Feb 23, 2010

ತುಣುಕಾಟ !

ಕಣ್ಣಲ್ಲಿ ಕನಸು
ಮನದಲ್ಲಿ ಆದರ್ಶ
ತುಂಬಿ ಸಾಗುತ್ತಿರುವೆ
ನಿನ್ನದೇ ದಾರಿಯಲ್ಲಿ
ಅದೇ ಧಾಟಿಯಲ್ಲಿ....


ಬದುಕು ಬಂಜರೆಂದು
ಬೆಳೆಯಲಾಗದೆಂದು
ಕುಗ್ಗಿದ್ದೆ ಮನದಲ್ಲಿ...
ಬದುಕು ಸೊಗಸೆಂದು
ಜೀವನೋತ್ಸಾಹವೆಂದು
ಹೇಳೆಬ್ಬಿಸಿದ್ದೆ ನೀ ಕನಸಲ್ಲಿ ..!


ನೀ ನೆಟ್ಟ ಗಿಡ
ಬೆಳೆದು ಮುಟ್ಟಿದೆ ಮುಗಿಲ !
ಕೊರಗಿತ್ತು ತನು
ಹರುಷಕ್ಕೆ ನೀನಿಲ್ಲ
ಹೇಳಿತ್ತು ಮನ 
ಹೃದಯಕ್ಕೆ ನೀನೆಲ್ಲ...


--------------*-------------


ಈ ಹುಡುಗಿಯರೇ ಹೀಗೆ..
ಮಧು ತುಂಬಿದ ಹೂಗಳ ಹಾಗೆ,
ಹುಡುಗರು...?
ಅತ್ತಿಂದಿತ್ತ ಹಾರಾಡುವ 
ದುಂಬಿಗಳ ಹಾಗೆ !


--------------*----------------
(ಮೊದಲ ಪ್ರಯತ್ನ..ಪ್ರ‍ೋತ್ಸಾಹವಿರಲಿ :) )

25 comments:

Karthik Kamanna said...

ಬದುಕು ಬಂಜರೆಂದು
ಬೆಳೆಯಲಾಗದೆಂದು
ಕುಗ್ಗಿದ್ದೆ ಮನದಲ್ಲಿ...
ಬದುಕು ಸೊಗಸೆಂದು
ಜೀವನೋತ್ಸಾಹವೆಂದು
ಹೇಳೆಬ್ಬಿಸಿದ್ದೆ ನೀ ಕನಸಲ್ಲಿ ..!
ಆಹಾ ಎಂಥಾ ಸೊಗಸಾದ ಸಾಲುಗಳು! ಕವನ ಚೆನ್ನಾಗಿದೆ. ಮುಂದುವರೆಸಿ..

SANTA said...

Chennagide subrahmanya. modala prayatna endenisuvadilla.Keep it up!

ಸೀತಾರಾಮ. ಕೆ. / SITARAM.K said...

ಚೆನಾಗಿದೆ ತಮ್ಮ ಮೊದಲ ಪ್ರಯತ್ನ. ಶ೦ಭುಲಿ೦ಗ- ಮಧು-ದು೦ಬಿ-ಹೂ-ಹುಡುಗ-ಹುಡುಗಿ ಹಿ೦ದೆ ಬಿದ್ದಿರೋದು ಹೊಸದೇ!!. ಸರಿ ಅವನ ಈ ಅವತಾರನ್ನು ನೋಡೋವಾ.... ತುಣುಕಾಟದ- ಮೊದಲ ಕವಿತೆ ಯ ಮಧ್ಯದ ಸಾಲುಗಳು ತು೦ಬಾ ಚೆನ್ನಾಗಿ ಬ೦ದಿವೆ. ಬೆರೆಯುತ್ತಾ ಇರಿ.

ಮನಸು said...

ತುಂಬಾ ಚೆನ್ನಾಗಿದೆ, ಎಲ್ಲಾ ಸಾಲುಗಳು ಇಷ್ಟವಾದವು.

ಚುಕ್ಕಿಚಿತ್ತಾರ said...

