May 27, 2010

ಚಿ.ಮೂ. ಅವರ ಮನವಿ



ಈಗ ಮನವಿ ಮಾಡಿಕೊಂಡಿರುವವರು ಹಿರಿಯ ಸಾಹಿತಿ-ಚಿಂತಕ ಶ್ರೀಯುತ ಡಾ. ಎಂ. ಚಿದಾನಂದಮೂರ್ತಿಯವರು. ಶ್ರೀಯುತರು ಪುಸ್ತಕವೊಂದನ್ನು ಬರೆಯುವ ಉದ್ದೇಶದಿಂದ ಪತ್ರಿಕಾ ಮಾಧ್ಯಮಗಳಲ್ಲಿ ಪತ್ರಮುಖೇನ ಸಮಸ್ತ ಕನ್ನಡಿಗರೆಲ್ಲರಲ್ಲಿ ಸಂಬಂಧಪಟ್ಟ ವಿಚಾರದ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಶ್ರೀ. ಚಿ.ಮೂ. ಅವರು ಬರೆಯುತ್ತಿರುವ ಪುಸ್ತಕ "ಗೋವು-ಗೋಮಾತೆ-ಗೋಹತ್ಯೆ ನಿಷೇಧ" ಬಗೆಗೆ. ಪುಸ್ತಕದ ವಿಚಾರವರ್ಧನೆಗಾಗಿ ಸಮಸ್ತರಿಂದಲೂ ಅವರು ಮಾಹಿತಿಯನ್ನು ಬಯಸಿದ್ದಾರೆ. ಅವರ ಕೋರಿಕೆಗೆ ಸ್ಪಂದಿಸುವ ಹೊಣೆ ನಮ್ಮೆಲರದು ಎಂಬುದು ನನ್ನ ಅಭಿಪ್ರಾಯ. ಆ ಮನವಿ ಪತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ.




                           
ಗೋವಿನಿಂದ ದೊರೆಯುವ "ಪಂಚಗವ್ಯ"ದ ವಿಚಾರವಾಗಿ ಇಲ್ಲಿ ಸ್ವಲ್ಪ ಹೇಳಬಯಸುತ್ತೇನೆ.
ಪಂಚಗವ್ಯವೆಂದರೆ ಗೋವಿನಿಂದ ದೊರೆಯುವ ಐದು ಪ್ರಮುಖ ಮೂಲಾಂಶಗಳು. ಅವು ಹೀಗಿವೆ.
೧) ಗೋಮೂತ್ರ (ಗಂಜಲ)
೨) ಸೆಗಣಿ  (ಗೋಮಯ)
೩) ಹಾಲು (ಕ್ಷೀರ)
೪) ಮೊಸರು (ದಧಿ)
೫) ಸರ್ಪಿ (ತುಪ್ಪ)


