Feb 22, 2011

ಶಂಭುವಾಣಿ - ೨


ದಯೆ ಮತ್ತು ಮರಣ

"ದಯವೇ (ದಯೆಯೇ) ಧರ್ಮದ ಮೂಲವಯ್ಯಾ" ಎಂದು ಬಸವಣ್ಣ ಮಹಾಶಯರು ಹೇಳಿದಾಗ ಜಗತ್ತಿನಲ್ಲಿ ದಯೆಯ ಔಚಿತ್ಯವನ್ನು ಯಾರೂ ಪ್ರಶ್ನಿಸಲಿಲ್ಲ. ಸಾಂಸ್ಕೃತಿಕ ಕಲಸು ಮೇಲೋಗರಗಳ ಇಂದಿನ ಜಗತ್ತಿನಲ್ಲಿ ದಯೆ, ಕರುಣೆ,ಮಾನವೀಯತೆಗಳೇ ’ಮೂಲವ್ಯಾಧಿ’ಯಯ್ಯಾ ಎಂದು ಮಾನ್ಯ ಶಂಭುಲಿಂಗರು ಹೇಳಿದರೆ ಯಾರೂ ಅಚ್ಚರಿ ಪಡಬೇಕಾಗಿಲ್ಲ. ಭಿಕ್ಷುಕನೊಬ್ಬನಿಗೆ ಒಂದು ರೂಪಾಯಿ ಹಾಕಿದರೆ , ಪಾರ್ಟಿಯನ್ನೊಮ್ಮೆ ತಲೆಯಿಂದ ಕಾಲಿನವರೆವಿಗೂ ನೋಡಿ ’ಒಳ್ಳೆ ಸೂಟು-ಬೂಟು ಆಕ್ಕಂಡವ್ನೆ, ಇಷ್ಟೆಯಾ ಇವ್ನ ಯೇಗ್ಯತೆ’ ಎಂದು ಬೈದುಕೊಂಡು ಹೋಗುವುದನ್ನು ಅನುಭವಿಸಿರುವವರು ಹೇರಳ.  ಕರುಣೆಗೆ ಬೆಲೆ ಎಲ್ಲಿದೆ ಸ್ವಾಮಿ !?.

