Aug 2, 2010

ಆಹಾ ! ನೊಡದೊ ಹೊನ್ನಿನ ಜಿಂಕೆ... ೩

ನಾಗಪ್ಪನವರ ಮುಖ ವಿಷಣ್ಣವಾಯಿತು, ಅದು ಗೋಪಾಲಯ್ಯನಿಗೂ ಕಂಡಿತು. ಚಿರಂತನಿಗೆ ತಾನೇ ಮಾತನಾಡಬೇಕೆನ್ನಿಸಿದರೂ, ಸಂದರ್ಭ ಸರಿಯಾಗಲಿಕ್ಕಿಲ್ಲ ಎಂದು ಸುಮ್ಮನಾದ. ಕ್ಷಣಕಾಲ ಮೌನ ಆವರಿಸಿತು.  ಅಡುಗೆಮನೆಯಿಂದ ಸೀತಮ್ಮ ಹೊರಬಂದರು. ಗಂಡಸರು ಮಾತನಾಡುವಾಗ ಹೆಂಗಸರು ಮಧ್ಯೆ ಬಾಯಿ ಹಾಕಬಾರದೆನ್ನುವ ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದರು ಸೀತಮ್ಮ. ಯಾರಿಂದಲೂ ಮಾತು ಹೊರಡದಾದಾಗ ತಾವೇ ಮಾತನಾಡುವುದು ಸೂಕ್ತವೆಂದು ಭಾವಿಸಿದರು. ಹಾಗೆ ಮಾತನಾಡಿದರು ಕೂಡ .

" ನಮಗೆ ಇಂಜಿನಿಯರ್ರೇ ಆಗಬೇಕು ಅಂತೇನು ಇರಲಿಲ್ಲ, ನಮ್ಮ ಕುಟುಂಬದವರೆಲ್ಲಾ ಕಂಪ್ಯೂಟರ್ ಇಂಜಿನಿಯರ್ರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಅವೆಲ್ಲಾ ಈಗ ಫಾ಼ರಿನ್ನು, ಹಾಳು-ಮೂಳು ಅಂತ ತಿರುಗಾಡಿಕೊಂಡಿವೆ. ನಮಗೆ ಇರೋಳು ಒಬ್ಬಳೇ ಮಗಳು. ಮಗಳು ಒಳ್ಳೆ ಕಡೆ ಸೇರಲಿ, ಎಲ್ಲರಂತೆ ಕಾರು-ವಿಮಾನ ಅಂತ ಓಡಾಡ್ಕೊಂಡು ಇರಲಿ ಅನ್ನೋ ಆಸೆ ಅಷ್ಟೆ. ಒಟ್ಟಿನಲ್ಲಿ ಒಳ್ಳೆ ಕೆಲಸ ಆದರೆ ನಮ್ಮ ಅಭ್ಯಂತರವೇನು ಇಲ್ಲ "
ನಾಗಪ್ಪ ಹೆಂಡತಿಯ ಮುಖವನ್ನೊಮ್ಮೆ ನೋಡಿದರು. ಮತ್ತೆ ತಲೆ ಕೆಳಗೆ ಹಾಕಿ ನೆಲವನ್ನೇ ದಿಟ್ಟಿಸತೊಡಗಿದರು.  ಈ ವಿಷಯವನ್ನು ಬೇಗ ಇತ್ಯರ್ಥಗೊಳಿಸಬೇಕು ಎಂದುಕೊಂಡ ಚಿರಂತ. ಮತ್ತೆ-ಮತ್ತೆ  ವೃತ್ತಿ ಸಂಬಂಧ ವಿಚಾರಗಳನ್ನು ಯಾರೂ ಕೆದಕುವುದು ಅವನಿಗೆ ಸರಿಕಂಡುಬರಲಿಲ್ಲ. ತಲೆ ತಗ್ಗಿಸಿ ಕುಳಿತಿದ್ದ ನಾಗಪ್ಪನವರನ್ನೊಮ್ಮೆ ದಿಟ್ಟಿಸಿದ. ತುಸು ಹತಾಶರಾದಂತೆ ಕಂಡುಬಂದಿತು. ಸೀತಮ್ಮನವರೊಟ್ಟಿಗೆ ಮಾತನಾಡುವುದೇ ಸರಿಯೆಂದುಕೊಂಡ.

" ಅಮ್ಮಾ, ಇಂಜಿನಿಯರ್ರೇ ಆಗಲಿ, ನಾನೇ ಆಗಲಿ ಅಥವ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡ್ತಾ ಇರೋ ನನ್ನಂತಹ ಸಾವಿರಾರು ಜನಗಳ ಬದುಕು , ಹೊರಗಡೆಯಿಂದ ನೋಡೋರಿಗಷ್ಟೆ ಚೆಂದ. ಎಲ್ಲದಕ್ಕೂ ನಾವು ಶನಿವಾರ-ಭಾನುವಾರಗಳನ್ನೇ  ಕಾಯ್ಬೇಕು. ನಾವು ದುಡಿದದ್ದನ್ನು ನೆಮ್ಮದಿಯಾಗಿ ಉಣ್ಣುತ್ತೇವೆಂಬ ನಂಬಿಕೆ ನಮ್ಮಲ್ಲಿ ತುಂಬ ಕಡಿಮೆ. ಒಂದು ರೀತಿಯ ಯಾಂತ್ರಿಕ ಜೀವನ ನಮ್ಮದು. ಅದರಲ್ಲೂ ಬೆಂಗಳೂರು ಅನ್ನೋದು ವಿಲಾಸೀ ಮಾಯಾ ಲೋಕ. ಅಲ್ಲಿ ಬದುಕೋದು ನಮ್ಮ ಸದ್ಯದ ಅನಿವಾರ್ಯತೆ ಮತ್ತು ಅಗತ್ಯ. ಅಂತಹ ಮಾಯಾಮೃಗದ ಬೆನ್ನುಹತ್ತಿ ಹೋಗೋ ಅವಶ್ಯಕತೆ ನಿಮಗಿಲ್ಲ ಅಂದುಕೊಳ್ಳುತ್ತೇನೆ. ಇಷ್ಟಕ್ಕೂ ಯಾರೂ ನಿಮ್ಮ ಮಗಳ ಅಭಿಪ್ರಾಯವನ್ನೇ ಕೇಳಲಿಲ್ಲವಲ್ಲ, ಆಕೆಯನ್ನೇನು ಬಂಧಿಸಿಟ್ಟಿದ್ದೀರೇನು ? ".

 ನಾಗಪ್ಪ ತುಸು ಸಾವರಿಸಿಕೊಂಡವರಂತೆ ಮೇಲೆದ್ದರು. ಮುಖದಲ್ಲಿ ಬಲವಂತದ ನಗುವೊಂದನ್ನು ತಂದುಕೊಂಡರು. ಅದನ್ನು ತೋರಿಕೊಂಡರು ಕೂಡ. ಏನೋ ಹೇಳಲು ಹೊರಟ ಗೋಪಾಲಯ್ಯನವರನ್ನು ಅರ್ಧಕ್ಖೇ ತಡೆದರು ನಾಗಪ್ಪ.

" ಗೋಪಾಲಯ್ಯ, ಹುಡುಗ ಹೇಳೋದು ಸರಿಯಿದೆ. ಹಾಳಾದ್ದು ಈ ಕಂಪ್ಯೂಟರ್ ವಿಷಯ ನಮಗೆ ಗೋತ್ತಾಗೋದಿಲ್ಲ ನೋಡಿ. ಅವರಿಬ್ಬರೇ ಮಾತನಾಡಿಕೊಂಡು ಬಿಡಲಿ ಅಲ್ಲವೆ. ಅವರ ಜೀವನವನ್ನು ಅವರೇ ತೀರ್ಮಾನ ಮಾಡಿಕೊಳ್ಳೋದು ಒಳ್ಳೇದು . ಏನಂತೀರಿ ? "

ಗೋಪಾಲಯ್ಯ ಮನಸಿನಲ್ಲೇ ಹೌದೆಂದುಕೊಂಡರು. ಹೊರಗೆ ತೋರ್ಪಡಿಸದೆ, ಗೋಣು ಹಾಕಿ ಸುಮ್ಮನಾದರು. ಹಜಾರಕ್ಕೆ ಅಂಟಿಕೊಂಡಿದ್ದ ಕೋಣೆಯ ಬಾಗಿಲು ತೆರೆದರು ನಾಗಪ್ಪ. ಮಗಳನ್ನು ಹೊರಬರುವಂತೆ ಕರೆದರು. ಅಲ್ಲಿಯವರೆಗೂ ಒಳಗೆ ಒಂಟಿಯಾಗಿ ಕುಳಿತಿದ್ದರಿಂದಲೋ ಏನೋ ಆಕೆಯ ಮುಖ ಬಾಡಿದಂತಾಗಿತ್ತು. ಸಂಪ್ರದಾಯದಂತೆ ಸೀರೆ ಉಟ್ಟು ತಲೆಗೆ ಹೂ ಮುಡಿದು ನಿಂತಿದ್ದ ಹುಡುಗಿಯನ್ನೊಮ್ಮೆ ಚಿರಂತ ದಿಟ್ಟಿಸಿದ. ಕಿರುನಗೆಯೊಂದು ಅವನ ತುಟಿಯಂಚಿನಲ್ಲಿ ಮಿನುಗಿ ಮಾಯವಾಯಿತು. ಅವನೇ ಮಾತಿಗೆ ಮುಂದಾದ.

" ನಿಮ್ಮ ಅಭ್ಯಂತರವೇನೂ ಇಲ್ಲವೆಂದಾದರೆ ನಾನು, ನಿಮ್ಮ ಮಗಳು ಸ್ವಲ್ಪ ಕಾಲ ನಿಮ್ಮ ತೋಟದಲ್ಲೆ ತಿರುಗಾಡಿಕೊಂಡು ಬರಬಹುದೆ ? ಹಾಗೇ ಒಂದಷ್ಟು ವಿಚಾರ ವಿನಿಮಯವೂ ಆಗಬಹುದೇನೋ ಅಂತ ".

 ನಾಗಪ್ಪ ಮರುಮಾತಿಲ್ಲದೆ ಸಮ್ಮತಿಯಿತ್ತು ಅಡುಗೆಮನೆಯೆಡೆಗೆ ನಡೆದರು. ಹುಡುಗ-ಹುಡುಗಿ ಮನೆಯಿಂದ ಹೊರಬಿದ್ದರು. ಗೋಪಾಲಯ್ಯ ಕೈಯಿಗೆ ಸಿಕ್ಕಿದ ಪುಸ್ತಕವೊಂದನ್ನು ತಿರುವುತ್ತ ಕುಳಿತರು. ಸೀತಮ್ಮ ತುಸು ಗಾಬರಿಯಾಗಿದ್ದರು. ಅವರ ಆತಂಕಕ್ಕೆ ಕಾರಣವೂ ಇತ್ತು. ನಾಗಪ್ಪ ಒಳಬಂದಿದ್ದು ನೋಡಿ ದುಗುಡದಿಂದ ಹೇಳಿಕೊಂಡರು.

"ಇಬ್ಬರನ್ನೇ ಹಾಗೆ ಹೊರಗೆ ಕಳಿಸೋದು ಅದೇನು ಚೆನ್ನಾಗಿರುತ್ತೆ ಹೇಳಿ ? , ಅದೂ ಮದುವೆಗೆ ಮುಂಚೆಯೆ, ಕನಿಷ್ಠ ಲಗ್ನಪತ್ರಿಕೆಯಾದರೂ ಆಗಬಾರದೆ. ನೀವಂತೂ ಇತ್ತೀಚೆಗೆ ಇಂಗು ತಿಂದ ಮಂಗನ ಹಾಗೆ ಆಡ್ತಾ ಇದ್ದೀರಿ. ಅವರೇನೋ ಕೇಳುದ್ರಂತೆ, ಇವರು ಕಳುಹಿಸಿಬಿಟ್ರಂತೆ. ಹೆಚ್ಚು-ಕಮ್ಮಿಯಾದರೆ ಯಾರು ಜವಾಬುದಾರರು? ಅಕ್ಕ-ಪಕ್ಕದವರು ಏನಂದಾರು ".

"ಸೀತೂ, ನೀನಿನ್ನೂ ನಿಮ್ಮಜ್ಜನ ಕಾಲದಲ್ಲೇ ಇದ್ದೀಯ. ಬೆಂಗಳೂರಿನಲ್ಲಿ ಇದೆಲ್ಲಾ ಸರ್ವೇಸಾಮಾನ್ಯ. ಇಷ್ಟಕ್ಕೂ ಬೆಂಗಳೂರನ್ನು ನೀನು ಕಂಡಿದ್ರೆ ತಾನೆ ನಿನಗೆ ಗೊತ್ತಾಗೋದು"

" ಕಾಣೋದಕ್ಕೆ ಕರೆದುಕೊಂಡು ಹೋಗಿದ್ರೆ ತಾನೇ ನೀವು ? ಪಕ್ಕದ ’ಬಾಳೆಹೊನ್ನೂರು’ ತೋರಿಸೋದಕ್ಕೆ ಮದುವೆಯಾಗಿ ೧೦ ವರ್ಷ ತಗೊಂಡ್ರಿ ನೀವು. ಎಂದಾದ್ರೂ ಸ್ವತಂತ್ರವಾಗಿ ನಿರ್ಧಾರತಗೊಳೋಕೆ ಬಿಟ್ರೇನು ನೀವು ? "

"ಆಯ್ತು ಮಹರಾಯ್ತಿ, ಇಲ್ಲಿವರೆಗೂ ನಿನಗೆ ಸ್ವತಂತ್ರ ಸಿಕ್ಕಿರಲಿಲ್ಲ. ಇನ್ನು ಮುಂದೆ ನೀನು ಸರ್ವತಂತ್ರ ಸ್ವತಂತ್ರೆ. ನಿನ್ನ ಮಗಳ ಮದುವೆ ವಿಷಯದಲ್ಲಿ ನೀನೇ ನಿರ್ಧಾರ ತಗೋ , ಆಯ್ತಾ "

ನಾಗಪ್ಪ ಹೊರಬಂದರು. ಅಡುಗೆ ಮನೆಯಲ್ಲಿ ಆಗಾಗ್ಗೆ  ಪಾತ್ರೆಗಳ  ಸದ್ದು ಜೋರಾಗಿ ಕೇಳಿಬರುತ್ತಿತ್ತು.

ಇತ್ತ , ಪರಸ್ಪರ ಮಾತನಾಡಲೆಂದು ಹೊರಬಂದವರಿಬ್ಬರೂ ಬಹಳ ದೂರ ಮೌನವಾಗೇ ಸಾಗಿ ಬಂದಿದ್ದರು. ಹುಡುಗಿಯೇ ಮಾತನಾಡಿದಳು.

" ನಿಮ್ಮ ಹೆಸರು ಚಿರಂತ್ ಅಂತ ಗೊತ್ತಾಯ್ತು. ನಾನು ಪಲ್ಲವಿ ".

ಹುಡುಗಿಯ ಮಾತಿನಿಂದ ಉತ್ತೇಜಿನಾದಂತೆ ಕಂಡುಬಂದ ಚಿರಂತ.

" ಒಹ್ !. Good name. ಏನು ಒದಿದ್ದೀರಿ ? I mean education ? "

" M.A. ಆಗಿದೆ. ಪೊಲಿಟಿಕಲ್ ಸೈನ್ಸ್ "

"ನಾನು MBA ಮುಗಿಸಿದ್ದೀನಿ. ನನ್ನ ಮಟ್ಟಿಗೆ ಒಳ್ಳೆ ಕೆಲಸನೂ ಇದೆ. ನಿಮಗೆ ಕೆಲ್ಸ ಮಾಡಬೇಕು ಅಂತೇನೂ ಇಲ್ವ ?"