ವೇದಗಳಲ್ಲಿ ( ಪರಾಶರೋಕ್ತಾಗಮ ಸೂತ್ರ, ಆಶ್ವಲಾಯನ ಸೂತ್ರ, ಶೌನಕಾದ್ಯಾಚಾರ್ಯ ಗ್ರಂಥ ಪ್ರಕಾರೇಣ) ಗೋವಿನಿಂದ ದೊರೆಯುವ ಪಂಚಗವ್ಯಕ್ಕೆ ಪವಿತ್ರಸ್ಥಾನವನ್ನು ನೀಡಲಾಗಿದೆ. ಗರ್ಭಗೃಹದಲ್ಲಿ ಸ್ಥಾಪಿತವಾಗುವ ಶಿಲಾಮೂರ್ತಿಗೆ (ಲಿಂಗಕ್ಕೆ) ಪಂಚಗವ್ಯ ಸ್ನಪನ (ಸ್ನಾನ) ಅತ್ಯಂತ ಮುಖ್ಯವಾದುದು. ಪ್ರತ್ಯೇಕವಾಗಿ ಸಂಗ್ರಹಿಸಿದ ಪಂಚಗವ್ಯವನ್ನು ಮೇಳೈಸುವ( ಬೆರೆಸುವ, ಸೇರಿಸುವ) ಮೊದಲು ಮಂತ್ರೋಕ್ತವಾಗಿ ದೇವತೆಗಳನ್ನು ಆವಾಹನೆ ಮಾಡಲಾಗುತ್ತದೆ. ಮೊದಲಿಗೆ ಚತುರಶ್ರ ಮಂಡಲವನ್ನು ರಚಿಸಿ (ಚೌಕಾಕಾರ) ಅದರ ಮೇಲೆ ಧಾನ್ಯವನ್ನು ಹರಡಿ ಪಂಚಗವ್ಯ ತುಂಬಿದ ಪಾತ್ರೆಗಳನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ.
ಪೂರ್ವಕ್ಕೆ ಗೋಮೂತ್ರವನ್ನು (ಗಂಜಲ)
ದಕ್ಷಿಣಕ್ಕೆ ಗೋಮಯವನ್ನು (ಸೆಗಣಿ)
ಪಶ್ಚಿಮಕ್ಕೆ ಕ್ಷೀರವನ್ನು (ಹಾಲು)
ಉತ್ರರಕ್ಕೆ ದಧಿಯನ್ನು (ಮೊಸರು)
ಮಧ್ಯದಲ್ಲಿ ಸರ್ಪಿಯನ್ನು (ತುಪ್ಪ)  ಕ್ರಮವಾಗಿ ಇರಿಸಿ, ಈಶಾನ್ಯದಲ್ಲಿ ಅಗತ್ಯಕ್ಕೆ ತಕ್ಕಷ್ಟು ಕುಶೋದಕವನ್ನು (ದರ್ಭೆ+ನೀರು) ಇರಿಸಿ ಮಂತ್ರೋಕ್ತವಾಗಿ ದೇವತೆಗಳನ್ನು ಅವಾಹಿಸಲಾಗುತ್ತದೆ.


ಗೋಮೂತ್ರಕ್ಕೆ --ಸವಿತೃವನ್ನು ( ಸೂರ್ಯ , ತತ್ಸವಿತುಃ ,ಇತಿ ಮಂತ್ರೇಣ)
ಗೋಮಯಕ್ಕೆ -- ಶ್ರಿಯಂ ( "ಶ್ರೀ"=ಸಿರಿ=ಲಕ್ಷ್ಮಿ, ಪಾರ್ವತಿ ಇತ್ಯಾದಿ.  ಗಂಧದ್ವಾರಾ, .........)
ಕ್ಷೀರಕ್ಕೆ -- ಸೋಮನನ್ನು ( ಆಪ್ವಾಯಸ್ವ...)
ದಧಿಗೆ  --ಇಂದ್ರನನ್ನು (ದಧಿಕ್ರಾವ್ಣ...)
ಸರ್ಪಿಗೆ -- ಪರಮೇಷ್ಥಿಯನ್ನು ( ಶುಕ್ರಮಸಿ...)
ಮಂತ್ರೋಕ್ತವಾಗಿ  ಆವಾಹಿಸಿ ಅಂತ್ಯದಲ್ಲಿ ಕುಶೋದಕಕ್ಕೆ "ಬ್ರಹ್ಮ"ನನ್ನು ಆವಾಹಿಸಲಾಗುತ್ತದೆ. ಮುಂದಿನದು ಶಾಸ್ತ್ರೋಕ್ತ ರೀತಿಯ ಪೂಜಾದಿಗಳು. ನಂತರ ಪ್ರತ್ಯೇಕವಾಗಿಟ್ಟಿರುವ ಪಂಚಗವ್ಯವನ್ನು ಒಂದೇ ಪಾತ್ರೆಯಲ್ಲಿ ಸೇರಿಸುವ ಕ್ರಮ. ಮೇಳನದ ನಿಯಮ ಮತ್ತು ಕ್ರಮ ಹೀಗಿದೆ.


