Jan 12, 2012

ವಿವೇಕ ಚೂಡಾಮಣಿ-ಭಾಗ-೧೮


ನಲ್ಮೆಯ ಗೆಳೆಯ/ತಿಯರಿಗೆಲ್ಲಾ ಸಂಕ್ರಾತಿಯ ಶುಭಾಶಯಗಳು.

ಬ್ಲಾಗೋದುಗರ ಬೆಂಬಲದಿಂದ ಶಂಭುಲಿಂಗನ ಪುರಾಣಕ್ಕೆ ಎರಡು ವರುಷ ತುಂಬಿ ಮೂರನೆಯದು ಸಾಗುತ್ತಿದೆ.  ಸಾಗುತ್ತಲೇ ಇದ್ದರೆ ಚೆನ್ನ ಎನ್ನುವುದು ನನ್ನ ಅನಿಸಿಕೆ. ಶಿಖರದ ತುತ್ತತುದಿಯನ್ನು ತಲುಪಿ ಬಿಟ್ಟರೆ ಮುಂದೇನು ಎನ್ನುವ ಸಮಸ್ಯೆ ಮೊದಲಾಗುತ್ತದೆ. ನಂತರ ಅಲ್ಲಿಂದ ಕೆಳಮುಖವಾಗಿ ಇಳಿಯಲೇ ಬೇಕು !. ಅಧೋಗತಿಗಿಂತಲೂ ಏರುಗತಿಯೇ ಸೊಗಸು ಅಲ್ಲವೆ  ?! :).  ’ಕೊನೆಯನೆಂದು ಮುಟ್ಟದಿರು’ ಎನ್ನುವ ಕವಿವಾಣಿಯಂತೆ ಜೀವನದ ಪ್ರತಿಯೊಂದು ಕ್ಷಣವನ್ನು ’ಈಗಿನದೇ’ ಎನ್ನುವಷ್ಟು ಹೊಸತರಂತೆ ಅನುಭವಿಸೋಣ. ’ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ(ಜೀವನ)’ ಎಂದು ವರಕವಿಯ ವಾಣಿಯು ನಮ್ಮ ಬೆನ್ನು ತಟ್ಟುತ್ತಿರುತ್ತದೆ. ಈ ವರುಷದಲ್ಲಿ ಎಲ್ಲಾ ಸದಭಿರುಚಿಯ ಬ್ಲಾಗುಗಳೂ Update ಆಗಲಿ ಎಂದು ಹಾರೈಸೋಣ.  ಇದರೊಟ್ಟಿಗೆ ವಿವೇಕ ಚೂಡಾಮಣಿಯ ಮುಂದಿನ ಕಂತನ್ನು ಸೇರಿಸಿದ್ದೇನೆ.  ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು.

ವಿವೇಕ ಚೂಡಾಮಣಿ-ಭಾಗ-೧೮