ಇತ್ತೀಚೆಗೆ ಬಿಡುಗಡೆಯಾದ ಸಂಜಯ್ ಲೀಲಾ ಭನ್ಸಾಲಿ ಯ ನಿರ್ದೇಶನದ ’ಗುಜಾರಿಶ್’ ಎಂಬ ಹಿಂದಿ ಚಲನಚಿತ್ರದ ಕಥಾವಸ್ತು ’ದಯಾಮರಣ’. ಚಿತ್ರದ ನಾಯಕ ಖ್ಯಾತ ಜಾದುಗಾರ. obviously ಆತನಿಗೊಬ್ಬ ವಿಲನ್ ಜಾದುಗಾರ ಇರುತ್ತಾನೆ. ನಾಯಕನ ಜಾದೂ ಕಾರ್ಯಕ್ರಮ ನೆಡೆಯುವಾಗ ವಿಲನ್ ಜಾದುಗಾರ ಆತನನ್ನು ’ಮುಗಿಸುವ’ ಸಂಚು ಮಾಡುತ್ತಾನೆ. ಅದೃಷ್ಟವಶಾತ್ ನಾಯಕ ಸಾಯುವುದಿಲ್ಲ. ದುರಾದೃಷ್ಟಕ್ಕೆ ಆತ ಬದುಕಿಯೂ ಸತ್ತಂತಾಗುತ್ತಾನೆ. ಆತನ ಕೈ-ಕಾಲು-ಬೆನ್ನೆಲುಬುಗಳೆಲ್ಲವೂ ನಿಷ್ಕ್ರಿಯವಾಗಿ ಆತನೊಬ್ಬ ವರ್ತಮಾನದ ’ಭೂತ’ವಾಗುತ್ತಾನೆ. ಇಷ್ಟಾದರೂ, ನಾಯಕನ ಕುತ್ತಿಗೆಯ ಮೇಲ್ಭಾಗದ ಎಲ್ಲಾ ಅಂಗಗಳೂ ಅತ್ಯಂತ ಕ್ರಿಯಾಶೀಲವಾಗಿರುತ್ತವೆ. ಆತನಿಗೊಬ್ಬ care taker (cum ಸಂಗಾತಿ !) ಇರುತ್ತಾಳೆ. ಆಕೆಯೇ ಆತನ ’ಸಂಪೂರ್ಣ’ ಹೊಣೆಯನ್ನು ಹೊರುವವಳು !. ಮಲಗಿದಲ್ಲೇ ಎಲ್ಲಾ ಕಾರ್ಯಗಳನ್ನೂ ನಿರ್ವಹಿಸಬೇಕಾದ ಆತನಿಗೆ ಆಕೆಯೇ ಕೈ-ಕಾಲು-ಬೆನ್ನೆಲುಬಾಗಿ ನಿಲ್ಲತ್ತಾಳೆ.  ಅವರ ವೈಯಕ್ತಿಕ ಪ್ರಪಂಚದಲ್ಲಿ ಬೇರಾರಿಗೂ ಪ್ರವೇಶವಿರುವುದಿಲ್ಲ. ಇಷ್ಟಾದರೂ ನಾಯಕ ಮಾತ್ರ ಯಾವತ್ತೂ ಉತ್ಸಾಹದ ಚಿಲುಮೆಯಂತಿರುತ್ತಾನೆ. ತನ್ನಿಂದ ಇತರರಿಗೇಕೆ ತೊಂದರೆ (ತನಗೂ ಸಹ!) ಎಂಬ ಗೊಂದಲಕ್ಕೆ ಬೀಳುವ ನಾಯಕ ತನಗೆ ದಯಾಮರಣ ಕಲ್ಪಿಸುವಂತೆ ನ್ಯಾಯಾಲಯವನ್ನು ಕೇಳಿಕೊಳ್ಳುತ್ತಾನೆ. ಆತನ ಮತ್ತೊಬ್ಬ ವಕೀಲ ಸ್ನೇಹಿತೆ ಆತನ ಪರವಾಗಿ ವಕಾಲತ್ತು ವಹಿಸುತ್ತಾಳೆ          ( ಇದೆಲ್ಲಾ ತೀರಾ ಭಾವನಾತ್ಮಕ ಸನ್ನಿವೇಶಗಳು, ಭಾವುಕರು ಕರವಸ್ತ್ರ ಇಟ್ಟುಕೊಳ್ಳಬಹುದು). ನ್ಯಾಯಾಲಯ ಆತನಿಗೆ ದಯಾಮರಣವನ್ನು ಕಲ್ಪಿಸುವುದಿಲ್ಲ (according to ಸಾಂವಿಧಾನಿಕ ನಿಯಮಗಳು). ನಾಯಕನ ಅರ್ಜಿ ಅನೂರ್ಜಿತವಾಗುತ್ತದೆ. ಕಟ್ಟಕಡೆಗೆ ನಾಯಕನೇ ತನ್ನ ಪ್ರೀತಿ ಪಾತ್ರರೆಲ್ಲರನ್ನೂ ಕರೆದು ’ಪಾರ್ಟಿ’ ಕೊಟ್ಟು self ದಯಾಮರಣದ ನಿರ್ಧಾರವನ್ನು ಪ್ರಕಟಿಸುತ್ತಾನೆ.  ಮುಂದಿನದೆಲ್ಲಾ ಅವನಿಚ್ಚೆಯಂತೆಯೇ ನೆರವೇರುತ್ತದೆ.