|| ಪಲಮೇಕಂತು ಗೋಮೂತ್ರಂ ಅಂಗುಷ್ಠಾರ್ಧಂತು ಗೋಮಯಂ |
ಕ್ಷೀರಂ ಸಪ್ತಪಲಂ ಪ್ರೋಕ್ತಂ ದಧಿತ್ರಿಪಲ ಮೇವಚ |
ಸರ್ಪಿರೇಕಪಲಂ ಪ್ರೋಕ್ತಂ ತ್ರಿಪಲಂತು ಕುಶೋದಕಂ|


"ಒಂದು ಬಾರಿ ಹೆಚ್ಚೇ ಎನ್ನುವಂತೆ ಗೋಮೂತ್ರವನ್ನೂ, ಅಂಗುಷ್ಠ (ಹೆಬ್ಬೆರಳು)ದ ಅರ್ಧದಷ್ಟು ಸೆಗಣಿಯನ್ನೂ, ಏಳು ಬಾರಿ ಹಾಲನ್ನೂ, ಮೂರು ಬಾರಿ ಮೊಸರನ್ನೂ , ಒಂದು ಬಾರಿ ತುಪ್ಪವನ್ನೂ ಬೇರೊಂದು ಪಾತ್ರೆಯಲ್ಲಿ ಬೆರೆಸಿ, ಅಗತ್ಯಕ್ಕೆ ತಕ್ಕಷ್ಟು ಕುಶೋದಕವನ್ನು ಸೇರಿಸುವುದು. ವೇದಾಗಮಶಾಸ್ತ್ರಗಳಲ್ಲಿ "ಗೋವಿನ" ಉತ್ಪನ್ನಗಳಿಗೆ ಅತ್ಯುಚ್ಚ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಇಂತಹ ಪಂಚಗವ್ಯ ಸ್ನಾನ ಮತ್ತು ಪಾನದಿಂದ ಆರೋಗ್ಯವೃಧ್ದಿಸುವುದು ಅತ್ಯಂತ ಖಚಿತ. 
ಶ್ರೀ ಚಿ.ಮೂ. ಅವರ ಮನವಿಗೆ ನಾನೂ ಕೂಡ ಸ್ಪಂದಿಸಲಿದ್ದೇನೆ. ನಿಮ್ಮ ಸಹಕಾರವೂ ಇರಲೆಂದು ಪ್ರಾರ್ಥಿಸುತ್ತೇನೆ.


ಚಿ.ಮೂ. ಅವರ ವಿಳಾಸ.


ಡಾ. ಎಂ . ಚಿದಾನಂದಮೂರ್ತಿ
1013B, 4ನೆಯ ಅಡ್ಡರಸ್ತೆ, 11ನೆಯ ಮುಖ್ಯರಸ್ತೆ, ಹಂಪಿನಗರ,
ಬೆಂಗಳೂರು- 560104.    


.................................................................................................


  
ಖೊನೆಖಿಡಿ :


ಕೈಲಾಸಂ ಹೇಳಿದ್ದು. ನಾನು ಕದ್ದಿದ್ದು !.

" ಸೆರ‍್ಮನೆಗೋದ್ರೂ ಸೆರ‍್ಮನೀಸ್ನ ಬಿಡ್ಬಾರ‍್ದೂ ನನ್ರಾಜಾ "


  




ವಂದನೆಗಳೊಂದಿಗೆ.... 

26 comments:

ಚುಕ್ಕಿಚಿತ್ತಾರ said...

ಉತ್ತಮ ಕಳಕಳಿ...

