ಬಹಳ ವರ್ಷಗಳ ಹಿಂದೆ ಈ ಹಾಡು ಕೇಳಿದ್ದೆ. ನನ್ನ ಸಂಗೀತದ store ನಲ್ಲಿ ಈ ಹಾಡಿರುವುದು ಮರೆತುಹೋಗಿತ್ತು. ಮೊನ್ನೆ ಆಕಸ್ಮಿಕವಾಗಿ ಮತ್ತೆ ಇದೇ ಹಾಡು ದೊರಕಿತು. ನನ್ನ ಮನಸಿಗೆ ತಟ್ಟಿದ, ತುಂಬ ಇಷ್ಟವಾದ ಹಾಡು ನಿಮಗೂ ಇಷ್ಟವಾಗಬಹುದೆಂಬ ಭಂಡಧೈರ್ಯದಿಂದ ಇಲ್ಲಿ ಅಚ್ಚಿಸಿದ್ದೇನೆ. ಸುಮಧುರ ಗಾಯಕರಾದ ’ರಾಜು ಅನಂತಸ್ವಾಮಿ’ (ದಿವಂಗತ ಎನ್ನಲು ಬೇಸರವಾಗುತ್ತಿದೆ) ಯವರು ಈ ಹಾಡು ಹಾಡಿದ್ದಾರೆ. ಹಾಡು ಶರಿಫಜ್ಜನ ಬಗೆಗೆ ಬರೆದುದಾಗಿದೆ. ಗೀತ ರಚನಕಾರರು ಯಾರು ಎನ್ನುವುದು ಮರೆತುಹೋಗಿದೆ. (ಹೀಗೆ ಹೇಳಲೂ ಬೇಸರವಾಗುತ್ತಿದೆ !) ಮಿತ್ರರಲ್ಲಿ ಯಾರಿಗಾದರೂ ತಿಳಿದಿದ್ದರೆ-ತಿಳಿದರೆ ದಯವಿಟ್ಟು ಹೇಳಿ, ರಚನಕಾರರ ಹೆಸರನ್ನೂ ಇಲ್ಲಿ ನಮೂದಿಸುತ್ತೇನೆ. ಶಿಶುನಾಳದ ಶರೀಫಜ್ಜನ ಬದುಕನ್ನು ಈ ಕವಿತೆಯಲ್ಲಿ ಅರ್ಥಪೂರ್ಣವಾಗಿ, ಮನಮುಟ್ಟುವಂತೆ ಹೇಳಿದ್ದಾರೆಂದು ನನಗನ್ನಿಸಿತು, ತುಂಬಾ ಇಷ್ಟವೂ ಆಯಿತು. ನಿಮ್ಮ ಮುಂದೆ ಹಾಡಿನ Audio Link ಕೂಡಾ ಕೊಟ್ಟಿದ್ದೇನೆ . ಎಲ್ಲಾ OS ಗಳಲ್ಲೂ ಈ ಹಾಡು ಬರುತ್ತದೋ ಇಲ್ಲವೋ ಗೊತ್ತಿಲ್ಲ....ಕೇಳಿ...ಮಜಾಮಾಡಿ...ಶುಭವಾಗಲಿ.
(ನಾರಾಯಣ ಭಟ್ಟರ ಸಲಹೆ : ಅಂತರ್ಜಾಲದಿಂದ QuickTimeInstaller.exe [http://www.apple.com/quicktime/download/] ಎಂಬ ತಂತ್ರಾಂಶವನ್ನು ಇನ್ಸ್ಟಾಲ್ ಮಾಡಿಕೊಂಡರೆ ಈ ಹಾಡನ್ನು ಕೇಳಬಹುದು.)
.................................