ಬದುಕುವ ಹಕ್ಕು ಎಲ್ಲರಿಗೂ ಇರುವಂತೆ ಸಾಯುವ ಹಕ್ಕೂ ಇರಬಾರದೇಕೆ ಎಂದು ಮಾನ್ಯ ಶಂಭುಲಿಂಗರು ಕೊಶ್ನಿಸಿದ್ದಾರೆ. ಸಾಯುವ ಹಕ್ಕು ಬಂದರೆ ಆತ್ಮಹತ್ಯೆ ಎನ್ನುವ ಪದವೇ ನೆಗೆದು ಬಿದ್ದು ಹೋಗಬಹುದು.  ವಾಸ್ತವದಲ್ಲಿ ಚಿತ್ರದ ನಾಯಕನ ಉತ್ಸಾಹ ಎಲ್ಲರಿಗೂ ಮಾದರಿಯಾಗುವಂತಹುದೆ, ಪುಸ್ತಕವನ್ನೋದಲು ಆತನು ಬಳಸುವ ತಂತ್ರವೂ ಆಕರ್ಷಕವಾಗಿದೆ. ಇಷ್ಟಾದರೂ ’ಚಿತ್ರ’ ತುಸು ಬೋರ್ ಹೊಡೆಸಿದರೆ ಅದಕ್ಕೆ ಶ್ರೀ ಶಂಭುಲಿಂಗರು ಹೊಣೆಯಲ್ಲ !.  ಚಿತ್ರವನ್ನೊಮ್ಮೆ ನೋಡಿದರೆ ನಾಯಕನಿಗೆ ದಯಾಮರಣದ ಯೋಚನೆ ಏಕೆ ಬಂತೆಂಬುದು ಅರಿವಾಗುತ್ತದೆ. ಸಾಯುವುದಕ್ಕೂ ಸ್ವತಂತ್ರ ಬೇಕಲ್ಲವೆ ? . ಟಿಪಿಕಲ್ ಕೈಲಾಸಂ ೧೯೪೬ ರಲ್ಲಿ ಸತ್ತರು. ಇನ್ನೊಂದು ವರುಷ ಬದುಕ್ಕಿದ್ದಿದ್ದರೆ ಅವರೂ ಸ್ವತಂತ್ರವಾಗಿ ಸಾಯಬಹುದಿತ್ತು.   ಸಿನಿಮಾ ದಯಾಮರಣದ ಅಗತ್ಯ ಯಾರಿಗೂ ಬರದಿರಲೆಂದು ಆಶಿಸೋಣ. ಬದುಕು ಎಲ್ಲರಿಗಾಗಿ ಮತ್ತು ಎಲ್ಲರೂ ಬದುಕುವುದಕ್ಕಾಗಿ ಬದುಕೋಣ.

......................................................................................