ನೀವು ಹೇಳಿದ೦ತೆ ಪ೦ಚಗವ್ಯವನ್ನು ಆರೋಗ್ಯವ್ರುದ್ಧಿಗಾಗಿ ಬಳಸುವುದು ಬಹು ಹಿ೦ದಿನಿ೦ದಲೂ ನಡೆದುಬ೦ದ ಪದ್ಧತಿ..ಮತ್ತು ಶಾಸ್ತ್ರ..
ಅಲ್ಲದೆ ನಮ್ಮಕಡೆ ಈ ಪ೦ಚಗವ್ಯವನ್ನು ಕ್ರಿಮಿನಾಶಕವಾಗಿ ಮತ್ತು ಭೂಮಿಯ ಪಲವತ್ತತೆಗಾಗಿಯೂ ಸಿ೦ಪಡಿಸಿ .. ಬಳಸುತ್ತಾರೆ..
ಉತ್ತಮ ಮಾಹಿತಿಗಾಗಿ ವ೦ದನೆಗಳು..

ಸೀತಾರಾಮ. ಕೆ. / SITARAM.K said...

ಪ೦ಚಗವ್ಯದ ಮಹತ್ವವನ್ನು ತಯಾರಿಕಾ ವಿಧಾನವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ನೀನಾರಿಗಾದೆಯೋ ಎಲೆಮಾನವ ಹಾಡಿನಲ್ಲಿ ಗೋವಿನ ಉಪಯುಕ್ತತೆ ಬಗ್ಗೆ ಬಗ್ಗೆ ಸಮಗ್ರ ವಿವರಣೆ ಇದೆ. ಸಧ್ಯದ ಪಠ್ಯಕ್ರಮದಲ್ಲಿ ಈ ಹಾಡು ಇಲ್ಲದಿರಲೂಬಹುದು!

sunaath said...

ಪಂಚಗವ್ಯ ತಯಾರಿಕೆಗೆ ಇಂತಹ ವಿಧಾನ ಇರುವದು ಗೊತ್ತಿರಲಿಲ್ಲ, ಪುತ್ತರ್. ಚಿದಾನಂದ ಮೂರ್ತಿಯವರಿಗೆ ಈ ಮಾಹಿತಿಯನ್ನು ನೀವು ಕಳುಹಿಸಲೇ ಬೇಕು.
-ಕಾಕಾಶ್ರೀ

ಸವಿಗನಸು said...

ಪ೦ಚಗವ್ಯದ ಬಗ್ಗೆ ಒಳ್ಳೆ ಮಾಹಿತಿ....
ಚಿದಾನಂದ ಮೂರ್ತಿಯವರಿಗೆ ಇದನ್ನು ಕಳುಹಿಸಿ...

ಮನದಾಳದಿಂದ............ said...

ಪಂಚಗವ್ಯದ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಿದ್ದೀರಾ. ಗೋವು ಅತ್ಯಂತ ಪವಿತ್ರವಾದದ್ದು. ಗೋವು ಎಲ್ಲಾ ರೀತಿಯಿಂದಲೂ ಉಪಯುಕ್ತ. ಆದ್ದರಿಂದಲೇ ಅಲ್ಲವೇ ಗೋವನ್ನು ಕಾಮಧೇನು ಎಂದು ಪೂರ್ವಿಕರು ಹೇಳಿದ್ದು?

ದಿನಕರ ಮೊಗೇರ said...

namma maneyalli, ene poojaa kaarya nadeyuvu diddaroo PANCHAGAVYA tayaarisi, simpadisuttiddaru...... nenapide bantu..... dhanyavaada....

Subrahmanya said...

ಚುಕ್ಕಿಚಿತ್ತಾರ,

ದನದ ಗೊಬ್ಬರ ಮಣ್ಣಿನ ಫಲವತ್ತೆಯನ್ನು ಹೆಚ್ಚಿಸುತ್ತದೆ, ಅಂತೆಯೇ ಇಂದಿಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಗಣಿ ಗೊಬ್ಬರದ ಬಳಕೆಯಿದೆ. ಕ್ರಿಮಿನಾಶಕವಾಗಿಯೂ ಬಳಸುವುದನ್ನು ನೋಡಿದ್ದೇನೆ. ಮಾಹಿತಿಯನ್ನು ಹಂಚಿಕೊಡ್ಡಿದ್ದಕ್ಕೆ ಥ್ಯಾಂಕ್ಸ್.

