Mar 24, 2010

ಹೀಗೊಂದು ನವಮಿ..


ಇಂದು ಶ್ರೀರಾಮನವಮಿ
ಪುಟ್ಟ ಬಾಲ-ಬಾಲೆಯರ
ಸಡಗರದ ನವಮಿ
ಪಾನಕ-ಕೋಸಂಬರಿಗಳ
ಮಿಲನದ ಮಹಾನವಮಿ !

ಗುಡಿಯೊಳಗಿರುವ ರಾಮನಿಗೆ
ತಿನಿಸುಗಳು ಬಗೆಬಗೆ
ಮಜ್ಜಿಗೆ, ರಸಾಯನ
ಹುಳಿಯವಲಕ್ಕಿಗಳ ಲಗು-ಬಗೆ ,

ಗುಡಿಯ ಹೊರಗೆ.....
ಭಿಕಾರಿಗಳ ಅದಮ್ಯ ಯಾಚನೆ,
ಗುಡಿಯೊಳಗೆ....
ಭಕ್ಷ-ಭೋಜ್ಯಗಳ ಬಣ್ಣನೆ !
ನಿಮಿಷಕ್ಕೊಂದು ರುಚಿಯ
ಖಾದ್ಯಗಳ ಸಮಾರಾಧನೆ ..,

ರಾಮನನು ಹೊತ್ತು ಸಾಗುವ ಪರಿ
ನೋಡಲದು ಕಣ್ಣಿಗಚ್ಚರಿ !
ಉತ್ಸವದ ಭರದಲಿ
ಭಕ್ತರ ಸಡಗರದಲಿ,
ಹಸಿದ ಜೀವವ ತಳ್ಳಿ...
ಅವನ ಹೊಟ್ಟೆಗಿಟ್ಟು ಕೊಳ್ಳಿ..
ಮುಂದೆ ಸಾಗಿದ್ದು ತಿಳಿಯಲಿಲ್ಲ,
ರಾಮಚಂದ್ರ ಕಣ್ತೆರೆಯಲಿಲ್ಲ !,

ಇಂತಿಪ್ಪ ರಾಮರಾಜ್ಯದಲಿ
ಬೇಡುವ, ಕಾಡುವ ಜೀವಗಳಿಗಿಲ್ಲ..
ಮಜ್ಜಿಗೆ ಪಾನಕ..
ಕುಡಿದವರೇ ಕುಡಿಯುವರು ಮತ್ತೆ..
ಹಳ್ಳದೆಡೆಗೇ ಸದಾ ನೀರು ಹರಿವಂತೆ ..!


 ----------------------------------------------------------------------------------

ಖೊನೆಖಿಡಿ

ಶಂಭುಲಿಂಗ ತನ್ನ ಮಡದಿ  ಮತ್ತು ನಾಲ್ಕು ಮಕ್ಕಳೊಂದಿಗೆ ಮೋಟಾರಿಗೆ ಕಾಯುತ್ತಾ ನಿಂತಿದ್ದ. ಅಲ್ಲಿಗೆ ಗೌಡರ ಆಗಮನವಾಯಿತು...

ಗೌಡ್ರು : ಏನಯ್ಯಾ ಶಂಭು, ..ಚೆನ್ನಾಗಿದ್ದಾವೆ ಮಕ್ಕಳು...ಯಾವಾಗ್ ಆಯ್ತಯ್ಯಾ ನಾಲ್ಕು ಮಕ್ಕಳು ನಿಂಗೆ ?

ಶಂಭುಲಿಂಗ : ಬುದ್ದಿ..ಇವಳು ಚಿಕ್ಕೋಳು, ನಮ್ಮ ಮಗಳು...ಇವ್ನು ನನ್ನ ಎರಡನೇ ಹೆಂಡ್ತಿ ಮಗ, ಇವ್ಳು ನನ್ನ ಮೊದಲನೆ ಹೆಂಡತಿ ಮಗಳು...ಇವನು ದೊಡ್ಡೋನು......
ಇವನು....ಬುದ್ದಿ ನೆನ್ಪೇ ಆಗ್ತಿಲ್ಲಾ..ಯಾವಾಗ್ ಉಟ್ಟಿದ್ ಇವ್ನು ಅಂತ ...!!!!!

                                             ವಿಶ್ಚಾಸದೊಂದಿಗೆ,

25 comments:

ಸಾಗರಿ.. said...

