Mar 4, 2010

ಅಪಸ್ವರ



ಸುಗಮ ಸಂಗೀತಕ್ಕೆ ಹಿರಿಮೆ ತಂದುಕೊಟ್ಟವರಲ್ಲಿ ಮೈಸೂರು ಅನಂತಸ್ವಾಮಿಯವರದ್ದು ದೊಡ್ಡ ಹೆಸರು. ಅವರ ಶಿಷ್ಯವರ್ಗವೂ ಅದೇ ಸ್ಥಾಯಿಯನ್ನು ಮುಂದುವರಿಸಿಕೊಂಡು ಬಂದಿರುವುದು ಅಭಿನಂದನೀಯ. ಹಾಡಲಾಗುವ ಕವನಗಳು ಮತ್ತು ಹಾಡಲಾಗದ ಕವನಗಳೆರಡನ್ನೂ ಹಾಡಿ ತೋರಿಸಿದ ಗೇಯ್ಮೆ ಅನಂತಸ್ವಾಮಿಯವರದ್ದು.  ಈ ಎರಡೂ ಪ್ರಕಾರದ ಕವನಗಳ ನಡುವಿನ ತಿಕ್ಕಾಟದ ವಾದಕ್ಕೆ , ಮೊನ್ನೆ ಪತ್ರಿಕೆಯೊಂದರಲ್ಲಿ ಶ್ರೀಯುತ ಡಾ| ನಾ. ಸೋಮೇಶ್ವರರು ಉತ್ತಮ ವಿಚಾರವೊಂದನ್ನು ಬರೆದಿದ್ದಾರೆ. (  ಅದರ ಸಂಪೂರ್ಣ ವಿಷಯ ಇಲ್ಲಿ ಅಪ್ರಸ್ತುತ, ಫೆ-೨೮ ರ ’ ಸಾಪ್ತಾಹಿಕ ಪ್ರಭ ’ ನೋಡಬಹುದು. ) 
ಕೆ.ಎಸ್.ನ, ದ.ರಾ.ಬೇಂದ್ರೆ  ಮುಂತಾದವರ ಕವನಗಳು ಪ್ರಾಸಬದ್ದವಾಗಿ ಹಾಡುವಂತೆಯೂ ಇದ್ದರೆ, ನವ್ಯ ಕವಿಗಳ ಕವನಗಳು ಮೇಲ್ನೋಟಕ್ಕೆ ಹಾಡಲಾಗದಂತೆ ಕಂಡುಬಂದರೂ, ಅವುಗಳನ್ನೂ ಹಾಡನ್ನಾಗಿಸಿದ ಕೀರ್ತಿ ಅನಂತಸ್ವಾಮಿ ಮತ್ತು ಸಿ. ಅಶ್ವತ್ಠ ರಿಗೆ ಸಲ್ಲುತ್ತದೆ.  ಇಂತಹ ಕವನಗಳು ಕೆಳುಗರ ಮನಗೆಲ್ಲುವಲ್ಲಿ ಯಶಸ್ವಿಯೂ ಆಗಿದೆ


  "ಆ ನೀಲಿಕೊಳವನ್ನು ಪ್ರೀತಿಸುವೆ ನಾನು,...
   ಅಲ್ಲೆ ಕಂಡಳು ನನಗೆ ಆ ಕಪ್ಪು ಹುಡುಗಿ... ||
  ಆ ಹೊನ್ನೆ ಮರವನ್ನು ಪ್ರೀತಿಸುವೆ ನಾನು,
  ಅಲ್ಲೇ ನಲಿದಾಡಿತ್ತು...ಆ ಕಪ್ಪು ಹುಡುಗಿ..||