ಪದ್ಯ ಮತ್ತು ಪ್ರಯತ್ನ ಎರಡೂ ಉತ್ತಮವಾಗಿದೆ.
ಆಲ್ ದಿ ಬೆಸ್ಟ್..

ತೇಜಸ್ವಿನಿ ಹೆಗಡೆ said...

ಉತ್ತಮ ಪ್ರಯತ್ನ. ಹೀಗೇ ಮುಂದುವರಿಯಲಿ.

ಸವಿಗನಸು said...

ಶಂಭುಲಿಂಗನ ಗುಡಿಯಲ್ಲಿ ಕವನ.....
ಸೊಗಸಾಗಿದೆ ಸಾಲುಗಳು......
ಒಳ್ಳೆ ಪ್ರಯತ್ನ ಮುಂದುವರೆಸಿ.....

sunaath said...

ಪುತ್ತರ್,
ಈ ವಯಸ್ಸೇ ಹಾಗೆ! ಮಧು ತುಂಬಿದ ಹೂವುಗಳ ಸುತ್ತಲೂ ಕವನಗಳ ಗುಂಗುಂ ಗಾನ
ಮಾಡುತ್ತ, ಗುಂಗು ಹಿಡಿಸಿಕೊಳ್ಳುವದು ಸಹಜ. ನಿಮಗೆ ಶುಭಾಶಯಗಳು.
ಕವನ ಚೆನ್ನಾಗಿದೆ. ವಿಜಯೀ ಭವ!
-ಕಾಕಾಶ್ರೀ

ಮನಸಿನಮನೆಯವನು said...

'Shubrahmanya Bhat'.' ಅವ್ರೆ..,

ಮೊದಲ ಪ್ರಯತ್ನ ಸೊಗಸಾಗಿದೆ.. ಮುಂದುವರಿಸಿ..

Blog is Updated: http://manasinamane.blogspot.com

Unknown said...

Chennaagide

V.R.BHAT said...

ಇತ್ತೀಚೆಗೆ ಯಾಕೋ ಜೋರು ಭಕ್ತರು
ಶಂಭುಲಿಂಗನ ಗುಡಿಯಲ್ಲಿ
ಭಾರೀ ಕಾರುಬಾರು ಕಾವ್ಯ-ಗದ್ಯಗಳಲ್ಲಿ
ಮನಸೋಲುವ ಮುನ್ನ ಹೇಳಿಬಿಡಲೇ
ಶಂಕರಾ ನೀನು ಭಯಂಕರಾ ನಿನ್ನ ಪುರಾಣದ ಮಹಿಮೆಯಲ್ಲಿ
ಗುಡಿಗೆ ಬಂದವರು ದೊಪ್ಪೆಂದು
ಅಡ್ಡ ಬೀಳಲೇ ಬೇಕು ಭಕ್ತಿಯಲ್ಲಿ !

ಚೆನ್ನಾಗಿದೆ ಸುಬ್ರಹ್ಮಣ್ಯರೇ, ನಿಮ್ಮ ಪ್ರಯತ್ನ ಪ್ರಾಮಾಣಿಕವಾಗಿದೆ !
||ನವೋ ನವೋ ಭವತಿ ಜಾಯಮನಃ ||
ಧನ್ಯವಾದಗಳು

Subrahmanya said...

* ಕಾರ್ತೀಕ್...
ಆತ್ಮೀಯ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹ ಹೀಗೇ ಇರಲಿ. Thank u

* ವಸಂತ್ ಸರ್....
:).. ಧನ್ಯವಾದ.

Subrahmanya said...

* ಸೀತಾರಾಮ್ ಗುರುಗಳೇ....
ಹಿಂದೆ ಬಿದ್ದಿದ್ದೆಲ್ಲಾ ಹಿಂದೆಯೇ ಆಯಿತು ಗುರುಗಳೇ..:)..ಈಗೇನಿದ್ದರೂ ನೆನಪಷ್ಟೇ..!. ನಿಮ್ಮ ಪ್ರೋತ್ಸಾಹ-ವಿಶ್ವಾಸವೇ ಈ ಅವತಾರಗಳಿಗೆ ಕಾರಣ :). ಧನ್ಯವಾದಗಳು .