ಗಣ -ಗಣತಿ

ಈಗ ಮತ್ತೆ ಗಣತಿ ಮೊದಲಾಗಿದೆ. ಹಲವು ಸರ್ಕಾರೀ ಸಾಂಪ್ರದಾಯಿಕ ವ್ಯವಸ್ಥೆಗಳೆಲ್ಲಾ ಈಗಾಗಲೇ ಗಣಕೀಕೃತಗೊಂಡಿರುವುದರಿಂದ ಈ ಬಾರಿಯ ಗಣತಿಯನ್ನು ನಿಜಕ್ಕೂ ’ಗಣ-ತಿ’ ಎನ್ನಬಹುದು. ಗಣತಿಯಿಂದ ಏನೇನು ಉಪಯೋಗವಿದೆ ಎಂದು ಕೆಲವರನ್ನು ಕೇಳಿದರೆ ಹಲವು ತೆರನಾದ ಉತ್ತರಗಳು ಬರುವುದು ನಿಶ್ಚಿತ.  ಗಣತಿಗೆ ನಿಗದಿ ಪಡಿಸಿರುವ ದಿನಗಳಿಗಿಂತ ಮುಂಚಿತವಾಗಿ ಗಣತಿಯನ್ನು ಮುಗಿಸಿ ಮಿಕ್ಕ ದಿನಗಳನ್ನು ಸಂಸಾರದ ಜೊತೆ ’ಕಳೆಯ’ಬಹುದಾದ ಉಪಯೋಗ ಶಿಕ್ಷಕರಿಗಿದೆ ಎಂದು ಮಾನ್ಯ ಶಂಭುರವರು ಪಿಸುದನಿಯಲ್ಲಿ ಹೇಳಿದ್ದಾರೆ. ಗಣತಿಗೆ ಸರ್ಕಾರಿ ಶಾಲಾ ಶಿಕ್ಷಕರನ್ನೇ ಬಳಸಿಕೊಳ್ಳುತ್ತಿರುವುದರಿಂದ ಅವರೀಗ ನಿಜಕ್ಕೂ ’ಶಿಕ್ಷಿತರೇ ’ ಎನ್ನಬಹುದು.  ಸುಶಿಕ್ಷಿತರು ಎಂಬ ಪದವನ್ನು ಶಿಕ್ಷಕರೆಲ್ಲಾ ಸೇರಿಕೊಂಡು ಒಳ್ಳೆಯ ಶಿಕ್ಷೆ ಅನುಭವಿಸುತ್ತಿರುವವರು ಎಂದು ಬದಲಾಯಿಸಿಕೊಳ್ಳಬಹುದು. ಯಾರಿಗೆ ಏನಾಗಲೀ , ಬಿಡಲಿ ’ಮಂಗಳಮುಖಿ’ಯರಿಗಂತೂ ಈ ಬಾರಿಯ ಗಣತಿಯಲ್ಲಿ ಅವರನ್ನೂ (ಮಕ್ಕಳನ್ನೂ, ತಂದೆಯ(ರ)ನ್ನೂ means ಪೋಷಕರನ್ನು) ’ಗಣ’ನೆಗೆ ತೆಗೆದುಕೊಳ್ಳುವ ಭರವಸೆ ದೊರೆತಿದೆ ಮತ್ತು ಈಡೇರುತ್ತಿದೆ. ಮಂಗಳಮುಖಿಯರ ವಿಚಾರ ಇಲ್ಲಿ ಬರೆಯಲು ಕಾರಣ, ಇದೀಗ ನಾನು ಓದುತ್ತಿರುವ ಭಾಷಾಪರಿಣತ, ಭಾಷಾಶಾಸ್ತ್ರ ಅನುವಾದಕ ಶ್ರೀಯುತ A.K. ರಾಮಾನುಜನ್ ಅವರ ಪುಸ್ತಕ. ತೆಲುಗಿನ ಕ್ಷೇತ್ರಯ್ಯ, ಅನ್ನಮಯ್ಯ, ಸಾರಂಗಪಾಣಿ ಮುಂತಾದವರ ಪದಗಳನ್ನು ಆಂಗ್ಲಭಾಷೆಯಲ್ಲಿ ಅನುವಾದಿಸಿ ಅವರು ಬರೆದಿರುವ ಪುಸ್ತಕ "When God is a customer"( ದೇವರು ಗಿರಾಕಿಯಾಗಿ !) .  