ಈ ಕವನವನ್ನು ಅದೆಷ್ಟು ಸುಶ್ರಾವ್ಯವಾಗಿ ಹಾಡಾಗಿಸಿದ್ದಾರಲ್ಲವೆ ..? . ಇಂತಹ ಹಾಡುಗಳು ಸಾಕಷ್ಟು ಸಿಗುತ್ತವೆ. ಮುಖ್ಯವಾಗಿ ಕಾವ್ಯದ ಪ್ರತಿ  ಸಂಗೀತ ನಿರ್ದೇಶಕನಿಗಿರುವ ಓಲುಮೆಯೇ ಸೊಗಸಾದ ಹಾಡು ಬರಲು ಕಾರಣವಾಗುತ್ತದೆ. ಇಂತಹ ಭಾವಗೀತೆಗಳಿಗೆ ಮೆರುಗು ಬರುವುದು, ಶ್ರುತಿ-ಲಯ-ತಾಳಗಳನ್ನು ಗೌರವಿಸಿ ಹಾಡುವ ಗಾಯಕ/ಗಾಯಕಿಯರಿಂದ ಎನ್ನುವುದು ಸತ್ಯ ಸಂಗತಿ. 
(ಬೇಂದ್ರೆಯವರು ಹಾಡು ಬರೆದು ಅದನ್ನು ತಾವೇ ಹಾಡಿಕೊಂದು ಅನುಭವಿಸುತ್ತಿದ್ದರೆಂದು ಓದಿ ತಿಳಿದೆ. ಹಾಗಾದರೆ ಊಹಿಸಿಕೊಳ್ಳಿ, "ಶ್ರಾವಣ ಬಂತು ಕಾಡಿಗೆ " ಹಾಡನ್ನು ಹೇಗೆ ಹಾಡಿಕೊಂಡು ಕುಣಿದು ಆಸ್ವಾದಿಸಿರಬಹುದೆಂದು !. )
ಶ್ರೀಮತಿ ರತ್ನಮಾಲ ಪ್ರಕಾಶ್ ಮತ್ತು ಎಂ.ಡಿ. ಪಲ್ಲವಿ ಇಬ್ಬರೂ ಗುರುಗಳ ಗರಡಿಯಿಂದ ಬಂದ ಅಪ್ರತಿಮ ಗಾಯಕಿಯರೆ. ಇವರ ಜೊತೆಗೆ  ಬಿ.ಆರ್. ಛಾಯಾ, ಅರ್ಚನಾ ಉಡುಪ  , ಸುಪ್ರಿಯಾ ಆಚಾರ್ಯ ಮುಂತಾದ ಗಾಯಕಿಯರನ್ನು ನಾವಿಂದು ಇಷ್ಟಪಡುತ್ತಿದ್ದೇವೆ ಎಂದರೆ, ಅದಕ್ಕೆ ಕಾರಣ ಅವರ ಧ್ವನಿಯಲ್ಲಿರುವ ಇಂಪು. ಆದರೆ....,,,,,
 ಇಲ್ಲೊಂದು ತಕರಾರಿದೆ .....!, ಮೊನ್ನೆಯಷ್ಟೇ ರತ್ನಮಾಲಾ ಪ್ರಕಾಶ್ ಅವರು ಪಲ್ಲವಿಯ ಮೇಲೆ ತಿರುಗಿಬಿದ್ದರು. ಅದೂ ಟಿ.ವಿ. ಮಾಧ್ಯಮಗಳ ಮುಂದೆಯೇ !. ಹಾಗೆ ತಿರುಗಿ ಬೀಳಲು ಕಾರಣ ಪಲ್ಲವಿಯ ಕಂಠದಲ್ಲಿ ಹೊರಬಂದಿರುವ ಭಾವಗೀತೆಗಳ ಸಿ.ಡಿ. ಗಳು. ಈ ಹಾಡುಗಳಲ್ಲಿ ಮೂಲ ಸಂಗೀತ ನಿರ್ದೇಶಕರ ಹೆಸರಿದ್ದರೂ , ಮೂಲ ಗಾಯಕ/ಗಾಯಕಿ ಯರ ಹೆಸರು ಹಾಕದಿರುವುದು ರತ್ನಕ್ಕರ ಕೋಪಕ್ಕೆ ಕಾರಣ. ಮಾಧ್ಯಮಗಳ ಮುಂದೆ ಅವರು ಹೇಳಿದ್ದಿಷ್ಟೆ.. " ಮೂಲ ಗಾಯಕ/ಕಿ ಯರ ಹೆಸರು ಹಾಕದಿರುವುದು ಅಗೌರವದ ಸೂಚಕ. ನಮಗೆ credentiality ಬೇಡವೇ ? ಪಲ್ಲವಿ ತುಂಬಾ Arrogant  ಆಗಿ ವರ್ತಿಸುತ್ತಿದ್ದಾಳೆ, ಆಕೆ arrogance ಬಿಟ್ಟರೆ ಬೆಳೆಯುತ್ತಾಳೆ " ಎಂದೆಲ್ಲಾ ಸ್ವಲ್ಪ arrogant ಆಗೇ ಮಾತನಾಡಿದರು. ಜೊತೆಯಲ್ಲಿ ಬಿ. ಆರ್. ಛಾಯಾ ಸೇರಿದಂತೆ ಇನ್ನೂ ಹಲವು ಸುಗಮಿಗಳಿದ್ದರು ಎನ್ನುವುದು ವಿಶೇಷ. ಲಹರಿ ಸಂಸ್ಥೆಯ ’ವೇಲು’ ಕೂಡ, ತಮ್ಮಿಂದ ಹಕ್ಕು ಪಡೆಯದೇ ಪಲ್ಲವಿ ತಪ್ಪು ಮಾಡಿದ್ದಾರೆ ಎಂದು ಆರೋಪಿಸಿದರು.
 ಇಷ್ಟಕ್ಕೂ ಹಕ್ಕು ಪಡೆಯಬೇಕಾಗಿದ್ದು ಸಿ.ಡಿ. ಹೊರತಂದಿರುವ ಆಡಿಯೋ ಕಂಪೆನಿಯಲ್ಲವೇ ? . ಇನ್ನು ಮೂಲ ಸಂಗೀತ ನಿರ್ದೇಶಕರ ಹೆಸರನ್ನು ಯಥಾವತ್ ಮುದ್ರಿಸಲಾಗಿದೆ.    ರತ್ನಕ್ಕ ಹಾಡಿರುವ ಹಾಡನ್ನು  ಪಲ್ಲವಿ ಹಾಡಿರುವುದು ತನ್ನ ಸ್ವಂತ ಧ್ವನಿಯಲ್ಲಿ !.  ಹಾಡುಗಾರ್ತಿ ತಾನೇ ಆದ್ದರಿಂದ credit ಕೊಡುವ ಅಗತ್ಯವೇನಿದೆ ?? ಎನ್ನುವುದು ಪಲ್ಲವಿಯ ವಿಚಾರವಾಗಿರಬಹುದು. ಆಕೆ ಗಾಯಕಿಯಾದ್ದರಿಂದ ಯಾವ ಹಾಡನ್ನು ಬೇಕಾದರೂ ಆಕೆ ಹಾಡಬಹುದಲ್ಲವೆ.
ಹಾಗಾದರೆ ರತ್ನಕ್ಕರ ಪ್ರಶ್ನೆ credit ನದ್ದೇ ? ರತ್ನಕ್ಕರಿಗೆ ಸಲ್ಲಬೇಕಾದ credit , ಕೇಳುಗರಿಂದ ಎಂದೋ ಸಂದಿದೆ. ಇಂದಿಗೂ ಸಲ್ಲುತ್ತಿದೆ. ರತ್ನಕ್ಕರಂತಹ ಅಪ್ರತಿಮ ಗಾಯಕಿಯ ಹಾಡನ್ನು , ಬೇರೆ ಯಾರೇ ಹಾಡಿದರೂ ಮೂಲದಲ್ಲಿರುವ ಭಾವ ಕಳೆದುಹೋಗಲು ಸಾಧ್ಯವೆ ?
ಅವರಿಗೆ ಸುಗಮ ಸಂಗೀತದ ಭವಿಷ್ಯದ ಚಿಂತೆ ಕಾಡಿರಬಹುದೇನೋ...!!?