ಶಂಭು ಲಿಂಗ ಅವರೇ,
ಕವನ ತುಂಬಾನೇ ಚೆನ್ನಾಗಿದೆ. ಕೊನೆಯ ಖಿಡಿ ಕೂಡ ಎಂದಿನಂತೆ ಸೂಪರ್.

ಸವಿಗನಸು said...

ವಾಸ್ತವಕ್ಕೆ ಸರಿಯಾಗುವ ಹಾಗೆ ಒಳ್ಳೆ ಕವನ...
ಶ್ರೀರಾಮನವಮಿ ಹಬ್ಬದ ಶುಭಾಶಯಗಳು.....
ಕೊನೆ ಖಿಡಿ ಸರದಾರ....ಎಂದಿನಂತೆ ಸೂಪರ್....

ಸೀತಾರಾಮ. ಕೆ. / SITARAM.K said...

ಬ೦ಡಾಯ ಕವಿ ರಾಮನವಮಿಯ೦ದು ವ್ಯಗ್ರನಾಗಿದ್ದಾನೆ. ಅದ್ಭುತ ವಾಸ್ತವದ ಚಿತ್ರಣ .ಶ್ರೀರಾಮ-ನ ರಾಜಾದರ್ಶಗುಣಗಳು ನಮ್ಮನ್ನಾಳುವ ಭುಪರಿಗೆ ತೋರಿತೆ?
ಖಿಡಿ ಸಕತ್ ಎ೦ದಿನ೦ತೆ.

Unknown said...

Shanbhilingaaa.. Sakat..

nenapina sanchy inda said...

ivattu sanje,namma oorina raama Devara guDiyalli avalakki, kaDale usli, kosambari mattu paanaka vitaraNe aagutte. nanna nepellaa alli.
Khone khiDi is amusing
:-)
malathi S
(for some time got confused with Subhramanya bhat/Shambhulinga
:-)

V.R.BHAT said...

ಕವನ ಚೆನ್ನಾಗಿದೆ, ಅಪರೂಪಕ್ಕೆ ಯಾಕೋ ಕವಿಮನಕ್ಕೆ ಸ್ವಲ್ಪ ಕೋಪದ ತಾಪ ಇದ್ದ ಹಾಗಿದೆ, ಪ್ರಸ್ತುತ ವೇದಿಕೆ ಹಾಗಿರುವಾಗ ಅದು ಸಹಜವೇ,ಕೊನೆ ಖಿಡಿ ತನ್ನ ಮೆರುಗನ್ನು ಹೆಚ್ಚಿಸಿಕೊಂಡಿದೆ, ಧನ್ಯವಾದಗಳು

ಮನದಾಳದಿಂದ............ said...

ಕೋಪ ಬೇಡ ಸ್ವಾಮಿ..........
ರಾಮ ಚಂದ್ರ ಕಣ್ ತೆರೆಯಲಿಲ್ಲ ಅಂತ ಯಾಕೆ ನೀವು ತಲೆಬಿಸಿ ಮಾಡ್ಕೊಂದಿದ್ದೀರಾ?
ಪಾಪ ಅವನಿಗೂ ಸಮಾಯದ ಅಭಾವ ಅಲ್ವಾ? ಹೋಗ್ಲಿ ಬಿಡಿ
ವಾಸ್ತವ ಎಂದಿಗೂ ಬದಲಾಗೊಲ್ಲ!
"ಗುಡಿಯ ಭಿಕಾರಿಗಳ ಅದಮ್ಯ ಯಾಚನೆ,ಗುಡಿಯೊಳಗೆ ಭಕ್ಶ-ಭೋಜ್ಯಗಳ ಬಣ್ಣನೆ
ಅವನ ಹೊಟ್ಟೆಗಿಟ್ಟು ಕೊಳ್ಳಿ ಮುಂದೆ ಸಾಗಿದ್ದು ತಿಳಿಯಲಿಲ್ಲ,ರಾಮಚಂದ್ರ ಕಣ್ತೆರೆಯಲಿಲ್ಲ "!,
ವಾಸ್ತವಿಕತೆಗೆ ಹಿಡಿದ ಕನ್ನಡಿ!

ಮನಮುಕ್ತಾ said...

ಕವನ , ಖಿಡಿ ಎರಡೂ ಚೆನ್ನಾಗಿದೆ.

ಮನಸಿನಮನೆಯವನು said...