" ಇದೆ. political science ವಿಭಾಗದಲ್ಲಿ  ಅಧ್ಯಾಪಕಿಯಾಗಬೇಕು ಅನ್ನೋ ಆಸೆ ಇದೆ "

"ಒಹ್ !. Thats wonderful !. ಮತ್ತೆ ಸಮಸ್ಯೆ ಏನು ? "

"ನನ್ನ ಮದುವೆಯದು "

 ಚಿರಂತ ಕ್ಷಣಕಲ ಮೌನವಹಿಸಿದ. ಮುಂದೇನು ಕೇಳಬೇಕೆಂದು ಅವನಿಗೆ ತೋಚಲಿಲ್ಲ . ತೀರಾ ವೈಯಕ್ತಿಕವಾಗಬಹುದೆಂದು ಸುಮ್ಮನಾದ. ಪಲ್ಲವಿಯೇ ಮುಂದುವರಿಸಿದಳು.

" ನನಗೆ ನಮ್ಮ ಊರಲ್ಲೇ ಇದ್ದು ಕೆಲಸ ಮಾಡಬೇಕು ಅಂತ ಆಸೆಯಿದೆ. ಅದರೊಟ್ಟಿಗೆ ನನ್ನ ತಂದೆ-ತಾಯಿಗಳಿಗೂ ಆಸರೆಯಾಗಿರಬೇಕು ಅನ್ನೋದು ಇನ್ನೊಂದು ಆಸೆ "

ಚಿರಂತನಿಗೆ ಕೊಂಚ ಅರ್ಥವಾಗಲಿಲ್ಲ. ಸ್ವಲ್ಪ ತಡೆದು ಪುನಃ ಕೇಳಿದ

"ಅಂದರೆ ? ನಿಮಗೆ ಮದುವೆ ಬೇಡ ಅಂತಲೆ ? "

"ಹಾಗಲ್ಲ. ನಾನು ಒಬ್ಬಳೇ ಮಗಳು. ಇವರನ್ನು ಬಿಟ್ಟು ೩೫೦ ಕಿ.ಮೀ ದೂರದ ಊರಿಗೆ ಹೋಗಿ ಕುಳಿತರೆ, ಇವರಿಗೆ ಕಷ್ಟಕಾಲ ಬಂದಾಗ ನೋಡೋರು ಯಾರು ? ಅಲ್ಲಿಂದ ಇಲ್ಲಿಗೆ ಬರೋಕೆ ಕನಿಷ್ಠ ೭ ಗಂಟೆ ಪ್ರಯಾಣ. ಅಂತಹ ಪ್ರಯಾಣ ಮಾಡೋದಕ್ಕೂ ಒಂದು ತಿಂಗಳ ಮುಂಚೆಯೇ ತಯಾರಾಗಬೇಕು. ಕಷ್ಟ ಅನ್ನೋದು ಹೇಳಿ-ಕೇಳಿ ಬರೋಲ್ಲವಲ್ಲ."

"ಅದು ನಿಜ. ಮತ್ತೆ, ಏನು ಮಾಡಬೇಕು ಅನ್ನೋದು ನಿಮ್ಮ ಉದ್ದೇಶ ?"

" ನನ್ನ ತಂದೆ-ತಾಯಿಯವರೇನೋ ಮದುವೆ ಮಾಡಿ ಕಳುಹಿಸಲು ಸಿದ್ದವಾಗಿದ್ದಾರೆ. ಅದು ಅವರ ಮಗಳ ಬಗೆಗಿರೋ ಕಾಳಜಿ. ಅಂತಹುದೇ ಕಾಳಜಿ-ಅಕ್ಕರೆ ನನಗೂ ಇರುತ್ತೇ ಅಲ್ವಾ ? . ನನ್ನ ಮದುವೆ ಮಾಡಿಕೊಟ್ಟಾದ ಮೇಲೆ ಈ ತೋಟವನ್ನೆಲ್ಲಾ  ಮಾರಿ ಬೆಂಗಳೂರಿಗೆ ಬಂದು ಸೇರ್ಕೋತಾರಂತೆ "

ಚಿರಂತ ಹಾವು ತುಳಿದವನಂತೆ ಬೆದರಿದ.

"ಅಯ್ಯೋ!. ಅಂತಹ ತಪ್ಪು ಕೆಲ್ಸ ಮಾಡೋದುಬೇಡ. ಇನ್ನು ಕೆಲವೇ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗುತ್ತೆ. ಬೆಳೆದು ತಿನ್ನೋನೆ ಹೆಚ್ಚು ಸುಖವಾಗಿರ್ತಾನೆ ನೋಡಿ. "

"ಹೌದು.  ಆದರೆ ನನ್ನಿಂದ ಇವರಿಗೆ ಅರ್ಥಮಾಡಿಸಲು ಆಗ್ತಾ ಇಲ್ಲ. "

ವಿಷಯ ಹಳಿತಪ್ಪುತ್ತಿರಬಹುದೆನಿಸಿತು ಚಿರಂತನಿಗೆ. ವಿಷಯವನ್ನು ಅರ್ಧಕ್ಕೆ ತುಂಡರಿಸಿದ.

"ಮದುವೆಯ ಬಗ್ಗೆ ಏನು ಹೇಳಲೇ ಇಲ್ಲ ನೀವು ? "

ಪಲ್ಲವಿಯ ಮುಖ ಮತ್ತಷ್ಟು ಕಳೆಗುಂದಿದಂತಾಗಿದ್ದನ್ನು ಚಿರಂತ ಗಮನಿಸಿದ. ಆಕೆಯೇ ಮಾತನಾಡಲೆಂದು ಸುಮ್ಮನಾದ. ಸಮಯ ಜಾರುತ್ತಿತ್ತು. ಆದರೂ ಸುಮ್ಮನಾದ.

" ಆಗಲೇ ಹೇಳಿದೆನಲ್ಲಾ, ಅಷ್ಟು ದೂರ ಬರೋದಕ್ಕೆ ನನಗಿಷ್ಟವಿಲ್ಲ. ಈ ವಿಷ್ಯಾನ ನಮ್ಮ ಮನೆಯಲ್ಲಿ ಹೇಳೋಕೆ ನನ್ನಿಂದ ಆಗ್ತಿಲ್ಲ. ಹೇಳುದ್ರೂ ಅವರು ಅರ್ಥಮಾಡ್ಕೋತಾರೆ ಅಂತ ನನಗನ್ನಿಸ್ತಿಲ್ಲ "

"I am sorry. ಬೆಂಗಳೂರು ಬಿಟ್ಟು ಬರೋದು ನನಗೂ ಸಾಧ್ಯವಿಲ್ಲ. So , ನಮ್ಮಿಬ್ಬರ ದಾರಿ ಬೇರೆ-ಬೇರೆಯದೇ ಅಂತಾಯ್ತು. ಅದೆಲ್ಲಾ ಸರಿ, ನನ್ನೊಂದಿಗೆ ಹೇಳಿದ ಹಾಗೆ ನಿಮ್ಮ ಪೇರೆಂಟ್ಸ್ ಗೂ ಕನ್ವಿನ್ಸ್ ಮಾಡಬಹುದಲ್ಲ ನೀವು ?"

"ನನ್ನ ಮಾತನ್ನು ಅವರು ಕೇಳೋದಿಲ್ಲ. ಅದೇ ಸಮಸ್ಯೆ "

ಚಿರಂತನ ಮುಖದಲ್ಲಿ ಸಣ್ಣನಗುವೊಂದು ತೇಲಿಬಂತು

"ಇಲ್ಲಿ ಯಾರನ್ನಾದ್ರು ನೋಡಿದೆರೇನು? ನಿಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳೋಕೆ ?"