Subrahmanya said...

ಸೀತಾರಾಮಜಿ,

"ನೀನಾರಿಗಾದೆಯೋ ಎಲೆ ಮಾನವ " ಎಂತಹ ಹಾಡು !. ತಟ್ಟಿದರೆ ಸೆಗಣಿಯಾದೆ, ನೊಸಲಿಗಿಟ್ಟರೆ ವಿಭೂತಿಯಾದೆ..ಹೀಗೆಲ್ಲಾ ಇದೆ ಅಲ್ಲವೇ ಹಾಡಲ್ಲಿ. ಎಂತಹ ಸತ್ವಯುತ ಹಾಡುಗಳು ಬರುತ್ತಿದ್ದವು ಆಗೆಲ್ಲಾ.

Subrahmanya said...

ಕಾಕಾಶ್ರೀ,

Ok. Done.

Subrahmanya said...

ಪ್ರವೀಣ್ ಅವರೆ,

ಕಾಮಧೇನು-ಕಲ್ಪವೃಕ್ಷಗಳು ಇಂದಿಗೂ ಅವುಗಳ ಪಾವಿತ್ರ್ಯತೆಯನ್ನು ಉಳಿಸಿಕೊಂಡಿವೆ. ಮನುಷ್ಯ , ಮನುಷ್ಯನಾಗಿಲ್ಲ ಅಷ್ಟೆ !.

Subrahmanya said...

ಸವಿಗನಸು,

Ok.

Subrahmanya said...

ದಿನಕರ್ ಅವರೆ,

ಪಂಚಗವ್ಯದ ಬಳಕೆ ವೇದಕಾಲೀನದಿಂದಲೂ ಇದೆ. ಅದರ ಮಹತ್ವವನ್ನು ಇನ್ನಷ್ಟು ಪ್ರಚುರಿಸಬೇಕಿದೆಯಷ್ಟೆ. ಧನ್ಯವಾದಗಳು.

ಮನಸು said...

ಸುಬ್ರಹ್ಮಣ್ಯರವರೆ,
ಏನೆಲ್ಲ ತಿಳಿದುಕೊಂಡಿದ್ದೀರಿ ನಿಜಕ್ಕೂ ನಾವುಗಳು ಧನ್ಯರು ನಿಮ್ಮಂತವರು ನಮ್ಮೊಟ್ಟಿಗಿರುವುದು.......ನಿಮ್ಮ ಬರಹ ಅಚ್ಚುಕಟ್ಟಾಗಿ ಅರ್ಥವಾಗುತ್ತದೆ ಅಲ್ಲದೆ ಮಾಹಿತಿಯುಕ್ತ ಕೂಡ.
ಧನ್ಯವಾದಗಳು...

Subrahmanya said...

ಮನಸು,

ಎಲ್ಲಾ ನಿಮ್ಮಂತಹವರ ಸಹವಾಸ !. ಅತ್ಯುತ್ತಮ ಬ್ಲಾಗಿಗರ ಜೊತೆ ಸೇರಿ ನಾನು ಕಲಿಯುತ್ತಿದ್ದೇನೆ ಅಷ್ಟೆ. ನಿಮ್ಮ ಸ್ಪಂದನೆಗೆ ವಂದನೆಗಳು.

Unknown said...

Informative.. Nice..

Subrahmanya said...

ರವಿಕಾಂತರೆ,

ನಿಮಗೆ ಗೊತ್ತಿರಬಹುದಾದ ಮಾಹಿತಿಯನ್ನು ದಯವಿಟ್ಟು ಚಿದಾನಂದಮೂರ್ತಿಯವರಿಗೆ ಕಳುಹಿಸಿಕೊಡಿ. ಧನ್ಯವಾದ.