{ಪುಸ್ತಕ ಎಲ್ಲೆಲ್ಲೂ ಅಲಭ್ಯ. ಗೂಗಲ್-ಇ-ಬುಕ್ಸ್ ನಲ್ಲಿ ಹುಡುಕಿದಾಗ ಕೇವಲ ಟಿಪ್ಪಣಿ ಮತ್ತು ಪರಿಚಯವಷ್ಟೇ ದೊರೆತದ್ದು. ಕಡೆಗೆ Landmark ಪುಸ್ತಕ ಮಳಿಗೆಯಲ್ಲಿ ಇದೆ ಎಂದು ತಿಳಿದು ಕಾಸು ಕೊಟ್ಟು ತಂದಿರಿಸಿಕೊಂಡಿದ್ದೇನೆ.}
ಭಾಷಾನುವಾದದಲ್ಲಿ A.K. (A=ಆಂಗ್ಲ, K=ಕನ್ನಡ ಎನ್ನೋಣವೇ ? ) ರಾಮಾನುಜನ್ ಅವರಿಗೆ ಸರಿಸಾಟಿಯಾಗಬಲ್ಲವರು ಇಲ್ಲವೆಂದು ಹೇಳುವುದು ಅತಿಶಯೋಕ್ತಿಯಾದರೂ, ಒಂದರ್ಥದಲ್ಲಿ ಅದೂ ನಿಜವೇ ಆಗುತ್ತದೆ. (ರಾಮಾನುಜನ್ನೇ ’ಏಕೆ’ ? ಇನ್ನೊಬ್ಬ ಭಟ್ಟರೋ, ಶೆಟ್ಟರೋ ಆಗಬಾರದೇ ?  ಎಂದು ಯಾರಾದರೂ ಪ್ರಶ್ನಿಸಿದರೆ  ಅದಕ್ಕೆ ಮಾನ್ಯ ’ಶಂ’ ರವರ ಬಳಿ ಉತ್ತರವಿಲ್ಲ !). ಪುಸ್ತಕದ ಅನುವಾದವನ್ನು ಓದುತ್ತಿದ್ದರೆ, ಮುಗಿಸುವಷ್ಟರಲ್ಲಿ ನಾನೇನಾದರೂ ಇಂದ್ರಿಯಾತೀತನಾಗಿ (’ಕುಂಡಲಿನಿ’ ಸಿಡಿದು !) ಬಿಡುತ್ತೇನೇನೋ ಎಂದು ಅನಿಸುತ್ತಿದೆ.
When God is a customer ನಲ್ಲಿ ದೇವರೇ ಮಂಗಳಮುಖಿಯರ ಬಳಿ ಬರುತ್ತಾನೆ. (ಇಂದಿನ ಸಾಮಜಿಕ ಸ್ಥಿತಿಗೆ ತದ್ವಿರುದ್ದ) . ಆತನೇ ಗಿರಾಕಿಯಾಗುತ್ತಾನೆ, ಹಣ ನೀಡುತ್ತಾನೆ !.
ಇದು ಮೀರಾ-ಮಾಧವ, ಗೋಪಿ-ಕೃಷ್ಣರ ಕತೆಗಳಿಗೆ ವಿರುದ್ದವಾಗಿಯೇ ನೆಡೆಯುತ್ತದೆ. ಅದಕ್ಕೇ ಪುಸ್ತಕದ ಹೆಸರು "When God is a customer" .
ದೇವರಿಗೆ ಭಕ್ತರು ಇರಲೇಬೇಕೆಂದೇನೂ ಇಲ್ಲ. ಆದರೆ ಭಕ್ತರಿಗೆ ದೇವರಂತೂ ಬೇಕು ಕನಿಷ್ಟ ಭಕ್ತ/ಭಕ್ತೆ ಎನಿಸಿಕೊಳ್ಳಲು.   ಪುಸ್ತಕ ಓದಿ ಮುಗಿಸಿದ ನಂತರ ’ಸಾಧ್ಯವಾದಲ್ಲಿ’ ಇನ್ನಷ್ಟು ಬರೆಯುತ್ತೇನೆ.
....................................................