 "ಮಾಡುವವನದಲ್ಲ ಹಾಡು ...ಹಾಡುವವರದು " ....ಅಲ್ಲವೇ .  ಇಲ್ಲಿ ಯಾರೂ ಮೇಲಲ್ಲ , ಯಾರೂ ಕಮ್ಮಿಯಲ್ಲ.  ಈ ಸಿ.ಡಿ. ಯ ಮೆಲೆ Recorded at Live Concert  ಎಂದಿದೆ  ( Copyright act  ಭಯದಿಂದಿರಬಹುದೇ ?) . ಹಾಡುಗಳನ್ನು ಕೇಳಿ, ನನಗದು Recorded ಅನ್ನಿಸಿತೇ ವಿನಃ Live ಅನ್ನಿಸಲಿಲ್ಲ. ಇಲ್ಲೆಲ್ಲೋ ಏನೋ ತಪ್ಪಾಗಿದೆ ಎನಿಸುತ್ತದೆ.  ರತ್ನಕ್ಕರ ಸಮಸ್ಯೆ credit ನದ್ದಾಗಿರುವುದರಿಂದ ಇಲ್ಲೊಂದು ಬೇಡದ ಅಪಸ್ವರ ಎದ್ದಿದೆ ಎಂದರೆ ತಪ್ಪಾಗಲಾರದು.  ನ್ಯಾಶನಲ್ ಕಾಲೇಜಿನಲ್ಲಿ ಒಟ್ಟೊಟ್ಟಿಗೇ ಓದಿದ ಪಲ್ಲವಿ, ಅರ್ಚನಾ ಮತ್ತು ಸಂಗೀತ ಕ್ಷೇತ್ರದಲ್ಲಿ ಸಹವರ್ತಿಗಳಾದ ರತ್ನಕ್ಕ, ಛಾಯಾ, ಸುಪ್ರಿಯ...ಇವರೆಲ್ಲರಿಂದ ಸಂಗೀತಪ್ರಿಯರು ನಿರೀಕ್ಷಿಸುವುದು ಇಂಪಾದ ಹಾಡುಗಳನ್ನೇ ವಿನಃ, ಇಂತಹ ಅಪಸ್ವರಗಳನ್ನಲ್ಲ. ಸಮಸ್ಯೆ ಏನೇ ಇರಲಿ, ಕರೆದು ಕೂಡಿಸಿ ಬಗೆಹರಿಸಿಕೊಳ್ಳುವ ಬದಲು , ಹೀಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದು ಸಂಗೀತ ಪ್ರಿಯರಿಗೆ ತುಸು ಮುಜುಗರದ ವಿಷಯವೆ.  