ಚಿರಂತನ ನೇರ ಪ್ರಶ್ನೆಗೆ ಪಲ್ಲವಿಯ ಉತ್ತರವೂ ಅಷ್ಟೇ ಸಹಜವಾಗಿ ಬಂದಿತು.

"ಹೌದು. ಅವರು ನನ್ನ ಸಹಪಾಠಿ. ಚಿಕ್ಕಮಗಳೂರಿನಲ್ಲಿ ಕೆಲಸ ಮಾಡ್ತಾರೆ. ನನಗೂ ಅಲ್ಲೇ ಕೆಲಸ ಆಗಬಹುದು. ಊರಿಗೆ ಹತ್ತಿರ. ನನ್ನ ಹೆತ್ತವರಿಗೂ ಆಸರೆಯಾಗಿರಬಹುದು ನಾನು"

"ಏನ್ರೀ ನೀವು ? ಒಳಗಡೆ ಬೆಂಕಿಯಿಟ್ಟುಕೊಂಡು ಇಷ್ಟು ದಿನ ಹೇಗ್ರೀ ತಡೆದುಕೊಂಡಿದ್ರೀ ?  any way ನಮ್ಮ ಸ್ನೇಹಕ್ಕಂತೂ ಯಾವ ಕಳಂಕವೂ ಬರೋದಿಲ್ಲ. ನಿಮ್ಮ ಸ್ನೇಹಿತನಾಗಿ ನಾನೀಗ ಏನು ಮಾಡಬೇಕು ಹೇಳಿ ? "

ಪಲ್ಲವಿಯ ಮುಖದಲ್ಲಿ ಮಂದಹಾಸ ಹಾದುಹೋಯಿತು.

" ನಿಮ್ಮಂತಹ ಸ್ನೇಹಿತರು ಸಿಕ್ಕಿದ್ದು ನನಗೂ ಸಂತೋಷವೆ. ಸದ್ಯಕ್ಕೆ ನಿಮ್ಮ ಕೆಲಸ ನನ್ನ ಹೆತ್ತವರನ್ನು ಕನ್ವಿನ್ಸ್ ಮಾಡೋದು ಅಷ್ಟೆ. "

" ನಿಮ್ಮೂರಿನ express ಬಸ್ಸಿನಲ್ಲಿ ಬಂದುದಕ್ಕೆ ಇಷ್ಟೂ ಮಾಡದೇ ಹೋದ್ರೆ ಸರಿಯಾಗುತ್ಯೆ ?  ಆ ಬಸ್ಸಿಗೆ ಅವಮಾನ "

ಮನಃಪೂರ್ವಕವಾಗಿ ನಗುತ್ತಾ ಇಬ್ಬರೂ ಮನೆಯತ್ತ ಹೆಜ್ಜೆ ಹಾಕಿದರು. ಮಾತಿನ ಲಹರಿಯಲ್ಲಿ ಮನೆ ಬಂದುದೇ ತಿಳಿಯಲಿಲ್ಲ ಇಬ್ಬರಿಗೂ. ಒಳಗೆ ಬಂದ ಪಲ್ಲವಿ ಕೋಣೆಯ ಬಾಗಿಲಿಗೆ ಒರಗಿ ನಿಂತಳು. ಚಿರಂತ ಚಾಪೆಯ ಮೇಲೆ ಕೂರದೆ ಟಿ.ವಿ. ಸ್ಟಾಂಡ್ ಪಕ್ಕದಲ್ಲಿದ್ದ ಕುರ್ಚಿಯ ಮೇಲೇ ಕುಳಿತ. ಮಗಳ ಮುಖ ನೋಡಿದ ಸೀತಮ್ಮ ತುಸು ಗೆಲುವಾದರು. ಗೋಪಾಲಯ್ಯ ಅದೇ ಪುಟಗಳನ್ನು ತಿರುವಿಹಾಕುತ್ತಿದ್ದರು. ನಾಗಪ್ಪ ಶುರುಮಾಡಿದರು.

" ಏನ್ ತೀರ್ಮಾನ ತಗೋಂಡ್ರಿ "

ಚಿರಂತ ಗೋಪಾಲಯ್ಯನವರನ್ನೊಮ್ಮೆ ನೋಡಿದ. ನಾಗಪ್ಪನವರೆಡೆಗೆ ತಿರುಗಿದ.

" ನನಗೆ ನಿಮ್ಮ ಮಗಳನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳೋದಕ್ಕೆ ಆಗೋದಿಲ್ಲ "

ನಾಗಪ್ಪ ಕೊಂಚ ವಿಚಲಿತರಾದವರಂತೆ ಕಂಡರು. ಸಾವರಿಸಿಕೊಂಡು ಮತ್ತೆ ಮುಂದುವರಿಸಿದರು.

" ನಾವು ನಿಮ್ಮ ವೃತ್ತಿ ವಿಚಾರವಾಗಿ ಕೇಳಿದ್ದು ತಮಗೆ ಬೇಸರವಾಯ್ತೇನೋ ? ಗೋಪಾಲಯ್ಯ ಎಲ್ಲವನ್ನೂ ವಿವರಿಸಿ ಹೇಳಿದ್ದಾರೆ. ಆ ವಿಷಯದಲ್ಲಿ ನಮಗೆ ಅಭ್ಯಂತರವಿಲ್ಲ . "

"ಹಾಗೇನಿಲ್ಲ.  ನೋಡಿ ನಾಗಪ್ನೋರೆ, ಮದುವೆ ಅಂತ ಆದಮೇಲೆ ಹೋಗೋದು-ಬರೋದು ಮಾಡಬೇಕಾಗುತ್ತೆ. ನನಗೆ ರಜೆಗಳು ಸಿಗೋದಿಲ್ಲ. ಅದೂ ಅಲ್ಲದೆ ಪ್ರಯಾಣವೇ ಬಹಳ ಹೊತ್ತು ಹಿಡಿಯುತ್ತೆ. ಇದು ನಿಮ್ಮ ಮಗಳಿಗೂ ಕಷ್ಟವಾಗಬಹುದು. ಮುಂದೆ ಅದೇ ಒಡಗಿಕೆ ಕಾರಣವಾಗಬಹುದು "

ಚಿರಂತ ಹೇಳಿಮುಗಿಸುವಷ್ಟರಲ್ಲಿ  ನಾಗಪ್ಪ  ಅವಸರದಲ್ಲಿ ಮಾತನಾಡಿದರು.

"ಇಲ್ಲ, ಇಲ್ಲ. ಹಾಗೇನು ಇಲ್ಲ. ನಿಮಗೆ ಅನುಕೂಲವಾದಾಗ ಬಂದು ಹೋದ್ರೆ ಸಾಕು "

" ಇಲ್ಲಿ ನಿಮ್ಮ ಕ್ಷೇಮ ಯಾರು ನೋಡ್ಕೋತಾರೆ ನಾಗಪ್ನೋರೆ ? "

"ಅಯ್ಯೋ ನಮ್ಮದೇನು ಬಿಡಿ ಹೇಗೋ ಆಗುತ್ತೆ. ಗಾಳಿಗೆ ಬಿದ್ಧ್ಹೋಗೋ ಮರ, ಸತ್ತಮೇಲೆ ಸಮಾಧಿ, ಅಷ್ಟೆ "

ಚಿರಂತ ತುಸು ಗಂಭೀರವಾದ. ಅದೇ ಧಾಟಿಯಲ್ಲೇ ಮಾತನಾಡಿದ.