ಸಾಗರದಾಚೆಯ ಇಂಚರ said...

nijakko olleya prayatna

Subrahmanya said...

ಗುರುಮೂರ್ತಿಯವರೆ,

ಬಿಡುವು ಮಾಡಿಕೊಂಡು ಬಂದಿದ್ದೀರಿ. ತುಂಬ ಧನ್ಯವಾದಗಳು.

ದೀಪಸ್ಮಿತಾ said...

ಉತ್ತಮ ಮಾಹಿತಿ ಭಟ್ರೆ. ಯಾವುದೋ ರಾಜಕೀಯ ಲಾಭಕ್ಕಾಗಿ ನಮ್ಮ ಹಿಂದಿನ ಸಂಸ್ಕೃತಿ, ಜ್ನಾನ ಇವನ್ನೆಲ್ಲ ನಾಶ ಮಾಡುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಂಥಾ ಜ್ನಾನ, ಮತ್ತು ನಮ್ಮ ಗೋವುಗಳ ರಕ್ಷಣೆ ತ್ವರಿತವಾಗಿ ಆಗಬೇಕಿದೆ. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಸ್ವಾಮೀಜಿಗಳು ಕೂಡಾ ಈ ನಿಟ್ಟಿನಲ್ಲಿ ಉತ್ತಮ ಕಾರ್ಯಮಾಡುತ್ತಿದ್ದಾರೆ

Subrahmanya said...

ದೀಪಸ್ಮಿತರೆ,

ಸರಿಯಾಗಿ ಹೇಳಿದ್ದೀರಿ. ನಮ್ಮದನ್ನು ನಾವು ಉಳಿಸಿಕೊಳ್ಳಲು ಸಾಹಸ ಪಡಬೇಕಿದೆ ಇಂದು. ರಾಘವೇಶ್ವರ ಶ್ರೀಗಳ ಸತ್ಕಾರ್ಯಗಳು ವಿಶ್ವಕ್ಕೇ ಮಾದರಿಯಾದಂತಹುದು. ಗೋವುಗಳ ರಕ್ಷಣೆ, ಪಾಲನೆಗೆ ಇಂತಹ ಇನ್ನಷ್ಟು ಕಾರ್ಯಗಳು ಆಗಬೇಕಿದೆಯೆನಿಸುತ್ತದೆ.

ಜಲನಯನ said...

ಸುಬ್ರಹ್ಮಣ್ಯರೇ...ಗೋವಿನ ಬಗ್ಗೆ ಹಲವು ವಿಶೇಷತೆಗಳನ್ನು ಚನ್ನಾಗಿ ತಿಳಿಸಿದ್ದೀರಿ..ಇದರಲ್ಲಿ ನನ್ನದೊಂದು ಅನಿಸಿಕೆಯಿದೆ..ತಪ್ಪಿದ್ದರೆ ತಿದ್ದಿ...ಹಿಂದೆ..ಆಶ್ರಮ ಪೂಜಿತ ಗೋವಿನ ಮೇವುಗಳು --ವಿವಿಧ ಹುಲ್ಲು ಮತ್ತು ಸಸ್ಸ್ಯ್ ಪ್ರಬೇಧಗಳು..ಅವುಗಳು ಗೋವಿನ ಮೂತ್ರಕ್ಕೆ ವಿಶೇಷ ಗುಣಗಳನ್ನು ಪ್ರಸಾದಿಸುತ್ತಿದ್ದವು ಅಲ್ಲವೇ..?

Subrahmanya said...