  ಕೊಡಲು ಕೊಳ್ಳಲು ಒಲವು ಬಿಟ್ಟು ಬೇರೆ ಉಂಟೇ ಬಾಳಲಿ,
  ಕೊಟ್ಟುದೆಷ್ಟೋ..ಪಡೆದುದೆಷ್ಟೋ..ನಿಮ್ಮ ( ನಮ್ಮ ) ನಂಟೇ ಹೇಳಲಿ !


ಇಲ್ಲಿ ಬೇರೇನಾದರೂ ಇದೆಯೇ( ರಾಜಕೀಯ )? ..ಎಂಬುದಂತೂ ನನಗೆ ತಿಳಿದಿಲ್ಲ. ಇರದಿರಲಿ ಎನ್ನುವುದು ನನ್ನ ಆಶಯ.  ತಪ್ಪು ಪಲ್ಲವಿಯದ್ದೋ, ಕಂಪನಿಯದ್ದೋ..ಯಾರದ್ದೋ ..! ಆದರದು ಗಾಯಕಿಯರ ಪ್ರತಿ ಕೇಳುಗರಲ್ಲಿ ಕೆಟ್ಟ ಅಭಿಪ್ರಾಯ ತರದಿದ್ದರೆ ಅಷ್ಟೇ ಸಾಕು. ಇಂತಹ ಅಪಸ್ವರಗಳು ಸುಗಮ ಸಂಗೀತದಲ್ಲಿ ಬರದಿರಲೆಂದು ಆಶಿಸುತ್ತೇನೆ. ಆದಷ್ಟು ಬೇಗ ಕತ್ತಲು ಕಳೆದು ಬೆಳಕು ಮೂಡಲಿ.  ಇಷ್ಟೆಲ್ಲಾ ನೋಡಿ-ಕೇಳಿ,..ಏಕೋ..ಬೇಂದ್ರೆಕಾಕ ಬರೆದ ಹಾಡು ಕಾಡಿತು...


   .........   ನಿಜದಲ್ಲೇ  ಒಲವಿರಲಿ,
               ಚೆಲುವಿನಲೆ ನಲಿವಿರಲಿ,
               ಒಳಿತಿನಲೇ ಬಲವಿರಲಿ ..
               ಜೀವಕ್ಕೆಳೆಯಾ..(ಗೆಳೆಯಾ)..  
               ದೇವ ಜೀವನ ಕೇಂದ್ರ,
               ಒಬ್ಬೊಬ್ಬನೂ ಇಂದ್ರ,
               ಏನಿದ್ದರೂ ಎಲ್ಲ..ಎಲ್ಲೆ ತಿಳಿಯಾ... 
              ”’
              ”
              ” 
                      ಕೊನೆಯ ಸಾಲುಗಳು
             
              ಈ ನಾನು...ಆ ನೀನು...ಒಂದೆ ತಾನಿನ ತಾನು,
              ತಾಳ ಲಯ ರಾಗಗಳು ಸಹಜ ಬರಲಿ..,
              ಬದುಕು ಮಾಯೆಯ ಮಾಟ...... 
                                                                  
  ------------------------------------------------------------------


    ಖೊನೆಖಿಡಿ
           ಶಂಭುಲಿಂಗ ತನ್ನ ಮರಿಲಿಂಗನನ್ನು ಶಾಲೆಗೆ ಸೇರಿಸಲು ಬಂದ. ಗುಮಾಸ್ತನ ದಯೆಯಿಂದ 
          ಎಲ್ಲವೂ ಸಾಂಗವಾಯಿತು. ಕೊನೆಯದ್ದೇ..ಶಂಭುಲಿಂಗನ ರುಜು. ಗೊತ್ತಲ್ಲ..ಶಂಭು ಹೆಬ್ಬೆಟ್ಟೆಂದು.. .ಗುಮಾಸ್ತ ಒತ್ತುವ    ಶಾಯಿಪೆಟ್ಟಿಯನ್ನು ಮುಂದಿಟ್ಟ. ಶಂಭು..ಒತ್ತುವ ಬದಲು ಗುಮಾಸ್ತನ ಮುಂದೆ ಅಂಗೈ ಚಾಚಿದ...

        ಗುಮಾಸ್ತ    : ಯಾಕಯ್ಯಾ..ಕೈ ತೋರಿಸ್ತೀ...ಹೆಬ್ಬೆಟ್ಟೊತ್ತಯ್ಯಾ ಇಲ್ಲಿ..