" ಬದುಕು ಅನ್ನೋದು ಒಂದೇ ಸಲ ಸ್ವಾಮಿ. ಸತ್ತಮೇಲೆ ನಾನು ಚಿರಂತನೂ ಅಲ್ಲ, ನೀವು ನಾಗಪ್ಪನೂ ಅಲ್ಲ.  ಏನಾಗ್ತಿವೀ ಅನ್ನೋದು ಯಾರಿಗೂ ಗೊತ್ತಿಲ್ಲ. ಸತ್ತಮೇಲಲ್ಲ ಸ್ವಾಮಿ ಸಮಾಧಿಯಾಗೋದು, ಬದುಕಿದ್ದಾಗಲೇ ಆಗಬೇಕು. ಇದನ್ನೇ ಕರ್ಮಯೋಗದಲ್ಲಿ ಹೇಳಿರೋದು.  ಬದುಕನ್ನು ಪರಿಪೂರ್ಣವಾಗಿ ಅನುಭವಿಸೋ ಅವಕಾಶ ಇರೋವಾಗ ಅದನ್ನ ನೀವೆ ದೂರ ಮಾಡಿ ಯಾವುದೋ ಮರಿಚಿಕೆಯ ಬೆನ್ನು ಹತ್ತಿ ಹೋಗ್ತಾ ಇದ್ದೀರಿ. ನಿಮ್ಮ ನಿರ್ಧಾರ ನಿಮ್ಮ ಮಗಳಿಗೂ ಒಪ್ಪಿಗೆ ಇದೆಯೇ ಅಂತಾ ಕೇಳಿದ್ದೀರಾ ? "

ನಾಗಪ್ಪ ಅವಾಕ್ಕಾಗಿ ನಿಂತಿದ್ದರು. ಮಗಳ ಮುಖವನ್ನೊಮ್ಮೆ ನೋಡಿದರು. ಹೆಂಡತಿಯ ಮುಖವನ್ನೂ ನೋಡಿದರು. ಏನೂ ತೋಚಲಿಲ್ಲ.  ಚಿರಂತನನ್ನೇ ಕೇಳಿದರು.

" ಏನಂತಾಳೆ ನಮ್ಮ ಮಗಳು ? ಮತ್ತೆ ನಿಮ್ಮ ಮದುವೆ ವಿಷಯ ? "

ಚಿರಂತ ಪಲ್ಲವಿಯೆಡೆಗೆ ತಿರುಗಿದ. ಇಬ್ಬರ ಮಖದಲ್ಲೂ ನಗು ತೇಲುತ್ತಿತ್ತು

"ಪಲ್ಲವಿಯವರೆ, ನಮ್ಮಲ್ಲಿ ಮದುವೆಗೆ ಹೆಣ್ಣು ಸಿಗೋದು  ಕಷ್ಟವಾಗಿದೆ. ನನಗೆ ಹೆಣ್ಣು ಹುಡುಕಿಕೊಡೊ ಹೊಣೆ ನಿಮ್ಮದೆ . ಏನಂತೀರಿ ? "

ಪಲ್ಲವಿ ನಗುತ್ತಲೆ ಹೇಳಿದಳು.

" ಸ್ನೇಹಿತರಿಗೆ ಅಷ್ಟೂ ಮಾಡದಿದ್ರೆ ಹೇಗೆ ಹೇಳಿ ? ಆ ಹೊಣೆ ನನ್ನದೆ "

ಅಲ್ಲಿದ್ದ ಉಳಿದ ಮೂವರಿಗೂ ಏನೊಂದೂ ಅರ್ಥವಾಗಲಿಲ್ಲ. ಚಿರಂತನೇ ಮುಂದುವರಿಸಿದ

" ಪಲ್ಲವಿಯಂತಹ ಮಗಳನ್ನು ಪಡೆಯೋಕೆ ಪುಣ್ಯ ಮಾಡಿದ್ದೀರಿ ನೀವು. ನಿಮ್ಮ  ಬಾಳಿನ ಮುಸ್ಸಂಜೆಯಲ್ಲಿ ಆಕೆ ನಿಮ್ಮ ಸೇವೆಗೆ ನಿಲ್ಲಬೇಕಂತೆ. ನಿಮಗಿರೋಳು ಆಕೆಯೊಬ್ಬಳೆ.  ಗಂಡು...ಹೆಣ್ಣು. ಎಲ್ಲಾ ಅವಳೆ ನಿಮಗೆ. ಆಕೆಯನ್ನು ಇಲ್ಲಿಯವರಗೆ ಬೆಳೆಸಿ ಒಳ್ಳೆಯ ಸಂಸ್ಕಾರ-ಸಂಸ್ಕೃತಿ ಕಲಿಸಿಕೊಟ್ಟ ನಿಮ್ಮನ್ನು ಒಂಟಿಯಾಗಿ ಬಿಟ್ಟು , ಆಕೆ ಬೇರೆಲ್ಲೋ ಸಂತೋಷವಾಗಿ ಇರೋದು ಹೇಗೆ ಸಾಧ್ಯ ಹೇಳಿ ?  ಅದಕ್ಕೇ ಅಂತಲೇ ಆಕೆ ಈ ಊರು ಬಿಟ್ಟು ಬರೋಕೆ ತಯಾರಿಲ್ಲ. ಆಕೆ ತನ್ನ ಸಂಗಾತಿಯನ್ನೂ ಆಯ್ಕೆ ಮಾಡಿಕೊಂಡಿದ್ದಾಳೆ. ಆಕೆಯ ಸಹಪಾಠಿಯಂತೆ. ಚಿಕ್ಕಮಗಳೂರು ಕಾಲೇಜಿನಲ್ಲಿ ಉಪನ್ಯಾಸಕರು. ನಿಮ್ಮ ಮಗಳಿಗೂ ಅದೇ ಕೆಲಸ ಮಾಡಬೇಕು ಅನ್ನೋ ಆಸೆ ಇದೆ. ನೀವು ಸ್ವಲ್ಪ ಉದಾರ ಮನಸು ಮಾಡಿದರೆ, ಎಲ್ಲವೂ ಒಳ್ಳೆಯದೇ ಆಗುತ್ತೆ . ಏನಂತೀರಿ ನಾಗಪ್ನೋರೆ ? "

ನಾಗಪ್ಪ ಸೀತಮ್ಮನ ಮುಖವನ್ನೊಮ್ಮೆ ನೋಡಿದರು. ಆ ಕ್ಷಣಕ್ಕೆ ಸೀತಮ್ಮನ ಮುಖ ಏನೋ ಹೊಸತನ್ನು ಕಂಡಂತೆ ಅರಳಿತ್ತು.  ನಾಗಪ್ಪ ಪಲ್ಲವಿಯ ಬಳಿಗೆ ತೆರಳಿದರು. ಮಗಳ ಮುಖವನ್ನೊಮ್ಮೆ ಸಾದ್ಯಂತ ದಿಟ್ಟಿಸಿದರು. ಅಮೂರ್ತಭಾವವೊಂದು ಅವರನ್ನು ಆವರಿಸಿತು. ಗಟ್ಟಿಯಾಗಿ ಮಗಳನ್ನೊಮ್ಮೆ ಬಾಚಿ ತಬ್ಬಿಕೊಂಡರು. ಅವರ ಕಣ್ಣಿಂದ ಉದುರುತ್ತಿದ್ದ ಹನಿಗಳು , ಪಲ್ಲವಿಯ ಸೀರೆಯ ಸೆರಗಿನ ಮೇಲೆ ಹನಿ-ಹನಿಯಾಗಿ ಬೀಳುತ್ತಿತ್ತು.

......................................................................................................

( ಮುಗಿಯಿತು ..ಅಂದುಕೊಳ್ಳುತ್ತೇನೆ :-) )

ವಂದನೆಗಳೊಂದಿಗೆ...

51 comments:

Manjunatha Kollegala said...

"ಪಲ್ಲವಿಯವರೆ, ನಮ್ಮಲ್ಲಿ ಮದುವೆಗೆ ಹೆಣ್ಣು ಸಿಗೋದು ಕಷ್ಟವಾಗಿದೆ. ನನಗೆ ಹೆಣ್ಣು ಹುಡುಕಿಕೊಡೊ ಹೊಣೆ ನಿಮ್ಮದೆ . ಏನಂತೀರಿ ?" ಅಂತ ಒಂದು ಹೊಸ ಎಳೆ ಶುರು ಮಾಡಿಬಿಟ್ಟು, ಆ ಹುಡುಗೀ ಕೈಲಿ "ಹೂಂ" ಅಂತ್ಲೂ ಅನ್ನಿಸಿಬಿಟ್ಟು ಇದ್ದಕ್ಕಿದ್ದಹಾಗೆ ನೀವು "ಮುಗಿಯಿತು ಅಂದುಕೊಳ್ಳುತ್ತೇನೆ" ಅಂದುಬಿಟ್ಟರೆ ಹೇಗೆ ಸ್ವಾಮಿ?

