ಈ ಸೇವೆ ಸುಮ್ಮನೆ ಒದಗಿ ಬಂದಿದ್ದು. ನಮ್ಮನೆ ಹಿತ್ತಿಲಿನಲ್ಲಿ ಸುಮ್ಮನೆ ಚಿಂವ್ ಚಿಂವ್ ಎಂದು ಓಡಾಡಿಕೊಂಡಿದ್ದ ಅಳಿಲಿಗೆ ’ಇರಲಿ’ ಅಂತಾ ಒಂದೆರೆಡು ಅನ್ನದಗುಳನ್ನು ಕಲ್ಲಿನ ಮೇಲಿಟ್ಟು ಬಂದಿದ್ದೆ. ಅಂದಿನಿಂದ ಸಮಯಕ್ಕೆ ಸರಿಯಾಗಿ ಬಂದು ಆ ಕಲ್ಲಿನ ಹತ್ತಿರವೇ ಕೂರುತ್ತಿತ್ತು ಆ ಅಳಿಲು. ನಮ್ಮನೆಯಲ್ಲಿ ಯಾರಾದರೊಬ್ಬರು ಅದಕ್ಕೆ ಒಂದಷ್ಟು ಹಾಲು-ಅನ್ನ ಹಾಕಿ ಬರುತ್ತಿದ್ವಿ. ಅದೂ ನಮ್ಜೊತೆ ಹೊಂದಿಕೊಳ್ತು. ಎಷ್ಟು ಹೊಂದಿಕೆ ಅಂದ್ರೆ ನೇರವಾಗಿ ಅಡಿಗೆ ಮನೆಗೇ ಬಂದು ಚಿಂವ್ ಚಿಂವ್ ಅನ್ನೋಕೆ ಶುರು ಮಾಡ್ತು. ನನ್ನವಳಿಗೆ ಇಂತಹ ಪ್ರಾಣಿಗಳನ್ನು ಕಂಡರೆ ಬಲು ಆಸಕ್ತಿ. ಅಳಿಲಿನ ಉಪಚಾರ ಇನ್ನೂ ಹೆಚ್ಚಾಯ್ತು. ಕೆಲವು ದಿನಗಳ ನಂತರ ಅದರ ಹೊಟ್ಟೆ ದಪ್ಪಗಾಗಿದ್ದನ್ನು ಗಮನಿಸಿದ ನನ್ನವಳು ’ಅದು ಪ್ರೆಗ್ನೆಂಟು’ ಅಂದ್ಲು. ’ಹಾಗಾದ್ರೆ ಇನ್ನೊಂದು ಸಂಸಾರಕ್ಕೆ ಬೇಳೆ-ಕಾಳು ಎಲ್ಲಾ ತಯಾರಿ ಮಾಡಿಡು’ ಅಂದೆ. ಹಾಗೇ ಕೆಲವು ದಿನಗಳು ಕಳೆಯಿತು. ಅಳಿಲಿನ ಕಡೆಗೆ ನಾನು ಅಷ್ಟು ಗಮನಹರಿಸಿರಲಿಲ್ಲ. ನನ್ನವಳು ’ಅದೆಲ್ಲೋ ಮರಿ ಹಾಕಿದೆ ಅನ್ಸುತ್ತೆ’ ಎಂದಾಗ ನಾನು ಉದಾಸೀನದಿಂದ ’ಒಳ್ಳೇದಾಯ್ತು ಬಿಡು’ ಅಂದಿದ್ದೆ. ಯಾರದೋ ಮನೆಯಲ್ಲಿ ಹೆಗ್ಗಣಕ್ಕೆ ಇಟ್ಟಿದ್ದ ನಂಜನ್ನು ತಿಂದು ಮುದ್ದಾದ ತಾಯಿ ಅಳಿಲು ನಮ್ಮನೆ ತೆಂಗಿನ ಮರದ ಕೆಳಗೆ ನಂಜೇರಿ ನಾಲಿಗೆ ಕಚ್ಚಿಕೊಂಡು ಸತ್ತು ಬಿದ್ದಿತ್ತು. ನನ್ನವಳಿಗೆ-ನನ್ನಮ್ಮನಿಗೆ ಅಂದು ಸರಿಯಾಗಿ ಊಟ-ತಿಂಡಿ ಸೇರಿರಲಿಲ್ಲ. ಇದಾದ ಮೂರು-ನಾಲ್ಕು ದಿನಗಳ ತರುವಾಯ ಮನೆಯೊಳಗೆ ಮಹಡಿಯ ಮೇಲಿಟ್ಟಿದ್ದ ಡಬ್ಬದಿಂದ ಚಿಂವ್ ಚಿಂವ್ ಸದ್ದು ಕೇಳಿ ಬಂತು. ಡಬ್ಬ ತೆರೆದು ನೋಡಿದರೆ ಮುದ್ದಾದ ಮೂರು ಅಳಿಲು ಮರಿಗಳು. ತಾಯಿ ಇಲ್ಲದ ತಬ್ಬಲಿಗಳು. ಎರಡು ಕಣ್ಣು ಬಿಟ್ಟಿದ್ದವು, ಇನ್ನೊಂದು ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಏನ್ಮಾಡೋದು ಎಂದು ಬಹಳ ಹೊತ್ತು ತಪರಾಡಿದ ನಂತರ ಇನ್ನೊಂದು ಹೊಸಾ ಡಬ್ಬಕ್ಕೆ ಮೆತ್ತನೆಯ ಹಾಸು ಹಾಸಿ ಹತ್ತಿ ಇಟ್ಟು ಮೂರೂ ಮರಿಗಳನ್ನು ಸುರಕ್ಷಿತವಾಗಿ ಅದರೊಳಗೆ ಬಿಟ್ಟೆವು. ಪೆನ್ನಿಗೆ ಇಂಕ್ ಹಾಕುವ ಫ಼ಿಲ್ಲರ್ ನಿಂದ ಮೂರೂ ಮರಿಗಳಿಗೂ ಹಾಲುಣಿಸಿದ್ದಾಯ್ತು. ಎರಡು ಮರಿಗಳು ಕೊಂಚ ಅನ್ನವನ್ನೂ ತಿಂದವು. ಈಗ ಆ ಮರಿಗಳಿಗೆ ಹಾಲು-ಆಹಾರ ಕೊಟ್ಟು ಪೋಶಿಸಿ ಹೇಗಾದರೂ ಮಾಡಿ ಅವನ್ನು ಉಳಿಸಿಕೊಳ್ಳಬೇಕೆಂದು ಯತ್ನಿಸುತ್ತಿದ್ದೇವೆ. ಉಳಿಯುತ್ತೋ-ಅಳಿಯುತ್ತೋ ಎಲ್ಲಾ ಆ ಶಂಭುಲಿಂಗನಿಗೇ ಗೊತ್ತು :-).
ನೀನಾರಿಗಾದೆಯೋ ಎಲೆ ಮಾನವಾ ? ಎಂದರೆ ನಾನು ಅಳಿಲಿಗಾದೆ ಎಂದು ಹೇಳುತ್ತೇನೆ :).
ಮರಿಗಳಿಗೆ ಹೊಟ್ಟೆ ತುಂಬಿಸಲು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ನಿಮ್ಮಲ್ಲೂ ಏನಾದರು ಸಲಹೆಗಳಿದ್ದರೆ ಕೊಡಿ, ಒಟ್ನಲ್ಲಿ ಅವುಗಳು ಕೊಂಚ ಓಡಾಡೋ ಹಾಗಾದ್ರೆ ಸಾಕು. ಆಮೇಲೆ ಅವುಗಳನ್ನು ಹಿಡಿಯೋದು ನಮ್ಮ ಕೈಲಿಲ್ಲ ಬಿಡಿ ! :)
ಇಲ್ಲೊಂದಷ್ಟು ಚಿತ್ರಗಳು.
ಎಲ್ಲಾ ಫುಲ್ ನಿದ್ದೆ .......