        ಶಂಭುಲಿಂಗ : ಓದ್ ತಿಂಗ್ಳು ಓಟ್ ಆಕಿಸಕಳವಾಗ ಇಂಗೇ ಒತ್ತಕ್ಕೆ ೧೦೦ ರೂಪ್ಯಾ ಕಾಸು ಕೊಟ್ಟಿದ್ರು... ಅಂಗೆ ನೀವು ಕೊಟ್ರೆ ಎಲ್ ಬೇಕಾದ್ರು ಒತ್ತೀನ್ ಬುದ್ದಿ..!!         
   




                                                                        ವಂದನೆಗಳೊಂದಿಗೆ


    

31 comments:

ಮನಮುಕ್ತಾ said...

ವಿಮರ್ಶೆ ಹಾಗೂ ಕವನದ ಸಾಲುಗಳು ಖುಶಿ ಕೊಟ್ಟವು.
ಎ೦ದಿನ೦ತೇ ಖಿಡಿ.. ಸೂಪರ್..

ಚುಕ್ಕಿಚಿತ್ತಾರ said...

ಲೇಖನ ಸು೦ದರವಾಗಿ ಮೂಡಿಬ೦ದಿದೆ.ಹಾಡು ಹಾಡುವವರದೇ...
ಮೂಲ ಗಾಯಕಿಯರ ಭಾವ ಖ೦ಡಿತಾ ಕಳೆದುಹೋಗುವುದಿಲ್ಲ ..
ಯಾಕೆ ಅಪಸ್ವರವೋ...! ಎಲ್ಲ ಕ್ಶೇತ್ರದಲ್ಲೂ ಈ ತರ ಇದ್ದದ್ದೆ... ಐಡೆ೦ಟಿಟಿ ಕ್ರೈಸಿಸ್....

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ನನಗನ್ನಿಸುತ್ತದೆ,ಅಭದ್ರತೆಯ ಭಾವ,ಬೆಳವಣಿಗೆಯನ್ನು ಒಪ್ಪಿಕೊಳ್ಳುವಲ್ಲಿನ ಹಿ೦ಜರಿತ ಈ ರೀತಿಯ ರದ್ದಾ೦ತಕ್ಕೆ ಕಾರಣವಾಗಿರಬಹುದು.ಬಿಡಿ ಎಲ್ಲಕ್ಷೇತ್ರಗಳ೦ತೆ ಇಲ್ಲಿಯ ಹುಳುಕೂ ಪ್ರಕಟವಾಯಿತು ಅಷ್ತೇ.

ಮನದಾಳದಿಂದ............ said...

ರೀ ಭಟ್ರೇ, ನಿಮಗೊಂದು ವಿಷ್ಯ ಗೊತ್ತಾ? ಸ್ವಲ್ಪ ಹೆಸರು ಬಂದಾದ ಮೇಲೆ ಅಹಂಕಾರ ಅನ್ನೋದು ತಾನಾಗೆ ಬರುತ್ತೆ. ಇದು ಮನುಷ್ಯ ಸಹಜ ಗುಣ. ನಮಗೆ ಯಶಸ್ಸು ಬಂದಾಗ ನಾವು ಇನ್ನೊಬ್ಬರ ಏಳಿಗೆ ಸಹಿಸುವುದಿಲ್ಲ. ಇಲ್ಲಿ ಆಗಿರುವುದು ಅದೇ. ಕೇವಲ ಹೆಸರಿಗಾಗಿ ಇಂತಹ ವಿಮರ್ಶೆ-ಖಂಡನೆಗಳು ಕೇಳಿಬರುತ್ತವೆ.
ಒಬ್ಬ ಸಂಗೀತಗಾರ/ರ್ತಿ ಎಂದರೆ ವಿಶೇಷ ಅಭಿಮಾನ ಜನರಲ್ಲಿ ಇರುತ್ತದೆ. ರತ್ನಕ್ಕ ಆಗಲಿ, ಪಲ್ಲವಿಯವರಾಗಲಿ ಅಥವಾ ಅರ್ಚನಾ ಅಗಲಿ, ತಮ್ಮ ತಂಟೆ- ತಕರಾರುಗಳನ್ನು ಮಾಧ್ಯಮದ ಮುಂದೆ ತಾರದೆ ತಮ್ಮಲ್ಲೇ ಬಗೆಹರಿಸಿಕೊಂಡರೆ ಚನ್ನ.
ಅಪಸ್ವರ, ಹುಳುಕು ಏನೇ ಅಂತ ಕರೆದರೂ ಸಂಗೀತಗಾರ್ತಿಯರಲ್ಲಿ ಈ ವಿಧದ ಮಾತುಗಳು ಕೇಳಿ ಬರಬಾರದಿತ್ತು.

ಏನೇ ಇರಲಿ, ನಿಮ್ಮ ಅಭಿಪ್ರಾಯ ಸೂಕ್ತವಾಗಿದೆ

ಜಲನಯನ said...