ಪಾಪ ಆ ಹುಡುಗನ್ನ ತ್ರಿಶಂಕುಸ್ವರ್ಗದಲ್ಲಿ ನೇತಾಡಕ್ಕೆ ಬಿಟ್ಟು... :) - ಮುಂದುವರೆಸಿ ಎಲ್ಲಾ ಎಳೆಗಳನ್ನು ಕಟ್ಟಿ ಮುಗಿಸಿ.

ಮನದಾಳದಿಂದ............ said...

ಅದ್ಭುತ, ಅತ್ಯದ್ಭುತ!
ಸುಂದರ ನಿರೂಪಣೆ, ಉತ್ತಮ ಆದರ್ಶದೊಂದಿಗೆ ಕತೆಯ ಸುಖಾಂತ್ಯವಾದದ್ದು ಖುಷಿ ಕೊಟ್ಟಿತು.
ಆದರೆ,
ಈ ಕಾಲದಲ್ಲಿ, ಅದೂ ಹಳ್ಳಿಯಲ್ಲಿ ಮಗಳ ಪ್ರೀತಿಯನ್ನು ಇಷ್ಟೊಂದು ಸರಳ ನೇರವಾಗಿ ಒಪ್ಪಿಕೊಳ್ಳುವ ಅಪ್ಪ ಅಮ್ಮಂದಿರು ಇದ್ದಾರೆಯೇ? (ಸಣ್ಣ ಅನುಮಾನ ಅಷ್ಟೇ!)

V.R.BHAT said...

ಬಹಳ ಚೆನ್ನಾಗಿ ನಿರೂಪಿಸಿದ್ದೀರಿ, ಕಥೆ ಸುಖಾಂತ್ಯವಾದಾಗ ಓದುಗರಿಗೆ ತಮ್ಮ ಮೇಲಿನ ಭಾರವೇನೋ ಇಳಿಸಿಕೊಂಡ ಸುಖದ ಅನುಭವಾಗುತ್ತದೆ, ಇಷ್ಟವಾಯ್ತು, ಧನ್ಯವಾದಗಳು

ಮನಸು said...

ತುಂಬಾ ಚೆನ್ನಾಗಿದೆ ಸರ್, ಒಟ್ಟಲ್ಲಿ ಎಲ್ಲರೂ ಒಪ್ಪುವಂತೆ ಮಾಡಿಬಿಟ್ಟಿರಿ...... ನಿರೂಪಣೆ ಸೂಪರ್.....

ತೇಜಸ್ವಿನಿ ಹೆಗಡೆ said...

ತುಂಬಾ ಚೆನ್ನಾಗಿದೆ ಕಥೆ.... ನೀವಿದನ್ನು ಯಾವುದಾದರೂ ಪತ್ರಿಕೆ/ಮ್ಯಾಗಜ಼ಿನ್‌ಗೆ ಕಳುಹಿಸಿ. ನಿಮ್ಮ ನಿರೂಪಣಾ ಶೈಲಿಯೂ ಚೆನ್ನಾಗಿದೆ. ಇದನ್ನೇ ಬೆಳೆಸಿಕೊಂಡು ಬಳಸಿಕೊಳ್ಳಿ. ಮತ್ತಷ್ಟು ಕಥೆಗಳು ಹೊರಬರಲಿ.

shridhar said...

ಉತ್ತಮ ನಿರೂಪಣೆ ..ಒಳ್ಳೆಯ ಮುಕ್ತಾಯ ...
ಕಥೆ ಚೆನ್ನಾಗಿದೆ ...

AntharangadaMaathugalu said...

ನಿರೂಪಣಾ ಶೈಲಿ ಸಕ್ಕತ್.... ’ಮುಗಿಯಿತು ಅಂದು ಕೊಳ್ಳುತ್ತೇನೆ’ ಎಂಬ ಸಂದೇಹವೇಕೋ...? ಚಿಕ್ಕ-ಚೊಕ್ಕದಾಗಿ ಮುಗಿಸಿಬಿಟ್ಟಿದ್ದೀರೆಂದೇ..? ಇನ್ನೂ ಬೆಳೆಸ ಬಹುದಿತ್ತು, ಆದರೆ, ಹೀಗೇ ಚೆನ್ನಿದೆ ಅನ್ಸತ್ತೆ. ಆದರೂ ಯಾವ ಒಂದು ಚರ್ಚೆಯೂ ಇಲ್ಲದೆ, ಪಲ್ಲವಿಯ ತಂದೆ ಒಮ್ಮೆಗೇ ಚಿರಂತನ ಮಾತು ಒಪ್ಪಿದ್ದು ಸ್ವಲ್ಪ ಆಶ್ಚರ್ಯವೇ ಅನ್ನಿಸಿತು... ಒಟ್ಟಿನಲ್ಲಿ ಚೆನ್ನಾಗಿದೆ....

ಸಾಗರಿ.. said...

ಕಥೆ ಬಹಳ ಚೆನ್ನಾಗಿದೆ. ನನಗೆ ತಮ್ಮ ನಿರೂಪಣೆಯ ಧಾಟಿ ಬಹಳ ಹಿಡಿಸಿತು.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಬಹಳ ಚೆನ್ನಾಗಿ ನಿರೂಪಿಸಿದ್ದೀರಿ.ಅಭಿನ೦ದನೆಗಳು.

sunaath said...

ಕತೆ ಇಂತಹ ತಿರುವನ್ನು ತೆಗೆದುಕೊಳ್ಳುವದು ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ತುಂಬ ಉತ್ತಮವಾದ ಅಂತ್ಯ. ಅಲ್ಲದೆ ಎಲ್ಲ ಪಾತ್ರಗಳಿಗೂ ಸುಖ ನೀಡುವ ಸುಖಾಂತ. ಕತೆಯಲ್ಲಿ ವಾಸ್ತವಿಕ ಸಂದೇಶವೂ ಇದೆ. ಅವಸರವಿಲ್ಲದೆ ಕತೆಯ ಬೆಳವಣಿಗೆಯಾಗಿದೆ. ಒಳ್ಳೆ ಕತೆಗಾಗಿ ಅಭಿನಂದನೆಗಳು.

prabhamani nagaraja said...

'ಆಹಾ ನೋಡದೋ.....' ಈ ಶೀರ್ಷಿಕೆಯು 'ಮರೀಚಿಕೆ' ಎನ್ನುವ ಅರ್ಥ ವನ್ನು ಕೊಡುವ೦ತಿದೆ. ಸುಖಾ೦ತ್ಯವನ್ನು ನಿರೀಕ್ಷಿಸಿರಲಿಲ್ಲ. ಚೆನ್ನಾಗಿದೆ. ಧನ್ಯವಾದಗಳು. ನೀವು ನನ್ನ ಬ್ಲಾಗ್ ಗೆ ಬ೦ದು ಬಹಳ ದಿನಗಳಾದವು. ಒಮ್ಮೆ ಭೇಟಿ ನೀಡಿ.

Subrahmanya said...

ಕೊಳ್ಳೇಗಾಲದವರೆ,

ಅಂತೂ ನನ್ನನ್ನು ವಿಶ್ವಾಮಿತ್ರನನ್ನಾಗಿ ಮಾಡಿಬಿಟ್ರಿ !. :-).

ಹುಡುಗನಿಗೂ ಒಂದು ದಾರಿ ಮಾಡೋಣ ಬಿಡಿ. ಮುಂದಿನ ಸಂಗತಿಗಳನ್ನೆಲ್ಲ ನಿಮ್ಮ ಕಲ್ಪನೆಗೆ ಬಿಟ್ಟಿದ್ದೇನೆ. :).