ಜಲನಯನ,

ನಿಮ್ಮ ವಿಚಾರ ಸರಿಯಾಗಿದೆ !. (ನಿಮ್ಮನ್ನು ತಿದ್ದುವುದಕ್ಕಿಂತಲು ನಿಮ್ಮಿಂದ ತಿಳಿಯುವುದೇ ಸಾಕಷ್ಟಿದೆ.) ಜೊತೆಗೆ, ಇಂದಿನ ಪರಿಸರ ಮಾಲಿನ್ಯದ ಪ್ರಭಾವವೂ ಅಂದು ಇರಲಿಲ್ಲ, ಆದುದರಿಂದ ಗೋವಿನ ಉತ್ಪನ್ನಗಳಲ್ಲಿ ಉತೃಷ್ಟತೆಯಿರುತ್ತಿತ್ತು. ಇಂದು ಆಧುನಿಕ ಯುಗದಲ್ಲಿ ಗೋವಿನ ಆಹಾರಕ್ರಮ ತೀರಾ ಬದಲಾಗಿಲ್ಲವಾದರೂ ಉತ್ಪನ್ನಗಳ quality ಕಮ್ಮಿಯಾಗುತ್ತಿರುವುದು ಸತ್ಯ. ಇದಕ್ಕಾಗಿಯೇ ಗೋವುಗಳ ಪೋಷಣೆ ಮತ್ತು ರಕ್ಷಣೆ ಅತ್ಯವಶ್ಯಕವಾಗಿದೆ.

prabhamani nagaraja said...

ಚಿಕ್ಕ೦ದಿನಿ೦ದಲೂ ನಮ್ಮನ್ನು ತಮ್ಮ ಕ್ಷೀರೋತ್ಪನ್ನಗಳಿ೦ದ ಪೋಷಿಸುತ್ತಾ ಬ೦ದಿರುವ ಗೋವುಗಳ ಬಗ್ಗೆ ನಿಮಗಿರುವ ಪ್ರೀತಿ & ಗೌರವ ಅನನ್ಯ ಹಾಗೂ ಅನುಸರಣೀಯ. ಹಳ್ಳಿಯಲ್ಲಿ ಹಸುಕರುಗಳ ಒಡನಾಟದಲ್ಲೇ ಬೆಳೆದ ನಾನು ನ೦ತರದ ಬೆಳವಣಿಗೆಗಳನ್ನು ನೋಡಿ ಖೇದಗೊ೦ಡು ಬರೆದಿದ್ದ ಕವನವೊ೦ದನ್ನು ನನ್ನ ಬ್ಲಾಗ್ ನಲ್ಲಿ ಹಾಕಿದ್ದೇನೆ. ಒಮ್ಮೆ ಭೇಟಿ ಕೊಡಿ.

Subrahmanya said...

ಪ್ರಭಾಮಣಿಯವರೆ,

ನಿಮ್ಮ ಅಕ್ಕರೆಗೆ ಧನ್ಯವಾದಗಳು. ನಮಗೆಲ್ಲಾ ಚಿಕ್ಕಂದಿನಲ್ಲಾದರೂ ಹಸುಗಳ ಪ್ರಕೃತಿಸಹಜ ಜೀವಿತವನ್ನ ನೋಡಿದ ಭಾಗ್ಯವಿದೆ. ಇಂದಿನ ಪೀಳಿಗೆಗೆ ಹಸು ಮತ್ತು ಎತ್ತುಗಳ ನಡುವಿನ ವ್ಯತ್ಯಾಸವೇ ತಿಳಿದಿರುವುದಿಲ್ಲವಲ್ಲ ..!

Dr.D.T.Krishna Murthy. said...

'ಪಂಚಗವ್ಯ' ನಿಜಕ್ಕೂ ಅಧ್ಬುತ !ಎರಡು ಮಾತಿಲ್ಲ.ಮಾಹಿತಿಗಾಗಿ ಧನ್ಯವಾದಗಳು.

Subrahmanya said...

ಕೃಷ್ಣಮೂರ್ತಿಯವರೆ,

ನಿಮಗೆ ತುಂಬು ಹೃದಯದ ಧನ್ಯವಾದಗಳು.