' ಶಂಭುಲಿಂಗ' ಅವ್ರೆ..,

ಹೇಳಬೇಕೆಂದದೆಲ್ಲ ಹಿರಿಯರೇ ಹೇಳಿದ್ದಾರೆ..
ಅವರ ಮಾತುಗಳನ್ನೇ ಅನುಕರಿಸುತ್ತೇನೆ..
ಎರಡೂ ಚೆನ್ನಾಗಿವೆ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

ತೇಜಸ್ವಿನಿ ಹೆಗಡೆ said...

ಕವನ ತುಂಬಾ ಚೆನ್ನಾಗಿದೆ. ಮನಸಿಗೆ ತಟ್ಟುವಂತಿದೆ. ನಾವಿಲ್ಲಿ ಹೆಚ್ಚಾಗಿದ್ದನ್ನು, ಮುಸುರೆ, ವ್ರತ ಎಂದೆಲ್ಲಾ ಚೆಲ್ಲುತ್ತಿದ್ದರೆ ಇನ್ನೊಂದೆಡೆ ಹಳಸಿದ ಅನ್ನ/ತಿಂಡಿಗೂ ಜಗಳ ಹತ್ತಿರುತ್ತದೆ! ಎಂತಹ ತಾರತಮ್ಯ ಅಲ್ಲವೇ? ನನಗೂ ಇದನ್ನೆಲ್ಲ ಯೋಚಿಸಿದಾಗ ತುಂಬಾ ಬೇಸರವಾಗುತ್ತದೆ. ಆದರೆ ವ್ಯವಸ್ಥೆಯೊಳಗಿನ ವ್ಯವಸ್ಥಿತೆ ಈ ಅವ್ಯವಸ್ಥೆಯನ್ನು ಸರಿಪಡಿಸಲು ಈಗ ಶ್ರೀರಾಮ ಬಂದರೂ ಸುಲಭದಲ್ಲಾಗದೇನೋ!!!

Raghu said...

olleya kavanada jotege super Kidi..!
Raaghu

Subrahmanya said...

* ಸಾಗರಿಯವರೆ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

* ಸವಿಗನಸು,
ನಿಮಗೂ ಲೇಟ್ ಶುಭಾಶಯಗಳು :)

* ಸೀತಾರಾಮ ಗುರುಗಳೇ,

ಬಡಾಯಿ ಕವಿಯೇ ?? :) ..ಮಧ್ಯ ಅನುಸ್ವರ ನೋಡಲಿಲ್ಲ...:) ಬಂಡಾಯ ಅಂದರೆ..ಬರಗೂರರು ಕೇಸ್ ಹಾಕಬಹುದು..ಅವರ ಸ್ಥಾನ ಕಿತ್ಕೊಂಡೆ ಅಂತಾ...:)...
ಧನ್ಯವಾದ ನಿಮ್ಮ ಪ್ರೀತಿಗೆ.

Subrahmanya said...

* ರವಿಕಾಂತ್ ಗೋರೆ,
ಥ್ಯಾಂಕ್ಸು..!

* ಮಾಲತಿಯವರೆ,

ಮತ್ತೆ ನಿಮ್ಮ ಊರಿಗೆ ಹೋಗಿ ಬರಬಾರದೆ ?? :)
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ

* ವಿ. ಆರ್. ಬಿ.ಯವರೆ,

ಕೋಪದ ತಾಪ ಜರ್ರನೆ ಇಳಿದುಹೋಯ್ತು..ನಿಮ್ಮ ಆತ್ಮೀಯ ಪ್ರತಿಕ್ರಿಯೆ ನೋಡಿ:) ...ಧನ್ಯವಾದಗಳು

Subrahmanya said...

ಪ್ರವೀಣ್ ಅವರೇ,

ನಿಜ ನಿಮ್ಮ ಮಾತು, ಅವನಿಗೂ ಸಮಯದ ಅಭಾವವಿದೆ ಬಿಡಿ...ಏಕಕಾಲಕ್ಕೆ ಎಲ್ಲೆಡೆಯೂ ಬರಬೇಕಲ್ಲ ಶ್ರೀರಾಮ..!
ಧನ್ಯವಾದಗಳು

Subrahmanya said...

* ಮನಮುಕ್ತಾ,
ಧನ್ಯವಾದಗಳು.