ನಿಮ್ಮ ಎಂದಿನ ಪ್ರೋತ್ಸಾಹಕ್ಕೆ ಅನೇಕ ವಂದನೆಗಳು.

Subrahmanya said...

ಪ್ರವೀಣರೆ,

ನಿಮಗೆ ಖುಷಿಯಾದ್ದು ನನಗೂ ಸಂತೋಷವಾಯ್ತು.
ನಿಮ್ಮ ಪ್ರೋತ್ಸಾಹಪೂರ್ವಕ ನುಡಿಗಳಿಗೆ ಧನ್ಯವಾದ.

Subrahmanya said...

ವಿ.ಆರ್.ಭಟ್ಟರೆ,

ಧನ್ಯವಾದಗಳು ನಿಮಗೂ.

Subrahmanya said...

ಮನಸು,

:). ಕತೆ ಬರೆದಿದ್ದಷ್ಟೇ ನನಗೆ ಗೊತ್ತು. ಉಳಿದದ್ದೆಲ್ಲಾ ನಿಮ್ಮಂತಹ ಸಹೃದಯ ಓದುಗರಿಗೇ ಬಿಟ್ಟಿದ್ದೇನೆ.
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

Subrahmanya said...

ತೇಜಸ್ವಿನಿ ಹೆಗಡೆ,

ಹ್ಮ...ok. ಪ್ರಯತ್ನ ಪಡುವೆ. ನಿಮ್ಮ ಪ್ರೋತ್ಸಾಹಪೂರ್ವಕ ನುಡಿಗಳು , ವಿಶ್ವಾಸ ಇಲ್ಲಲ್ಲದೆ ಮತ್ತೆಲ್ಲಿ ಸಿಕ್ಕೀತು ?

ಬೆನ್ನು ತಟ್ಟಿದ್ದಕ್ಕೆ ಧನ್ಯವಾದಗಳು.

Subrahmanya said...

ಶ್ರೀಧರ್ ಸರ್,

ಕೊನೆಯವರೆವಿಗೂ ಓದಿಕೊಂಡು ಬಂದು ಪ್ರೋತ್ಸಾಹಿಸಿದ ನಿಮಗೆ ನನ್ನ ಧನ್ಯವಾದಗಳು.

Subrahmanya said...

ಶ್ಯಾಮಲ ಅವರೆ,

ಮುಗಿಯಿತು ಎಂದುಕೊಂಡರೆ, ಮತ್ತೆಲ್ಲೊ ಪ್ರಾರಂಭವಾಗಬಹುದೆಂದು ಸುಮ್ಮನೆ ಹಾಗೆ ಬರೆದಿದ್ದೇನಷ್ಟೆ. ಬೆಳೆಸಿದ್ದರೆ ಇನ್ನೂ ದೊಡ್ಡ ಕತೆಯೇ ಆಗಬಹುದಿತ್ತು. ಕತೆಯ theme ಗೆ ಇಷ್ಟೇ ಸಾಕೆನಿಸಿತು.

ಪ್ರೊತ್ಸಾಹಕ್ಕೆ ಧನ್ಯವಾದಗಳು.

Subrahmanya said...

ಸಾಗರಿ,

ನಿರೂಪಣೆಯ ಬಗೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವೂ ಕೂಡ ಪ್ರೋತ್ಸಾಹಿಸಿದ್ದೀರಿ. ನಿಮ್ಮ ಸಲಹೆ, ಪ್ರೋತ್ಸಾಹಗಳು ನನಗೆ ಬಹಳ ಉಪಯುಕ್ತವಾಗಿವೆ.

ಧನ್ಯವಾದಗಳು.

Subrahmanya said...

ಕು.ಸು.ಮು. ,

ಧನ್ಯವಾದ ಸರ್. ಬರ್ತಾ ಇರಿ.

Subrahmanya said...

ಕಾಕಾಶ್ರೀ,

ನಿಮ್ಮ ಅಭಿನಂದನೆಗಳಿಗೆ ನಾನು ಆಭಾರಿ. ಪ್ರತಿಯೊಂದು ಹಂತದಲ್ಲೂ ಸೂಕ್ಷ್ಮವಾಗಿ ತಿದ್ದಿ-ತೀಡಿ ಪ್ರೋತ್ಸಾಹಿಸಿದ ನಿಮಗೆ ನಾನು ಕೃತಜ್ಞ.

ನಿಮಗೂ ಅನೇಕ ವಂದನೆಗಳು.

Subrahmanya said...

ಪ್ರಭಾಮಣಿಯವರೆ,

ಶೀರ್ಷಿಕೆಗೆ ತಕ್ಕಂತೆ ಕತೆಯನ್ನೂ ಹೇಳಿದ್ದೇನೆಮ್ದು ನನ್ನ ಭಾವನೆ. ನಿಮ್ಮ ಸಲಹೆಗಳು ಅತ್ಯವಶ್ಯಕ. ಬರುತ್ತಿರಿ.

ಧನ್ಯವಾದಗಳು.

ಸುಮ said...

kathe tumba chennaagide.

ದಿನಕರ ಮೊಗೇರ said...

tumbaa chennaagide sir.... adbhuta antya.... tumbaa tumbaa tumbaa chennaagide.....

Dileep Hegde said...

ಮೊದ್ಲೇ ಅವರಲ್ಲಿ ಹೆಣ್ಣು ಸಿಗೋದು ಕಷ್ಟವಂತೆ.. ನೀವು ಸಿಕ್ಕ ಈ ಅವಕಾಶವನ್ನೂ ತಪ್ಪಿಸಿ ಬಿಟ್ರಿ... ಪಾಪ ಚಿರಂತ.. :P
ಕಥೆ ತುಂಬಾ ಇಷ್ಟವಾಯ್ತು...

Subrahmanya said...

ಸುಮ ಅವರೆ,

ಧನ್ಯವಾದಗಳು.

Subrahmanya said...

ದಿನಕರ್ ಸರ್,

ನಿಮ್ಮ ಪ್ರೋತ್ಸಾಹಕ ನುಡಿಗಳಿಗೆ ಅನೇಕ ವಂದನೆಗಳು.

Subrahmanya said...

ದಿಲೀಪ್,

ಆ ಪಾಪದವನಿಗೆ ’ಆ’ ಹುಡುಗಿಯೇ ಹೆಣ್ಣು ಹುಡುಕಿಕೊಡುತ್ತಾಳಂತೆ...ಧೈರ್ಯವಾಗಿರಿ .:).

ಕತೆಯನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

ಮನಸಿನ ಮಾತುಗಳು said...

ಕಥೆಯ ಮೊದಲನೇ ಭಾಗ ಓದಿದ್ದೆ.. ಎರಡನೇ ಭಾಗದಿಂದ ಓದುತ್ತ ಬಂದೆ..
ಇಷ್ಟ ಆಯ್ತು.. :-)

ಸೀತಾರಾಮ. ಕೆ. / SITARAM.K said...

ಚೆನ್ನಾಗಿ ನಿರೂಪಣೆ ಮಾಡಿ ಸೊಗಸಾದ ಸುಖಾಂತ್ಯದಲ್ಲಿ ಕಥೆ ಮುಗಿಸಿದ್ದಿರಾ... ಆದರೆ ಚಿರಂತನ ಮದುವೆಗಾಗಿ ಪ್ರಾರಂಭವಾದ ಕಥೆ ಅವನ ಮದುವೆ ಅಗದಿದ್ದಕ್ಕೆ ದು:ಖಾ೦ತ್ಯವೇನೋ?
ಒಟ್ಟಿನಲ್ಲಿ ಅದ್ಭುತ ಕಥೆ ಮತ್ತು ಕಥೆಗಾರಿಕೆ.

Subrahmanya said...

ದಿವ್ಯಾ,

ತುಂಬ ಧನ್ಯವಾದಗಳು.