ಸುಬ್ರಮಣ್ಯ ಸರ್ ಆ ವೀಡಿಯೋ ನ್ಯೂಸ್ ಕ್ಲಿಪ್ಪಿಂಗ್ ನಾನೂ ನೋಡಿದೆ..ಇಲ್ಲಿ ನನಗೆ ವೈಯಕ್ತಿಕ ಲಾಭಾ-ಲಾಭಗಳ ತಿಕ್ಕಾಟ ಹೆಚ್ಚಾಗಿ ಕಾಣಿಸುತ್ತಿದೆ....ಹಕ್ಕುಗಳು ಗಾಯ್ಕಿ ಪಡೆಯುವ ಅವಶ್ಯಕತೆಯಿಲ್ಲ..ಮೂಲಗಾಯಕಿ/ಗಾಯಕರಿಗೆ ಕ್ರೆಡಿಟ್ ಕೊಟ್ಟಿಲ್ಲ ಅದಕ್ಕೆ ಹೊಸ ಗಾಯಕ/ಗಾಯಕಿ..ಹೊಣೆಯಾಗುತ್ತಾರೆಯೇ ಎನ್ನುವುದೂ ...ಗೊಂದಲಕ್ಕೆ ತಳ್ಳುವ ವಿಷಯ..ಅಂತೂ ಹಣವೇ-ನಿನ್ನಯಗುಣವೇ ಎನ್ನದೇ ವಿಧಿಯಿಲ್ಲ...

sunaath said...

ಪುತ್ತರ್,
ಹಾಡುವವರ ಮನಸ್ಸು ತಿಳಿಯಾಗಿರಲಿ, ಹಾಡು ಮಧುರವಾಗಿ ಹೊರಬರಲಿ ಎನ್ನುವ ನಿಮ್ಮ ಉದ್ದೇಶವನ್ನು ತಿಳಿಯಾಗಿ ತಿಳಿಸಿದ್ದೀರಿ. ಇದು ಉತ್ತಮ ಭಾವನೆ. ಈ ಭಾವನೆಗೆ ತಕ್ಕ ಬೇಂದ್ರೆ-ಗೀತೆಗಳನ್ನು ಜೋಡಿಸಿದ್ದೀರಿ. ನಿಮ್ಮ ಲೇಖನದ ಆಶಯ ಸಾತ್ವಿಕವಾಗಿದೆ.
ಈ ಆಶಯ ನಮ್ಮ ಗಾಯಕರನ್ನು ತಲುಪಲಿ ಎಂದು ಹಾರೈಸುತ್ತೇನೆ.
-ಕಾಕಾಶ್ರೀ

ಸೀತಾರಾಮ. ಕೆ. / SITARAM.K said...

ಅಭಿಪ್ರಾಯ ಸೂಕ್ತವಾಗಿದೆ.
ಶ೦ಭುಲಿ೦ಗನ ಕಡೇ ಖಿಡಿ: ಸಕತ್ -ಆಗಿದೆ.

ಶರಶ್ಚಂದ್ರ ಕಲ್ಮನೆ said...

ನಾನು ಈ ಘಟನೆಯ ಬಗ್ಗೆ ಯಾವ ಬ್ಲಾಗಿಗರೂ ಏಕೆ ಬರೆಯಲಿಲ್ಲ ಎಂದು ಯೋಚಿಸುತ್ತಿದ್ದೆ. ನಿಮ್ಮ ಅಭಿಪ್ರಾಯ ಸರಿಯಾಗಿದೆ. ಈ ತರದ ವಿಷಯಗಳು ಅಭಿಮಾನಿಗಳ ಮನದಲ್ಲಿ ಗೊಂದಲ ಏಳಲು ಕಾರಣವಾಗುತ್ತದೆ. ರತ್ನಮಾಲ ಹಾಗು ಪಲ್ಲವಿ ಇಬ್ಬರು ಅತ್ತ್ಯುತ್ತಮ ಗಾಯಕಿಯರು, ಇದರಲ್ಲಿ ಎರಡು ಮಾತಿಲ್ಲ. ನಿಮ್ಮ ಬರಹ ಚನ್ನಾಗಿದೆ.

Subrahmanya said...

ಮನಮುಕ್ತಾ...
ಅವರು ಹಾಡುವ ಹಾಡುಗಳಲ್ಲೇ ಅವರ ದಾರಿಯೂ ಇದೆಯಲ್ಲವೇ...ಖಿಡಿ ಸೂಪರ್ರಾ...:) ಇದು ವಾಸ್ತವ ಕೂಡಾ. ಧನ್ಯವಾದ

Subrahmanya said...

ಚುಕ್ಕಿಚಿತ್ತಾರ...
ಹಾಡು ಹಕ್ಕಿಗೆ ಬೇಕೆ , ಬಿರುದು ಸನ್ಮಾನ ?? ಎಲ್ಲವೂ ಅಲ್ಲೇ ಇದೆ ಅಲ್ಲವೆ . ಒಂಥರಾ Identity crisisse..for both !!?? ಧನ್ಯವಾದ

Subrahmanya said...

