಸುವುದಿಲ್ಲ ಎಂದರೆ ಗುಂಡ್ಯದ ಗಮ್ಮತ್ತು ಏನಿರಬಹುದು ಹೇಳಿ ..?:) ಧನ್ಯವಾದಗಳು
* ’ಮನಮುಕ್ತಾ’ ರವರೇ
ಗದ್ದುಗೆಯಲ್ಲಿರುವವರಿಗೆ ಪರಿಸರ ನಾಶ ಕಾಣುವುದಿಲ್ಲ ಬಿಡಿ...ಕಾಣುವುದೆಲ್ಲಾ ಬರೀ ವೈಭೋಗಗಳಷ್ಟೇ...ಧನ್ಯವಾದಗಳು
* ’ಮನಸು’ ಮಾಡಿದವರೇ..
ಪ್ರಕೃತಿಯಿಲ್ಲದೇ ನಾವಿರುವುದು ಸಾಧ್ಯವೇ...ನಮ್ಮದೇ ಪ್ರಭುತ್ವವಾದರೂ ನಾವು ಅಧಿಕಾರಶಾಹಿಗೆ ಶರಣಾಗಬೇಕಿದೆ...ಧನ್ಯವಾದಗಳು
* ಸುನಾಥ್ ಗುರುಗಳೇ..
ನಿಜ ನಿಮ್ಮ ಮಾತು....ಆದರೇನು ಮಾಡುವುದು...’ಮರಳಿ ಯತ್ನವ ಮಾಡು’ ಎನ್ನುವಂತೆ ಹೋರಾಟಮಾಡಲೇಬೇಕಿದೆ...ಪರಿಸರಕ್ಕೋಸ್ಕರ..!
* ’ಗುರು’ ಅವರೇ...
ನೀವು ನೋಡಿರಬಹುದು...’ಕೆಂಪುಹೊಳೆ’ ಕಿರು ಜಲವಿದ್ಯುತ್ ಯೋಜನೆಯಿಂದ ಈಗಾಗಲೇ ಹಾನಿಯಾಗಿರುವುದನ್ನು...ಸ್ವಾರ್ಥಕ್ಕೆ ಇದನ್ನೂ ಬಲಿಕೊಟ್ಟರೆ ನಿಮಗೆ..ನಮಗೆ ಚಾರಣ ಮಾಡಲು ಕಾಡೂ ಉಳಿಯುವುದಿಲ್ಲ ...:) ಧನ್ಯವಾದಗಳು
* ವಿ. ಆರ್. ಭಟ್ಟರೇ ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು
* " ರವಿಕಾಂತ್ ಗೋರೆ " ಯವರೇ...
ಅವರೆಲ್ಲಾ..ಡೊಂಕು ಬಾಲದ ’ನಾಯ’ಕರೇ ಸರಿ....ನಾಯಿಗೆ ಬಾಲ ಮಾತ್ರ ಡೊಂಕು...ನಾಯಕರಿಗೆ ಬುದ್ದಿಯೂ ಡೊಂಕೆ ??!!
* ’ಜಲನಯನ’ ದವರೇ...
ನಿಮ್ಮ ಮಾತು ಸತ್ಯ. ಪರಿಸರಕ್ಕೆ ಹಾನಿಯಾಗುವ ಯಾವುದೇ ಯೋಜನೆಯನ್ನೂ ವಿರೋಧಿಸಲೇಬೇಕು. ಅಭಿವೃದ್ದಿಯ ಹೆಸರಲ್ಲಿ ಕೊಳ್ಳೆ ಹೊಳೆಯುವುದು ತರವೇ ..? ಧನ್ಯವಾದಗಳು.
nija ri.. aadare idu avarige artha aagabekalla ?..
last punch mast ide ;)
*’ಶಿವು’ ಮಹರಾಜ್
ಅದೇ ನೋಡಿ ನಮ್ಮ ದೇಶದ ಸಮಸ್ಯೆ...ಅವರಿಗೆ ಅರ್ಥವಾಗುವವರೆಗೂ ನಾವು ಶಂಖ ಊದುತ್ತಲೇ ಇರಬೇಕು.....
ಖಿಡಿ ಮಸ್ತ್ ಅಂದ್ರಿ....ನಗ್ತಾ ಇರಿ...ಧನ್ಯವಾದಗಳು
chennagide sir nimma lekhana :)
" Snow white "
.....ಪ್ರೋತ್ಸಾಹಕ್ಕೆ ಧನ್ಯವಾದಗಳು :)
Post a Comment