ಒಂದು ಧರ್ಮಕೆ ಮೊಳೆತು
ಇನ್ನೊಂದರಲಿ ಕಲಿತು,
ಸಾರವೊಂದೇss ಎಂದು ಹಾಡಿದಾತ
ಹನಿಸೇರಿ ಹೊಳೆಯಾಗಿ
ಗುರಿಸೇರಿ ಕಡಲಾಗಿ
ನಭವೇರಿ ಮುಗಿಲಾಗಿ ಆಡಿದಾತ
ಹತ್ತು ವನಗಳ ಸುತ್ತಿ
ಹೂ ಹೂವನೂ ಮುತ್ತಿ
ಒಂದು ಜೇನಿನ ಹುಟ್ಟು ಕಟ್ಟಿದಾತ
ಎಲ್ಲಿ ಹೇಳೋ ತಾತ
ಹಿಂದೆ ಆ ಅವದೂತ
ಸಾಧಿಸಿದ ನಿನ್ನಂತೆ ಧರ್ಮವನ್ನು
ಕಾವ್ಯದಲಿ ಕಡೆದಾ ಮರ್ಮವನ್ನು
ಸೃಷ್ಟಿ ಮರೆಸಿಟ್ಟಿರುವ ಗುಟ್ಟುಗಳನು
ಸಪ್ತಸ್ವರ ಮೀರಿದಾ ಮಟ್ಟುಗಳನು
ನಿನ್ನ ನುಡಿಯಲ್ಲಿಟ್ಟೆ
ಮಾತಿಗರ್ಥವ ಕೊಟ್ಟೆ
ಹಾಡು ಮಾಡಿದೆ ನಿನ್ನ ವ್ಯಥೆಗಳನ್ನು ೨
ಹೇಳು ಹೇಳು ಶರೀಫ..
ಹಿಂದೆ ಯಾವ ಖಲೀಫಾ
ಏರಿದ್ದ ಈ ಹೊನ್ನಿನಟ್ಟವನ್ನು
ಮಣಿಸಿದ್ದ ಮಾತುಗಳ ಬೆಟ್ಟವನ್ನು
ಏನು ಜೀವನ ಧರ್ಮ
ಏನು ಸೃಷ್ಟಿಯ ಮರ್ಮ
ಏನು ಎಲ್ಲಿ ಯಾಕೆ ತಾಕಿದವನು
ಬೆಟ್ಟ ಬೆಟ್ಟವ ಕುಲುಕಿ
ಸಪ್ತ ಸಾಗರ ಕಲಕಿ
ಸೃಷ್ಟಿ ಮೂಲವ ಹುಡುಕಿ ಜೀಕಿದವನು
ಹೇಳು ಹೇಳು ಶರೀಫಾ
ಬೇರೊಬ್ಬ ಯಾರವನು
ನಿನ್ನಂತೆ ನಡೆ-ನುಡಿಯ ಕಾಡಿದವನು
ತೀರದಾಚೆಯ ತಾರೆ ಕೂಡಿದವನು
ಅನ್ನ ನೆಲ ಮಾತು ಮತ ಎಲ್ಲ ಬೇರಾದರೂ
ಪ್ರೀತಿಯಲಿ ಅವನೆಲ್ಲ ಕಲಸಿಬಿಟ್ಟೆ
ಬಣ್ಣ ಏಳಾದರು ಒಂದೆ ಕಾಮನಬಿಲ್ಲು
ಚಂದವಾದಂತೆ ನೀ ಬಾಳಿಬಿಟ್ಟೆ
ಗಡಿ ಮೀರಿ ಮಡಿ ಮೀರಿ
ಬಾನಿನಲಿ ಕುಡಿಯೂರಿ
ಗಾಳಿಯಲಿ ಬಾಳಪಟ ತೇಲಿಬಿಟ್ಟೆ,
ಹೇಳು ಹೇಳು ಶರೀಫಾ
ಯಾವ ಭಾವ ಕಲಾಪ
ಇಂಥ ಬಿಡುಗಡೆ ಕೊಟ್ಟ ಸೂತ್ರವಾಯ್ತು
ಹೇಗೆ ಬರಿನೀರು ಪರಿಶುಧ್ಹ ತೀರ್ಥವಾಯ್ತು ೨
-------------------------------------------------
ಖೊನೆಖಿಡಿ:
ಮಹಾನ್ ಜಿಪುಣ ಶಂಭುಲಿಂಗನಿಗೆ ಕಡೆಗೂ ಸಾವು ಬಂದೇಬಿಟ್ಟಿತು !. ಮರಣೋನ್ಮುಖನಾಗಿದ್ದ ಅವನ ಸುತ್ತ ಬಂಧು-ಮಿತ್ರರೆಲ್ಲರೂ ನೆರೆದರು.