Subrahmanya said...

*
ಮನಸು
ಚುಕ್ಕಿಚಿತ್ತಾರ
ತೇಜಸ್ವಿನಿ ಯವರೇ...
ಮಹೇಶ್...
ನಿಮ್ಮ ಪ್ರೋತ್ಸಾಹ ಸದಾ ಇರಲಿ. ಧನ್ಯವಾದ

Subrahmanya said...

*ಕಾಕಾಶ್ರೀ....
ಗುಂಗುಂ ಗಾನವೇನೋ ಸರಿ....ಗುಂಗು ಹಿಡಿಸಿಕೊಂಡು ಕುಳಿತರೆ ನನ್ನಾಕೆ ಲಟ್ಟಣಿಗೆ ತರುವಳಲ್ಲಾ...!! :) . ನಿಮ್ಮ ಪ್ರೋತ್ಸಾಹಕ್ಕೆ ಮತ್ತು ಕವನ ಮೆಚ್ಚಿದ್ದಕ್ಕೆ ಧನ್ಯವಾದ.

Subrahmanya said...

*
ಗುರು ,
ರವಿಕಾಂತ ಗೋರೆ ಯವರೆ,
ಪ್ರೋತ್ಸಾಹಕ್ಕೆ ಧನ್ಯವಾದ

Subrahmanya said...

* ವಿ. ಆರ್. ಭಟ್ಟರೇ...
ನನಗೇಕೋ ಗಾಬರಿಯಾಗ್ತಿದೆ !. ದೃಷ್ಟಿ ಬೊಟ್ಟಿಡಲೇ ನನ್ನ ಬ್ಲಾಗಿಗೆ !!?? :)
ನಿಮ್ಮ ವಿಶ್ವಾಸಕ್ಕೆ ನಾನು ಆಭಾರಿ. ನಿಮ್ಮ ಪ್ರೋತ್ಸಾಹವೇ ಇನ್ನಷ್ಟು ಬರೆಯಲು
ಪ್ರೇರಣೆಯಾಗುತ್ತದೆ. ಹೊಸತು ಹುಟ್ಟಬೇಕು, ದೀರ್ಘಾಯುವೂ ಆಗಬೇಕೆಂಬ
ನಿಮ್ಮ ಹಾರೈಕೆಗೆ ಧನ್ಯವಾದ

ಮನಮುಕ್ತಾ said...

ಸು೦ದರ ಧಾಟಿಯಲ್ಲಿ ಕನಸು ಆದರ್ಶಗಳ ಭಾವ ಕವನದಲ್ಲಿ ಬ೦ದಿದೆ.
ಒಳ್ಳೆಯ ಪ್ರಯತ್ನ .. ಸಾಗುತ್ತಿರಲಿ.

ದೀಪಸ್ಮಿತಾ said...

ಇದು ಮೊದಲನೆ ಪ್ರಯತ್ನವೇ? ಹಾಗನಿಸುವುದಿಲ್ಲ ಕವನ ಓದಿ. ಪ್ರೋತ್ಸಾಹವಂತೂ ಇದೆ

Subrahmanya said...

* ಮನಮುಕ್ತಾ...
ಕನಸು-ಆದರ್ಶಗಳ ಗಿಡ ನೆಟ್ಟಿದ್ದು ನನ್ನಪ್ಪ. ಆ ನೆನಪಲ್ಲಿ ಬರದದ್ದು. ಮುಂದುವರಿಸುತ್ತೇನೆ. ಧನ್ಯವಾದ

Subrahmanya said...

