Jul 11, 2011

ಏಕಾಶೀ ಉಪಾಸ..

ಸುಮ್ನೆ ,  ಜನ ಚೇಂಜ್ ಕೇಳ್ತಾರೆ ನೋಡಿ ಅದಕ್ಕೆ. ಇಂದು ಪ್ರಥಮ ಏಕಾದಶಿ ಉಪವಾಸದ ದಿವಸ. ಯಾರ್ಯಾರು ಹೇಗೆ ವನವಾಸ ಪಟ್ರೋ ಗೊತ್ತಿಲ್ಲ :) ನಮ್ ಸುಬ್ಬಮ್ನೋರ ಉಪಾಸದ ಕತೆ ಇಲ್ಲಿ ಕೇಳಿ. ರಾಜು ಅನಂತಸ್ವಾಮಿ ಕಂಠದಲ್ಲಿ.

*******


ಆಚೆ ಮನೆ ಸುಬ್ಬಮ್ನೋರ್ದು ಏಕಾದಶಿ ಉಪಾಸ
ಏಲ್ಲೋ ಸೊಲ್ಪ ತಿಂತಾರಂತೆ
ಅವಲಕ್ಕಿ ಉಪ್ಪಿಟ್ತು ಪಾಯ್ಸ  ||ಪ||

ಮೂರೋ ನಾಲ್ಕೋ ಬಾಳೇಹಣ್ಣು ಸೊಲ್ಪ ಚಕ್ಲೀ ಕೊಡ್ಬಳೇ
ಗಂಟೇಗ್ ಎರಡು ಕಿತ್ಲೇ ಹಣ್ಣು ಆದಾಗೊಂದು ಸೀಬೇಹಣ್ಣು

ಆಚೆಮನೆ |ಪ|


ಮಧ್ಯಾಹ್ನ್ವೆಲ್ಲಾ ರವೇಉಂಡೆ ಹುರುಳಿಕಾಳಿನ್ ಉಸ್ಲಿ
ಒಂದೊಂದ್ಸಲ ಬಿಸ್ಬಿಸಿ ಸಂಡ್ಗೆ ಒಂದೋ ಎರಡೋ ಇಡ್ಲಿ

ಆಚೆಮನೆ |ಪ|

ರಾತ್ರೆ ಪಾಪ ಉಪ್ಪಿಟ್ಟೇನೆ ಲೋಟದ್ ತುಂಬಾ ಹಾಲು
ಅರೇ... ಚೊಂಬಿನ್ ತುಂಬಾ ಹಾಲು |೨|
ಪಕ್ಕದ್ ಮನೆ ರಾಮೇಗವುಡರ್ ಸೀಮೆ ಹಸುವಿನ್ ಹಾಲು

ಆಚೆಮನೆ |ಪ|

ರಚನೆ : ಜಿ.ಪಿ. ರಾಜರತ್ನಂ

ಈ ಹಾಡನ್ನು ಇಲ್ಲಿ ಕೇಳಿ  :)

">

12 comments:

sunaath said...

ಪುತ್ತರ್,
ಹಾಡು ಕೇಳಿ ಹೊಟ್ಟೆ ತುಂಬಿ ಹೋಯ್ತು. ರಾಜರತ್ನಂ ಅವರ ರತ್ನವೊಂದನ್ನು ಕೊಟ್ಟದ್ದಕ್ಕಾಗಿ ಧನ್ಯವಾದಗಳು.

ಚುಕ್ಕಿಚಿತ್ತಾರ said...

:))

ತೇಜಸ್ವಿನಿ ಹೆಗಡೆ said...

:D BhaLa Famous Songu... Thanks for Sharingu :)

ಗಿರೀಶ್.ಎಸ್ said...

:-)

ಮನಸು said...

ಏಕಾದಶಿಗೆ ಪ್ರೆಸೆಂಟ್ ಮಾಡಿದ್ದೀರಾ ಹಹಹ ಸಕ್ಕತಾಗಿದೆ ... ಥ್ಯಾಂಕ್ಯೂ ನಾವು ಇನ್ನು ಮೇಲೆ ಉಪವಾಸ ಮಾಡಿದ್ರೆ ಹಿಂಗೆ ಮಾಡುವ ಅಂತಾ ಇದ್ದೀವಿ ಹಹಹ ಏನಂತೀರಾ!!!

ಸವಿಗನಸು said...

ಗುರುಗಳೆ,
ಅದ್ಕೆಯಾ ನಾ ಉಪಾಸ ಮಾಡೊಲ್ಲ.....
ಬೊ ಪಸಂದಾಗೈತೆ...

ಮನಮುಕ್ತಾ said...

hahahaa..

AntharangadaMaathugalu said...

ಹಾಡು ಕೇಳಿಸಿದ್ದಕ್ಕೆ ಧನ್ಯವಾದಗಳು.... :-)

ಸಾಗರದಾಚೆಯ ಇಂಚರ said...

hahhaha super

Raghu said...

ha ha updavasa chennagide..!!

Nimmava,
Raghu.

Subrahmanya said...

ಏಕಾದಶಿ ಉಪವಾಸ ಮಾಡಿ ಸುಸ್ತಾದ ಎಲ್ಲರಿಗೂ ವಂದನೆಗಳು :)

ಸೀತಾರಾಮ. ಕೆ. / SITARAM.K said...

ಉಪವಾಸ ನಮ್ಮದು. ಏನಿಲ್ಲ ಖಾಲಿ ಹೊತ್ತೆಲ್ಲಿದ್ದರೆ ಆ ದೇವಗೆ ಅವಮಾನ ಮಾಡಿದಂತ ಅದಕ್ಕೆಂದೇ ಸ್ವಲ್ಪ ಒಂದು ಲೋತೆ ಹಾಲು- ಹಾಲು ಸ್ವಲ್ಪ ಬಿಸಿಯಾದರೆ ಒಳ್ಳೆಯದು, ಹೇಗೂ ಪೋಲ್ ಹಚ್ಹ್ಚಿದ್ದಾಯ್ಥಲ್ಲ ಸ್ವಲ್ಪ ತುಪ್ಪ ಕಾಯಿಸಿ ಗೋಡಂಬಿ ದ್ರಾಕ್ಷಿ ಹುರಿದು ಹಾಲಿಗೆ ಹಾಕಿದರಾಯಿತು, ಜೊತೆಗೆ ಮೊನ್ನೆ ಶಾವಿಗೆ ಉಳಿದಿತ್ತು ಅದನ್ನು ಸೇರಿಸಿ ಹುರಿದರೆ ಅದು ಖಾಲಿಯಾಡಿತು, ಇಷ್ಟೆಲ್ಲಾ ಮಾಡಿದ ಮೇಲೆ ಒಂದು ಲೋತೆ ಹಾಲು ಸರಿಯಿರೋಲ್ಲಾ, ಪಾತ್ರೆ ತುಂಬವೆ ಮಾಡಿಬಿಡುವ.. ಇಡು ಏಕಾದಶಿಯ ಒಂದು ಲೋಟೆ ಹಾಲು ಪತ್ರೆ ಖೀರು ಆಗುವ ಬಗೆ.

ಚೆನ್ನಾಗಿದೆ.