ಕಿಡಿ :

ಇತ್ತೀಚೆಗೆ ಮಂತ್ರಿವರ್ಯರೊಬ್ಬರು ತಮಿಳುನಾಡಿನ ಕಾಮಾಕ್ಷಿ ದೇವಾಲಯಕ್ಕೆ ಮುಗಿಬಿದ್ದಿದ್ದರು. ’ಕೋವಿಲ್ (ಕೋಯಿಲ್)’ ನ ಒಳಗಡೆ ನಿಂತಿದ್ದಾಗ ಅವರ ಜೇಬಿನಿಂದ ಅಚಾನಕ್ಕಾಗಿ  ಅಮೂಲ್ಯ ವಸ್ತುವೊಂದು ಕೆಳಗೆ ಬಿದ್ದಿತಂತೆ. ಬಿದ್ದುದನ್ನು ತೆಗೆದುಕೊಳ್ಳಲು ಬಗ್ಗಿದಾಗ ’ಟೈಟ್’ ಆಗಿದ್ದ ಮಾನ್ಯರ ಪ್ಯಾಂಟಿನ ಹಿಂಭಾಗ ಸಿಡಿದು-ಭಾಗವಾಗಿ ಹಿಂಬದಿಯಲ್ಲಿದ್ದವರೆಲ್ಲರಿಗೂ ಅವರ ಅಂಡಿನ ದರ್ಶನವಾಯಿತಂತೆ. (ಅವರೇನು ಒಳವಸ್ತ್ರ ಹಾಕಿರಲಿಲ್ಲವೇ ? ಎಂಬ ಕಿಡಿಗೇಡಿ ಪ್ರಶ್ನೆಯನ್ನು ಮಾನ್ಯ ಶಂಭುಲಿಂಗರು ಕೇಳಿದ್ದಾರೆ).

ಕಣ್ಣಾರೆ ಕಂಡೆ ನಾ
ಕಾಮಾಕ್ಷಿಯ ...

ಎಂಬ ಹಾಡಿರುವಂತೆ

ಕಣ್ಣಾರೆ ಕಂಡೆ ನಾ
ಖಂಡೇರಾಯನ ಕುಂಡೀನಾsss....

ಎಂಬ ಎ’ಲೈಟ್’ ಪದ್ಯದೊಂದಿಗೆ ಮುಗಿಸೋಣ.

..............................*.......................................

20 comments:

ಶಾನಿ said...

ಅದಕ್ಕೇ ಇರಬೇಕು; ಜನರ ಮೇಲೆ ಸರ್ಕಾರಕ್ಕೆ ದಯೆ ಇರುವ ಕಾರಣವೇ ಜನರಿಗೆ ಏನೇ ಆದರೂ ಗೋರ್ಕಲ್ಲ ಮೇಲೆ ನೀರು ಸುರಿದಂತೆ ವರ್ತಿಸುವುದು. ಈಗ ನೋಡಿ, ರೈತರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಆಳುವವರು ಸ್ಥಿತಪ್ರಜ್ಞತೆ ಮೆರೆಯುತ್ತಾರೆ. ಈ ಮಧ್ಯೆ, ಬೆಲೆ ಏರಿಕೆ, ಭ್ರಷ್ಟಾಚಾರ ಇವೇ ಮುಂತಾದವುಗಳಿಂದ ಜನತೆ ನೆಲಕಚ್ಚುವಂತೆ ಕೊಡುಗೆ ನೀಡುತ್ತಿಲ್ಲವೇ?
ಶಿವನೇ ಶಂಭುಲಿಂಗ!

ಸೀತಾರಾಮ. ಕೆ. / SITARAM.K said...

ತುಂಬಾ ಚೆನ್ನಾಗಿದೆ ಬರವಣಿಗೆ.

ಜಲನಯನ said...

ಹಹಹ ಕೊನೆ ಹನಿ Honey ಸವಿತಾ ಇದ್ದೀನಿ..ಬಹಳ ಚನ್ನಾಗಿದೆ...ಭೋ ಇಷ್ಟಾತ್ರೀ ಯಪ್ಪಾ....

PARAANJAPE K.N. said...

ಶ೦ಭುಲಿ೦ಗನಿಗೆ ನಮೋನ್ನಮಃ. ಚೆನ್ನಾಗಿದೆ ಬರಹ. ಎಕೆ ಯವರನ್ನು ನಾನು ಇಷ್ಟು ದಿನ ಓದಿಲ್ಲ ಏಕೆ? ಎ೦ದು ನನಗೆ ನಾನೇ ಪ್ರಶ್ನೆ ಕೇಳಿಕೊ೦ಡೆ . ಈಗಲೇ ಓದಬೇಕೆನಿಸಿದೆ. ಕೊನೆಕಿಡಿಯ೦ತೂ ಎ೦ದಿನ೦ತೆ ಸೂಪರ್. ಆ ಮಹಾತ್ಮನ ಅ೦ಡುದರ್ಶನವಾದವನ ಜನ್ಮ ಸಾರ್ಥಕ.

sunaath said...