* ದೀಪಸ್ಮಿತ ಸರ್..
ಗೀಚಿ ಕಸದಬುಟ್ಟಿ ಸೇರಿಸಿದ್ದು ಬೇಕಾದಷ್ಟಿದೆ. ನನ್ನ ಮನಸ್ಸಿಗೆ ಸಮಾಧಾನವೆನಿ ಸಿದ್ದನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಮೊದಲನೆಯದು ನನ್ನ ತಂದೆಯ ನಡೆಯ ಸ್ಪೂರ್ತಿಯಿಂದ ಬಂದದ್ದು. (ಕೊನೆಯ ಚರಣಕ್ಕೆ ’ನೀನೆಟ್ಟು ಬೆಳೆಸಿದ ಈ ಮರ ಫಲತೊಟ್ಟ ವೇಳೆಗೆ’ ಜನಪ್ರಿಯ ಗೀತೆಯಿಂದ ಸ್ಪೂರ್ತಿ ಪಡೆದದ್ದು). ಎರಡನೆಯದು ಇತ್ತೀಚೆಗೆ ಬ್ಲಾಗಿನ ಮಿತ್ರರೊಬ್ಬರಿಗೆ ನಾನೇ ಹಾಕಿದ ಕಾಮೆಂಟ್ನಿಂದ ಬಂದ ಸ್ಪೂರ್ತಿ. "ಸುಮವಾಗಬೇಕೆ? ದುಂಬಿಗಳು ಬರುತ್ತವೆ ಜೋಕೆ" ಇದರಿಂದ :). ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

ಶಾಂತಲಾ ಭಂಡಿ said...

ಸುಬ್ರಹ್ಮಣ್ಯ ಅವರೆ...

"ಬದುಕು ಬಂಜರೆಂದು
ಬೆಳೆಯಲಾಗದೆಂದು
ಕುಗ್ಗಿದ್ದೆ ಮನದಲ್ಲಿ...
ಬದುಕು ಸೊಗಸೆಂದು
ಜೀವನೋತ್ಸಾಹವೆಂದು
ಹೇಳೆಬ್ಬಿಸಿದ್ದೆ ನೀ ಕನಸಲ್ಲಿ ..!"

ತಟ್ಟಿದ ಸಾಲುಗಳು.
ಎಲ್ಲ ಸಾಲುಗಳೂ ಇಷ್ಟವಾದವು.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಜೈ ಶ೦ಭುಲಿ೦ಗಾ,ಭಟ್ಟರೆ ಸತ್ಯ ಹೇಳಿ ಇದು ನಿಮ್ಮ ಮೊದಲ ಪ್ರಯತ್ನವಾ?
ಶ೦ಭುಲಿ೦ಗಾ ಇದು ತುಣುಕಾಟವಲ್ಲವೋ ಹುದುಕಾಟ.
ಸು೦ದರವಾಗಿ ಬ೦ದಿದೆ ನಿಮ್ಮ ಕವನ. ಅಭಿನ೦ದನೆಗಳು

Subrahmanya said...

* ಶಾಂತಲಾ ಅವರೆ..,
ಶಂಭುಲಿಂಗನ ಗುಡಿಗೆ ಸ್ವಾಗತ. ಮೆಚ್ಚುಗೆ ತುಂಬಿದ ಪ್ರೋತ್ಸಾಹಕ್ಕೆ ಧನ್ಯವಾದ.

Subrahmanya said...

* ಕೂಸು ಮುಳಿಯಾಳದವರೆ..,
ಸತ್ಯವನ್ನೇ ಹೇಳುತ್ತೇನೆ..ಸತ್ಯವನ್ನಲ್ಲದೇ ಬೇರೇನೂ ಹೇಳುವುದಿಲ್ಲ..
ನಾನು ಹೇಳುವುದೆಲ್ಲಾ ಸತ್ಯ. ..ಹ್ಹ..ಹ್ಹ..:). ಬರೆದು ತೃಪ್ತಿಯಾಗದೆ
ಕೈಬಿಟ್ಟದ್ದು ತುಂಬಾ ಇದೆ, ನಾನು ಹಂಚಿಕೊಂಡಿರುವುದರಲ್ಲಿ ಇದೇ
ಮೊದಲನೆಯದು. ನಿಮ್ಮ ಅಭಿನಂದನೆಗೆ ಧನ್ಯವಾದ. ಬರುತ್ತಿರಿ. :)