Subrahmanya said...

ಸೀತಾರಾಮ ಗುರುಗಳೆ,

ಕತೆಯ ಸಾರ ಗ್ರಹಿಸುವುದು ಓದುಗನ ಕಲ್ಪನೆ ಮತ್ತು ವಿಮರ್ಷೆಗೆ ಬಿಟ್ಟದ್ದಲ್ಲವೆ ? :). ಆ ಹುಡುಗನಿಗೆ ಮದುವೆ ಮಾಡಿಸುವ ಹೊಣೆಯನ್ನು ಆ ಹುಡುಗಿ ತೆಗೆದುಕೊಂಡಿದ್ದಾಳೆ. ಹಾಗಾಗಿ ಮದುವೆ ಆಗುತ್ತದೆ ಬಿಡಿ !. :).

ನಿಮ್ಮ ಎಂದಿನ ಪ್ರೋತ್ಸಾಹಪೂರ್ವಕ ನುಡಿಗಳಿಗೆ ಶರಣು.

Harisha - ಹರೀಶ said...

ಒಂದೇ ಬಾರಿಗೆ ಮೂರೂ ಭಾಗಗಳನ್ನೂ ಓದಿಸಿಕೊಂಡು ಹೋಯ್ತು! ನವಿರಾದ ಕಥೆ.. ಹೀಗೇ ಬರೆಯುತ್ತಿರಿ.

ಚುಕ್ಕಿಚಿತ್ತಾರ said...

ಸುಂದರ ನಿರೂಪಣೆ....ಉತ್ತಮವಾದ ಅಂತ್ಯ....ಇಷ್ಟವಾಯ್ತು....
ಧನ್ಯವಾದಗಳು

ಮನಮುಕ್ತಾ said...

ಕುತೂಹಲಭರಿತ ಕಥೆಗೆ ತಕ್ಕವಾದ ವಿವರಣೆ ಕೊಟ್ಟು ಸು೦ದರ ಮುಕ್ತಾಯ ಕೊಟ್ಟಿದ್ದೀರಿ..ತು೦ಬಾ ಹಿಡಿಸಿತು.

Subrahmanya said...

ಚುಕ್ಕಿಚಿತ್ತಾರ,

ಇಷ್ಟಪಟ್ಟು ಹುರಿದಂಬಿಸಿದ್ದೀರಿ. ಧನ್ಯವಾದಗಳು ನಿಮಗೆ.

Subrahmanya said...

ಹರೀಶ್ ಅವರೆ,

ಮೊದಲಿನಿಂದ ಮೂರನ್ನು ಓದಿ ಅಭಿಪ್ರಾಯ ತಿಳಿಸಿದ್ದು ಮುಂದಿನ ಬರವಣಿಗೆಗೆ ಸಹಾಯಕವಾಯ್ತು. ನಿಮ್ಮ ಪ್ರೋತ್ಸಾಹದ ನುಡಿ ಓದಿ ಸಂತೋಷವಾಯಿತು. ಬರುತ್ತಿರಿ.

Subrahmanya said...

ಮನಮುಕ್ತಾ,

ಮೆಚ್ಚಿ ಬೆನ್ನುತಟ್ಟಿದ್ದೀರಿ. ಧನ್ಯವಾದಗಳು.

ಜಲನಯನ said...

ಸುಬ್ರಮಣ್ಯ..ನಿಮಗೆ ಭಲೇ ಎನ್ನದೇ ವಿಧಿಯಿಲ್ಲ....ಬಹು ಲಘು ಆದರೂ ಬಹು ಗುರುತರ ಮನೋಧರ್ಮದ ..ಬಾಳಿನಲ್ಲಿ ಹೀಗೂ ಸಾಧ್ಯ ಎನ್ನುವಂತಹ ವಿಚಾರದ..ನಕಾರಾತ್ಮಕಗಳು ಬೆರಳೆಣಿಕೆಯಷ್ಟು...ಅದನ್ನೇ ವೈಭವೀಕರಿಸುವುದು ಮತ್ತೆ ಕಥೆಯಾಗಿಸುವುದು ಎಷ್ಟು ನೈಜ ಎನ್ನುವಂತೆ ಮೂಡಿ ಬಮ್ದಿದೆ ಕಥೆ...ಆ ಹೆಣ್ಣುಮಗಳ ಮನೋಧರ್ಮ ಮತ್ತು ಅದಕ್ಕೆ ಉತ್ತೇಜನ ನೀಡುವ ಹುಡುಗ ಎಲ್ಲ..ಚನ್ನಾಗಿದೆ,,ಇಷ್ಟವಾಯ್ತು...

Subrahmanya said...

ಜಲನಯನ,

ತುಂಬ ಧನ್ಯವಾದ ಸರ್.

ಶಿವಪ್ರಕಾಶ್ said...

hmmm... antu olle climax...
jinke mari miss aytu nodla maga :D

Subrahmanya said...

ಶಿವು,

ಥ್ಯಾಂಕ್ಸ್.

ಮಿಸ್ ಆದ ಜಿಂಕೆಮರಿ ’ಕುಡತಿನಿ’ಯಲ್ಲಿದೆಯಂತೆ !.

ಮನಸಿನಮನೆಯವನು said...

ಸುಂದರ ತಿರುವನ್ನೇ ನೀಡಿದ್ದೀರಿ..
ಹಾಗೆ ಮಾತನಾಡಲು ಬಿಡದಿದ್ದರೆ..?/
ಕೆಲವರು ಹೀಗೆ ಹೇಳಿಕೊಳ್ಳದೆ ಜೀವನ ಪೂರ್ತಿ ನೆಮ್ಮದಿ ಇಲ್ಲದಹಾಗೆ ಮಾಡಿಕೊಳ್ಳುತ್ತಾರೆ..
ಒಟ್ಟಿನಲ್ಲಿ ಎಲ್ಲ ಸರಿಹೊಯ್ತಲ್ಲ..

shivu.k said...

ಸುಬ್ರಮಣ್ಯ ಸರ್,

ಕತೆಗೆ ಒಂದು ಸುಂದರ ಅಂತ್ಯವನ್ನು ಕೊಟ್ಟಿದ್ದೀರಿ. ಹಿರಿಯರ ಅರಿವಿಗೆ ಬರದ ವಿಚಾರಗಳನ್ನು ಈಗಿನ ಮಕ್ಕಳು ತಿಳಿದುಕೊಂಡಿದ್ದಾರೆ ಮತ್ತು ಬದುಕಿನ ಬಗ್ಗೆ ಎಷ್ಟು ಚೆನ್ನಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆ ಹುಡುಗ ಮತ್ತು ಪಲ್ಲವಿ ನಿರ್ಧಾರಗಳೇ ಸಾಕ್ಷಿ.

Subrahmanya said...

ಮನಸಿನಮನೆಯವರೆ,

ಕೆಲವೊಮ್ಮೆ ಹಾಗಾಗುವುದೂ ನಿಜ.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

Subrahmanya said...

ಶಿವು ಸರ್,

ಕತೆಯನ್ನು ಓದಿ ಮೆಚ್ಚಿ ಪ್ರೋತ್ಸಾಹಿಸಿದ ನಿಮಗೂ ಧನ್ಯವಾದಗಳು.

Snow White said...

adbuthavada kathe :)tumba ididsitu sir :)dhanyavadagalu hanchikondidakke
:)

Unknown said...

ಉತ್ತಮ ಕಥೆ ಉತ್ತಮ ಅಂತ್ಯ ಕಂಡಿದ್ದು ಖುಷಿ ನೀಡಿತು..

Subrahmanya said...

ಸ್ನೋ ವೈಟ್,

ಥ್ಯಾಂಕ್ಯು.

Subrahmanya said...

ರವಿಕಾಂತ್ ಗೋರೆ,

ಧನ್ಯವಾದ ನಿಮಗೂ.

ವನಿತಾ / Vanitha said...

wow..ಉತ್ತಮ ಕಥೆ :))