* ಗುರುದೆಸೆ,
ಧನ್ಯವಾದಗಳು

* ತೇಜಸ್ವಿನಿ ಹೆಗಡೆಯವರೆ,
ನಿಜ ನಿಮ್ಮ ಅಭಿಪ್ರಾಯ. ಸೇರದೆಂದು ಕೈಚೆಲ್ಲಿ ಬಿಟ್ಟು ಹೋಗುವ ಕೂಳಿಗೆ , ಅದೆಷ್ಟೋ ನಿರ್ಗತಿಕರು ಹೊಡೆದಾಡಿಕೊಂಡು ತಿನ್ನುತ್ತಾರೆ...ವಾಸ್ತವವೇ ಹಾಗಿದೆ.

ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ.

Subrahmanya said...

ರಾಘು,
Thank u very much.

ಚುಕ್ಕಿಚಿತ್ತಾರ said...

ನಿಮ್ಮಕವಿತೆ ಚನ್ನಾಗಿದೆ...
ನಿಜ ಅದೆಷ್ಟೋ ಹೊಟ್ಟೆಗಿಲ್ಲದವರು ಕೈ ಚಾಚಿ ಬೇಡುತ್ತಿರುವಾಗ
ನೈವೇದ್ಯವಾಗಿಲ್ಲವೆ೦ದು ಹೊರಗಟ್ಟುವ ಜನರಿರುವಾಗ.... ನಿಮ್ಮ ರಾಮರಾಜ್ಯದ ಕನಸು ನನಸಾಗಬಹುದೇ...?

sunaath said...

ಪುತ್ತರ್,
ಬಾಳಿನ ವಾಸ್ತವದ ವಿಡಂಬನೆ ನಿಮ್ಮ ಕವನದಲ್ಲಿ ಕಟುವಾಗಿ ಬಂದಿದೆ. A person who feels is a person who lives.

shivu.k said...

ಶಂಭುಲಿಂಗ ಸರ್,

ಕವನ ಚೆನ್ನಾಗಿ ಬರೆದಿದ್ದೀರಿ. ಕೊನೆ ಖಿಡಿ ವಿಚಾರ ನನಗೆ ಗೊತ್ತಿರಲಿಲ್ಲ ಅದನ್ನು ಓದಿದೆ ತುಂಬಾ ಚೆನ್ನಾಗಿದೆ...ಹೀಗೆ ಬರೆಯುತ್ತಿರಿ..ನಿಮ್ಮ ಬ್ಲಾಗನ್ನು ಲಿಂಕಿಸಿಕೊಂಡು ಹಿಂಬಾಲಿಸುತ್ತಿದ್ದೇನೆ..
ಧನ್ಯವಾದಗಳು

Subrahmanya said...

ಚುಕ್ಕಿಚಿತ್ತಾರ,
ಮೆಚ್ಚಿ ಪ್ರೋತ್ಸಾಹಿಸಿದ ನಿಮಗೆ ಧನ್ಯವಾದಗಳು

Subrahmanya said...

ಕಾಕಾಶ್ರೀ,

" A person who feels is a person who lives. "........Accepted :):).

ಧನ್ಯವಾದಗಳು ಕಾಕ.

Subrahmanya said...

ಶಿವು ಸರ್,
ನಿಮ್ಮ ಆತ್ಮೀಯತೆಗೆ ಧನ್ಯವಾದಗಳು. ನೀವು ಲಿಂಕಿಸಿದ್ದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಪ್ರೋತ್ಸ್ಸಾಹ ಹೀಗೆ ಇರಲಿ.
ಧನ್ಯವಾದ

ಸಾಗರದಾಚೆಯ ಇಂಚರ said...

ಸರ್
ತುಂಬಾ ಚೆನ್ನಾಗಿದೆ ಕವನ ಮತ್ತು ನೆನಪಾಗದ ಮಕ್ಕಳು
ನಿಮ್ಮ ಶಂಭು ಲಿಂಗ ಪುರಾಣ ಇಷ್ಟವಾಯಿತು

Subrahmanya said...

ಗುರುಮೂರ್ತಿಯವರೆ,

ನನ್ನ ಬ್ಲಾಗಿಗೆ ನಿಮಗೆ ಸ್ವಾಗತ. ಮೆಚ್ಹಿ ಪ್ರೋತ್ಸಾಹಿಸಿದ ನಿಮಗೆ ಧನ್ಯವಾದಗಳು.

PrashanthKannadaBlog said...

ತುಂಬಾ ಚೆನ್ನಾಗಿದೆ ಬರಹಗಳು. ಧನ್ಯವಾದಗಳು