ಶಂಭುಲಿಂಗನಿಗೆ ತನ್ನ ಹೆಂಡತಿಯನ್ನು ನೋಡುವ ಆಸೆಯಾಯಿತು..
" ಏ ..ಎಲ್ಲಿದಿಯೇ ? ಬಾರೆ ಇಲ್ಲಿ.."
" ಇಲ್ಲೇ ಇದ್ದಿನ್ರೀ, ನಿಮ್ಮ ಪಕ್ಕದಲ್ಲೇ " ಸೀರೆ ಸೆರಗಿನಿಂದ ಕಣ್ಣೊರೆಸಿಕೊಂಡಳು ಅವನ ಪತ್ನಿ.
" ಮಗನೇ ಎಲ್ಲಿದಿಯಪ್ಪಾ ? "
" ಇಲ್ಲೇ ಇದ್ದೀನಪ್ಪಾ..ನಿನ್ನ ಪಕ್ಕದಲ್ಲೇ " ಮಗರಾಯ ಗೋಳೋ ಎಂದು ಗೋಳಿಟ್ಟ
"ಮಗಳೇ ಬಾರಮ್ಮಾ ಇಲ್ಲಿ..ಎಲ್ಲಿದ್ದಿಯಮ್ಮಾ ನೀನು "
" ನಾನೂ ಇಲ್ಲೇ ನಿನ್ನ ಪಕ್ಕದಲ್ಲೇ ಇದ್ದೀನಪ್ಪಾ " ದುಃಖ ತಡೆಯಲಾರದೆ ಮಗಳು ಅತ್ತಳು.
" ಸರಿ.." ಶಂಭುಲಿಂಗ ಅವಲತ್ತುಕೊಂಡ "ಎಲ್ಲಾ ಇಲ್ಲೇ ಇದ್ದೀರಾ ಅಂದಮೇಲೆ ಅಡುಗೆಮನೆ ಲೈಟ್ ಯಾಕೆ ಉರಿಬೇಕು !!!! "
--------------------------
ವಂದನೆಗಳೊಂದಿಗೆ.
34 comments:
chennagide olle kavana namage neediddeeri.... na ee haadannu keLiralilla
ಒ೦ದು ಸು೦ದರ link ನ್ನು ನೆನಪಿಸಿದ್ದಕ್ಕೆ ದನ್ಯವಾದ.
sir,
padya tumba chennagide. hadu kelalu klikkiside, yako open agalilla...
thanks..
ಕವನ ತು೦ಬಾ ಚೆನ್ನಾಗಿದೆ. ಶಿಶುನಾಳದೀಶನ ಬಾಳನ್ನು ದಿಟವಾಗಿ ಸು೦ದರವಾಗಿ ತೆರೆದಿಟ್ಟಿದೆ. ಜೊತೆಗೆ ಶ೦ಭುಲಿ೦ಗನ ಖಿಡಿ ಸಕತ್ ಮಜಾ ನೀಡಿತು. ಪರಿಚಯಿಸಿದ್ದಕ್ಕೆ ಮತ್ತು ಖಿಡಿ ಕೊರೆದಿದ್ದಕ್ಕೆ ಧನ್ಯವಾದಗಳು.
ಗುರುಗಳೆ,
ಬಹಳ ಸುಂದರ ಹಾಡು....
ಕೊನೆ ಖಿಡಿ ಎಂದಿನಂತೆ ಸೂಪರ್....