ಹಸಿದಿತ್ತೂ ಅನ್ಸುತ್ತೆ...ಚೆನ್ನಾಗಿ ಕುಡೀತು....
ನನ್ ಕೈ ಮೇಲೆ...... ಅನ್ನ ತಿನ್ನಪ್ಪಾ.......
ನಿದ್ದೆ..ನಿದ್ದೆ....
ನಮ್ಮನೆ ದೊಡ್ಡಳಿಲು... :-) ನನ್ನ ಮಗ.
***********************
ಕಿಡಿ:
ಅಂದು ಶಂಬ್ಲಿಂಗನ ಮೋರೆಯ ಮೇಲೆ ಸಂತಸ ನಲಿದಾಡುತ್ತಿತ್ತು.
ಅದೇ ಮೂಡಿನಲ್ಲಿ ಮನೆಗೆ ಬಂದವನೇ ಹೆಂಡತಿಗೆ ವಿಷಯವನ್ನು ಅರುಹಿದ
" ಇವತ್ತೊಬ್ಬರು ದೊಡ್ಡ ಅಯ್ನೋರು ಸಿಕ್ಕಿದ್ರು, ನನಗೆ ಮುಖ್ಯಮಂತ್ರಿ ಆಗೋ ಯೋಗ ಇದೆ ಅಂತಾ ಹೇಳ್ದ್ರು"
ಶಂಬ್ಲಿಂಗನ ಹೆಂಡತಿಯೂ ಸಂತಸದಿಂದಲೇ ಕಿರುಚಿದಳು.
"ಹೌದಾ, ಅಯ್ಯೋ ! ನನಗೂ ಒಬ್ರು ಅಯ್ನೋರು ಸಿಕ್ಕಿದ್ರು, ನಂಗೆ ರಾಜ್ಯಪಾಲ್ರಾಗೋ ಯೋಗ ಇದೆ ಅಂದ್ರು!! "
ಶಂಭುಲಿಂಗ ಹೇಳದೆ ಕೇಳದೆ ಅಲ್ಲಿಂದ ಕಂಬಿಕಿತ್ತ !.
19 comments:
ಅಳಿಲು ಸೇವೆಯಿ೦ದ ಪುಣ್ಯ ಹೆಚ್ಚಿಸಿಕೊಳ್ಳುತ್ತಿದ್ದೀರಿ..ಒಳ್ಳೆಯದು..:)
ಫೋಟೋಗಳೂ ಚನ್ನಾಗಿವೆ. ದೊಡ್ಡಳಿಲು ಮತ್ತೂ ಚನ್ನಾಗಿದೆ..:)
ಪುಣ್ಯದ ಕೆಲಸ ಮಾಡುತ್ತಿದ್ದೀರಿ.
ಎಲ್ಲಾ ಮರಿಗಳೂ ಚೆನ್ನಾಗಿ ಬೆಳೆಯಲಿ.
Sumana said...
Shambulingare... nimma alilugalu chennaagi beledu ..cheev, cheev annutta odiyaadali...olle kelasa maadtha ideera..
btw, 'kidi' antu sakhattaagide!
ತುಂಬಾ ಒಳ್ಳೆಯ ಕೆಲಸ....ಅಳಿಲು ಸೇವೆ....
ದೊಡ್ಡಳಿಲು ಸೂಪರ್....
ಜೈ ಹೋ....
kidi sooper...
ಅಳಿಲು ಸೇವೆಯಿ೦ದ ಪುಣ್ಯ ಹೆಚ್ಚಿಸಿಕೊಳ್ಳುತ್ತಿದ್ದೀರಿ..ಒಳ್ಳೆಯದು..:)
ಫೋಟೋಗಳೂ ಚನ್ನಾಗಿವೆ. ದೊಡ್ಡಳಿಲು ಮತ್ತೂ ಚನ್ನಾಗಿದೆ..:)
ಚುಕ್ಕಿ ಚಿತ್ತಾರru ನನ್ನ ಮಾತನ್ನೇ ಹೇಳಿದ್ದರಿಂದ ಅದನ್ನು ಕಾಪಿ ಮಾಡಿದ್ದೇನೆ.