ಮುಳಿಯಾಲದವರೇ...,
ನಿಮ್ಮ ಅನಿಸಿಕೆ ಒಪ್ಪಬಹುದು. ಪ್ರತಿಭಾವಂತ ಗಾಯಕಿಯರಿಂದ ಇಂತಹುದು ಬಂದಾಗ ಬೇಸರವಾಗುತ್ತದೆ.ಧನ್ಯವಾದ

Subrahmanya said...

ಪ್ರವೀಣ್ ಅವರೆ,
ಮನುಷ್ಯನ ಗುಣವನ್ನು ತಾವು generalise ಮಾಡಿದ್ದೀರಿ ಎಂದೆನಿಸಿತು ನನಗೆ. ಎತ್ತೆರಕ್ಕೇರಿದವರೆಲ್ಲಾ ಹೀಗೆಯೇ ಮಾತನಾಡುತ್ತಾರೆ ಎಂದು ಎಣಿಸುವುದು ತಪ್ಪಾಗಬಹುದು. ಇನ್ನುಳಿದ ನಿಮ್ಮ ಅಭಿಪ್ರಾಯ ಸತ್ಯವಾದದ್ದು ಮತ್ತು ಕಾಳಜಿಯುಳ್ಳದ್ದು. ಧನ್ಯವಾದ

Subrahmanya said...

ಆಜಾದ್ ಸರ್,
ಕ್ಲಿಪಿಂಗ್ ನೋಡಿದ್ದೀರಿ ನೀವು ಎಂದಮೇಲೆ , ರತ್ನಕ್ಕರ ಭಾವಗಳು ತಮಗೆ ಚೆನ್ನಾಗಿ ಅರ್ಥವಾಗಿರುತ್ತದೆ. ಗಾಯಕಿ, ಹಾಡುವ ಹಕ್ಕನ್ನು ಪಡೆಯಬೇಕೆನ್ನುವುದು ಮತ್ತು ಎಲ್ಲದಕ್ಕೂ credit ಕೊಡಬೇಕೆನ್ನುವುದು ಅಷ್ಟೇನೂ ಸರಿಯಲ್ಲವೆಂದು ನನ್ನ ಅನಿಸಿಕೆ. ಕಾಂಚಾಣ ಕುಣಿಸುತ್ತಿರಬಹುದೆ ?? ಧನ್ಯವಾದ

Subrahmanya said...

ಕಾಕಾಶ್ರೀ,
ನನ್ನ ಲೇಖನದ ಆಂತರ್ಯವನ್ನು ಅರ್ಥೈಸಿ ಹಾರೈಸಿದ್ದೀರಿ, ನಿಮ್ಮ (ನನ್ನ) ಹಾರೈಕೆ ಫಲಿಸಲಿ ಎಂದು ನಾನೂ ಪ್ರಾರ್ಥಿಸುತ್ತೇನೆ. ಧನ್ಯವಾದ

Subrahmanya said...

ಸೀತಾರಾಮ್ ಗುರುಗಳೇ,
ನನ್ನ ಮೆಚ್ಚಿನ ಗಾಯಕಿಯರು ಹೀಗೆ ಮಾತನಾಡಿದ್ದು ಬೇಸರವಾಯಿತು, ಇದು ಬೇಗ ತಿಳಿಯಾಗಲಿ ಎನ್ನುವುದು ನನ್ನ ಹಂಬಲ. ಖಿಡಿ ಮೆಚ್ಚಿದ್ದಕ್ಕೆ ಧನ್ಯವಾದ

Subrahmanya said...

ಶರಶ್ಚಂದ್ರರೆ,
ಸ್ವಾಗತ ನನ್ನ ತಾಣಕ್ಕೆ,
ಬರೆಯುವುದು ಬೇಡವೆಂದು ಸುಮ್ಮನಿದ್ದೆ. Issue ಎಕೋ Prolongue ಆಗ್ತಿದೆ ಅನ್ನಿಸಿತು. ಒಂದಷ್ಟು ತಿಳಿಯಾಗಲಿ ಎಂದು ಬರೆದೆ. ಮೆಚ್ಚಿನ ಕಲಾವಿದೆಯರು ಹೀಗೆ ಗೊಂದಲ ಹುಟ್ಟಿಸಿದಾಗ ಬೇಸರವಾಗುತ್ತದೆಯಲ್ಲವೆ, ....ಧನ್ಯವಾದ

V.R.BHAT said...