ಅಭಿನಂದನೆಗಳು
ಪುತ್ತರ್,
ಶರೀಫರ ಬದುಕಿನ ಬಗೆಗೆ ಇದಕ್ಕಿಂತ ಉತ್ತಮ ತಿಳಿವು ಸಿಗಲಿಕ್ಕಿಲ್ಲ. ತುಂಬ ಉತ್ತಮ ಕವನ. ನಿಮಗೆ ಧನ್ಯವಾದಗಳು.
-ಕಾಕಾ
ಸುಬ್ರಮಣ್ಯ ಸರ್,
ಷರೀಫಜ್ಜನ ಹಾಡುಗಳು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಸದ್ಯ ಮರೆತೇ ಹೋಗಿದ್ದ ಹಾಡೊಂದನ್ನು ನೆನಪಿಸಿಕೊಟ್ಟಿದ್ದೀರಾ!
ಕೊನೆಯ ಖಿಡಿ ಚೆಂದ ಇದೆ.
ಶರೀಫರ ಬಗೆಗೆ ಅರ್ಥಪೂರ್ಣ ಕವನ...
ನಾನು ಇದನ್ನು ಮೊದಲ ಬಾರಿಗೆ ಓದುತ್ತಿರುವದು...
ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..
ಖೊನೆ
ನುಡಿ
ಘ...ಮ್ಮತ್ತಾಗಿದೆ.. !
ಕವನ ತುಂಬಾ ಹಿಡಿಸಿತು.ಧನ್ಯವಾದಗಳು.
ತು೦ಬಾ ಚೆನ್ನಾಗಿದೆ
nanagoo open aagtilla sir, saahitya tumbaaaaaaa sundaravaagide.............
ಗೀತ ರಚನೆ ಮತ್ತೆ ಹಾಡು ಎರಡೂ ತುಂಬಾ ಚೆನ್ನಾಗಿದೆ..ಒದಗಿಸಿದ್ದಕ್ಕೆ ಕೃತಜ್ಞತೆಗಳು. ಅಂತರ್ಜಾಲದಿಂದ QuickTimeInstaller.exe [http://www.apple.com/quicktime/download/] ಎಂಬ ತಂತ್ರಾಂಶವನ್ನು ಇನ್ಸ್ಟಾಲ್ ಮಾಡಿಕೊಂಡರೆ ಈ ಹಾಡನ್ನು ಕೇಳಬಹುದು.
ಮನಸು,
ಈ ಹಾಡು ಅಂತರ್ಜಾಲದಲ್ಲೂ ಲಭ್ಯವಿದೆ. ಗೋಗಲ್ ನಲ್ಲಿ ಹುಡುಕಿ ಕೇಳಬಹುದು. ರಚನಕಾರರ ಹೆಸರು ಸಿಗುತ್ತಿಲ್ಲ.
ಕು.ಸು. ಮುಳಿಯಾಲ,
ವಂದನೆಗಳು.
ಶಿವು ಸರ್,
ಕವಿತೆ ಬರೆದವರ ಹೆಸರು ಗೊತ್ತಾಗ್ತಿಲ್ಲ. ನೀವು ನಾರಾಯಣ ಭಟ್ಟರ ಸಲಹೆಯಂತೆ ತಂತ್ರಾಂಶವನ್ನು Install ಮಾಡಿಕೊಂಡು ಪ್ರಯತ್ನಿಸಿ.
ಸೀತಾರಾಮ್ ಗುರೂಜಿ,
ಕೊರೆಸಿಕೊಳ್ಳಲು ನೀವು ಸಿದ್ದರಿರುವಾಗ ನಾನು ಬಿಡುವೆನೆ...!!? :)
ಸವಿಗನಸು,
ರಾಜು ಅನಂತಸ್ವಾಮಿಯ ಕಂಠದಲ್ಲಿ ಈ ಹಾಡು ಕೇಳಿದ ನಂತರ, ಆತ ಇನ್ನಿಲ್ಲ ಎಂದು ಭಾವಿಸಿಕೊಳ್ಳಲು ಬೇಸರವಾಗುತ್ತದೆ ಅಲ್ಲವೇ ?