ಸುಬ್ರಮಣ್ಯರವರೆ,
ಎಂತಾ ಅಳಿಲು ಸಾಕಿದ್ದೀರಿ ಒಂದು ಎರಡು ಚಿಕ್ಕದು ದೊಡ್ಡದು ಎರಡೂ ಸೂಪರ್.... ಅಳಿಲಿಗೆ ನೀಡಿದ ನಿಮ್ಮ ಹಾರೈಕೆ ... ತುಂಬಾ ಚೆನ್ನಾಗಿದೆ... ನೀವಿತ್ತ ಅಳಿಲುಸೇವೆ ನಿಮಗೆ ಒಳಿತನ್ನ ನೀಡಲಿ...
ಕಿಡಿ ಏನು ಹೀಗೆ ಹಾರುಸ್ತೀರಾ ಹಹಹ... ಸಮಯಕ್ಕೆ ತಕ್ಕ ಕಿಡಿ ಹತ್ತಿಕೊಂಡಿದೆ ಅನ್ನಿಸುತ್ತೆ ಹಹಹ.........
ನಿಮ್ಮ ಲೇಖನಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ.....
ತು೦ಬಾ ಉತ್ತಮವಾದ ಕೆಲಸ...ಒಳ್ಳೆಯದಾಗಲಿ.
ಮರಿಗಳು ಆರೋಗ್ಯವಾಗಿ ಬೆಳೆಯಲಿ.
Very Nice... :)
Liked 'ಕಿಡಿ' :)
ಅಳಿಲುಸೇವೆಯ ಪುಣ್ಯ ಕಡಿಮೆಯಲ್ಲ. ಶ್ರೀರಾಮಚಂದ್ರನೇ ಮೆಚ್ಚಿಕೊಂಡನಲ್ಲವೆ?
sir,olleya kelasa...aliligali aarogyavaagi beleyali...
alilu seve madiddakke nimage abhinandane, doddalilige sihinenapugalu-shubhakaamanegalu.
olle kelasa madideera.. :)
olle kelasa madideera..:)
ಶಂಭು ಸರ್,
ನಿಜಕ್ಕೂ ಇದು ಸೂಪರ್ ವಿಚಾರ. ನಿಮ್ಮ ಸೇವೆ ಖಂಡಿತ ಶ್ಲಾಘನೀಯ. ಫೋಟೊ ಸಮೇತ ವಿವರಣೆ ಕೊಟ್ಟಿದ್ದೀರಿ. ನವು ನಿಮ್ಮ ಜೊತೆ ಇದ್ದು ಎಲ್ಲವನ್ನು ನೋಡಿದಂತಾಯಿತು.
ತುಂಬಾ ಚಿನ್ನಾಗಿವೆ ಫೋಟೋಗಳು, ಅಳಿಲುಗಳೂ ಸಹಾ :)
ನಿಮ್ಮ ಅಳಿಲು ಸೇವೆಯ ಬಗ್ಗೆ ತಿಳಿದು ಮನಸ್ಸು ತು೦ಬಿ ಬ೦ದಿತು. ಚಿಕ್ಕ ಅಳಿಲುಗಳು ಚೆನ್ನಾಗಿ ಬೆಳೆದು ದೊಡ್ಡ ಅಳಿಲುಮರಿ ಜೊತೆ ಆಡುವ೦ತಾಗಲಿ!
tumba kushi aytu sir ee post odi..
haage last punch odi biddu biddu naguva haage aytu... (i think, kelavarige sariyaagi artha agilla ansutte.. sooper one)
Good work..nice photos too..
-Raghu
ಪ್ರತಿಕ್ರಿಯೆಗಳ ಮೂಲಕ ಒಳ್ಳೆಯ ಮಾತುಗಳನ್ನಾಡಿದ ಎಲ್ಲರಿಗೂ ನನ್ನ ಧನ್ಯವಾದಗಳು.
Post a Comment