ಸಿವನೇ ಸಂಭುಲಿಂಗ, ಚೆನ್ನಾಗಿದೆ ಲೇಖನ,ಅಭಿಪ್ರಾಯ, ಕೊನೇ ಖಿಡಿ ಎಲ್ಲಾ, ಈ ಕೊನೇ ಖಿಡಿಗಳನ್ನೆಲ್ಲ ಸೇರಿಸಿ ಒಂದು ಖಿಡಿ-ಸರ ಮಾಡಿ ಕೊಟ್ಟುಬಿಡಿ, ನಾವು ಖಿಡಿಯನ್ನು ದೊಡ್ಡದಾಗಿ ಮಾಡಿಕೊಂಡು ಜೋರಾಗಿ ಊರೆಲ್ಲ ನಗುವ ಹಾಗೇ ನಗೋಣ ಅಂತ ಆಗದೇ? ಧನ್ಯವಾದ

Subrahmanya said...

ವಿ.ಆರ್. ಭಟ್ಟರೆ,
ನನ್ನ ದನಿಗೆ ನಿಮ್ಮ ದನಿಯನ್ನು ಕೂಡಿಸಿದ್ದಕ್ಕೆ ಧನ್ಯವಾದ ನಿಮಗೆ. ಖೊನೆಖಿಡಿ, ಹಾಗೇ ಸುಮ್ಮನೆ ಬರೆಯುತ್ತಿರುವುದು. ನಿಮಗಿಷ್ಟವಾಯ್ತಲ್ಲ...ಅದೇ ಸಂತೋಷ ನನಗೆ. ನಗುತ್ತಿರಿ..:)

ಸವಿಗನಸು said...

ಶಂಭು,
ವಿಮರ್ಶೆ ಚೆನ್ನಾಗಿ ಮಾಡಿದ್ದೀರ....
ಎ೦ದಿನ೦ತೆ ಕೊನೆ ಖಿಡಿ ಸಕ್ಕತಾಗಿದೆ..

Subrahmanya said...

ಮಹೇಶ್,
ಅವರಲ್ಲಿರುವ ವೈರುಧ್ಯಗಳು ಬೇಸರ ತರಿಸಿತು.ಹಾಡುವವರಿಗೆ ಒಳ್ಳೆಯದಾಗಲಿ, ಅಲ್ಲವೇ...ಧನ್ಯವಾದ
....ಶಂಭು

ಮನಸು said...

shabhu,
nimma vimarshe chennagide...

Subrahmanya said...

ಮನಸು,
:):) ...ಧನ್ಯವಾದ
-ಶಂಭು

ಸಾಗರಿ.. said...

ಎಲ್ಲರಲ್ಲೂ ಇರುವ ಅಹಂ ಒಮ್ಮೊಮ್ಮೆ ಕೆಲವರನ್ನು ಹೀಗೂ ಆಡಿಸುವುದುಂಟು

Subrahmanya said...

ನಿಜ ನಿಮ್ಮ ಮಾತು. ಅಹಂ ನಮ್ಮೊಳಗಿದ್ದರ ಚೆನ್ನು. ಪ್ರದರ್ಶನವಾದಾಗ ಹೀಗೆಲ್ಲಾ ಆಗುತ್ತದೆ. ..ಧನ್ಯವಾದ ನೀವು ಬಂದದಕ್ಕೆ.

nenapina sanchy inda said...

thank you Mr. Bhat for visiting my blog. will go through your blog during my weekend. a rough glance at ur write up shows its interesting. reading is a bit of a task in my notebook.
:-)
malathi S

Subrahmanya said...

ಮಾಲತಿಯವರೆ,
ನೀವು ಬಂದುದು ಸಂತೋಷ. ಬರುತ್ತಿರಿ. ಧನ್ಯವಾದ

Unknown said...

Howdu.. Neevu sariyaagi heliddeeri.. Kone khidi mast mast!!

Subrahmanya said...

ರವಿಕಾಂತ ಗೋರೆ ಯವರೆ,
ಗಾಯಕಿಯರಿಗೆ ಒಳ್ಳೆಯದಾಗಲಿ, ಇನ್ನಷ್ಟು ಒಳ್ಳೆಯ ಹಾಡುಗಳು ಬರಲಿ ಅಲ್ಲವೇ..
ಖಿಡಿ ಮೆಚ್ಚಿದ್ದಕ್ಕೆ ಧನ್ಯವಾದ

ಗೌತಮ್ ಹೆಗಡೆ said...

apaswara unnecessary:( matte koneyallidda shambhulingana joke u superri:)

ಗೌತಮ್ ಹೆಗಡೆ said...

apaswara unnecessary:( matte koneyallidda shambhulingana joke u superri:)

Subrahmanya said...

ಗೌತಮ್,
ದೊಡ್ಡವರು ನನ್ನ ಬ್ಲಾಗಿಗೆ ಬಹಳ ದಿನಗಳ ನಂತರ ಬಂದ್ರಿ :). ಸಂತೋಷ ಆಯ್ತು. :) ....ಬರ್ತಾ ಇರಿ. ಧನ್ಯವಾದ