ಕಾಕಾಶ್ರೀ,
ನಿಮ್ಮ ಮಾತು ನಿಜ. ನಿಮಗೇನಾದರೂ ಈ ಗೀತೆಯ ರಚನಕಾರರಾರೆಂದು ತಿಳಿದಿದೆಯೇ ?
ಪ್ರವೀಣ್ ಅವರೆ,
ಆಸಕ್ತಿಯಿಂದ ಕೇಳಿದ ನಿಮಗೂ ನನ್ನ ಧನ್ಯವಾದಗಳು.
ಪ್ರಕಾಶಣ್ಣ,
ನನ್ನ ’ಖಿಡಿ’ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.
ಕೃಷ್ಣಮೂರ್ತಿಯವರೆ,
ನಿಮ್ಮ ಸ್ಪಂದನೆಗೆ ಧನ್ಯವಾದಗಳು.
ಪರಾಂಜಪೆಯವರೆ,
ಕವನದ ಭಾವ ಎಲ್ಲೂ ಕಳೆದುಹೊಂಗದಂತೆ ರಾಜು ಹಾಡಿರುವುದು ಮತ್ತೊಂದು ಗರಿ ಇಟ್ಟಂತೆ ಈ ಹಾಡಿಗೆ ಅಲ್ಲವೆ.
ಧನ್ಯವಾದಗಳು
ದಿನಕರ್ ಸರ್,
ನಾನು ವಿಂಡೊಸ್ 7 ಮತ್ತು ಗೂಗಲ್ ಕ್ರೋಮ್ ಬ್ರೌಸರ್ ಬಳಸುತ್ತಿದ್ದೇನೆ . ಇಲ್ಲೂ ಕೆಲವರು ಹಾಡು ಕೇಳಿದ್ದಾರೆ. ನೀವು ನಾರಯಣ ಭಟ್ಟರ ಸಲಹೆಯನ್ನು ಅನುಸರಿಸಿ ನೋಡಿ.
ಧನ್ಯವಾದಗಳು.
ನಾರಾಯಣ ಭಟ್ಟರೆ,
ನಿಮ್ಮ ಸಕಾಲಿಕ ಸಲಹೆಗೆ ಧನ್ಯವಾದಗಳು. ಕವನದ ಸಾಹಿತ್ಯ ಹಾಗೂ ರಾಜು ಕಂಠಮಾಧುರ್ಯ ಎರಡೂ ಪರವಶವಾಗಿಸುತ್ತದೆ. ನಿಮ್ಮ ಸ್ಪಂದನೆಗೆ ಧನ್ಯವಾದಗಳು. ಹೀಗೆ ಬರುತ್ತಿರಿ.
Good ! tumbaa hidisitu
ಶಂಭು ಲಿಂಗ ಅವರೇ,
ಇಂತಹ ಕವನವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಕವನ ಬಹಳ ಚೆನ್ನಾಗಿದೆ, ಕೊನೆ ಖಿಡಿ ಕೂಡ ಮಸ್ತ್ ಇದೆ.
ವ್ಹಿ.ಆರ್. ಭಟ್ಟರೆ,
ರಾಜು ಶಾರೀರ ಕವನವನ್ನು ಮಧುರವಾಗಿಸಿದೆಯಲ್ಲವೆ..
ಧನ್ಯವಾದ ಆಗಮಿಸಿದ್ದಕ್ಕೆ.
ಸಾಗರಿ,
ಧನ್ಯವಾದಗಳು. ಗೀತೆಯ ರಚನಕಾರರು ಗೊತ್ತಾದರೆ ದಯವಿಟ್ಟು ತಿಳಿಸಿ.
tumba chennagide sir :)
Snow White,
Thank u very much.
ಚೆನ್ನಾಗಿದೆ... ಕೊನೆ ಖಿಡಿ ಸೂಪರ್ :)
ರವಿಕಾಂತರೆ,
Thanks.
ತು೦ಬಾ ಚೆನ್ನಾಗಿದೆ
ದೀಲೀಪ್,
ನಿಮ್ಮ ಸ್ಪಂದನೆಗೆ ಧನ್ಯವಾದ.
Post a Comment