ಪುತ್ತರ್,
ವಿಚಾರ-ಅಭಿಪ್ರಾಯಗಳನ್ನು ವಿನೋದಮಯವಾಗಿ ಮುಂದಿಡುವ ನಿಮ್ಮ ಕೌಶಲ್ಯಕ್ಕೆ ನಮೋ ನಮಃ! ದಯಾಮರಣ, ಏಕೆ ರಾಮಾನುಜ ಹಾಗು ಮಂತ್ರಿವರ್ಯರ ಪ್ರದರ್ಶನ ಇವೆಲ್ಲವೂ ನಮಗೆ light and delight ಕೊಡುವಂತಹವು ಆಗಿವೆ.

ಸವಿಗನಸು said...

supero sooper.....

V.R.BHAT said...

ವಿಚಾರಪೂರಿತ ಬರಹ, ಕುಂಡೆಯನ್ನು ಕಂಡಿದ್ದಷ್ಟೇ ಅಲ್ಲ, ಅದರಲ್ಲಿ ವಾದ್ಯನುಡಿಸುವವರೂ ಇದ್ದಾರಲ್ಲ, ಅವರಿಗೆ ಶಂಭುಲಿಂಗ ’ಕುಂಡೆವಾದ್ಯ ಕಲಾವಿದರು’ ಎಂದು ಗೌರವಿಸಬಹುದೇನೋ!

Subrahmanya said...
This comment has been removed by the author.
Subrahmanya said...

ಶಾನಿ ಮೇಡಂ,

ಹೌದು. ಶಿವನೇ ಶಂಭುಲಿಂಗ !.

Subrahmanya said...

ಸೀತಾರಾಮ್ ಸರ್,

ಅಂತೂ ಬಂದ್ರಲ್ಲಾ. ಧನ್ಯವಾದಗಳು ನಿಮಗೆ.

Subrahmanya said...

ಜಲನಯನ,

ನೀವು ಹನಿ-ಹನಿಯಾಗಿ ಸವಿತಾ ಇದ್ರೆ ಶಂಭುಲಿಂಗ ಇನ್ನಷ್ಟು ಹನಿ ಕೊಡಬಹುದು.

Subrahmanya said...

ಪರಾಂಜಪೆಯವರೆ,

ಹಹ....ದರ್ಶನಕ್ಕೆ ಅಂತ ನಿಂತಮೇಲೆ ಅದಾಗದೇ ಬರೋದಾದ್ರೂ ಹೇಗೆ ಹೇಳಿ :).

Subrahmanya said...

ಕಾಕಶ್ರೀ,

ನಿಮಗೆ delightful ಅನ್ನಿಸಿದರೆ ಅದೇ ದೊಡ್ಡ ಮೆಚ್ಚುಗೆ.

Subrahmanya said...

ಸವಿಗನಸು,

ಥ್ಯಾಂಕ್ಸ್ ಕಣಣ್ಣೋ .

Subrahmanya said...

ಭಟ್ಟರೆ,

"ಕುಂಡೆವಾದ್ಗ್ಯ ಕಲಾವಿದರು " ..ಹೆಹೆ..ಸೂಪರ್.

shivu.k said...

ಸರ್,
ತುಂಬಾ ಚೆನ್ನಾಗಿ ವಿಚಾರವನ್ನು ಅವಲೋಕಿಸಿದ್ದೀರಿ.. ಕೊನೆ ಕಿಡಿಯಂತೂ ಸಕತ್ ಆಗಿದೆ...

ತೇಜಸ್ವಿನಿ ಹೆಗಡೆ said...

ಸುಬ್ರಹ್ಮಣ್ಯ ಅವರೆ,

ನನಗೆ ಗುಜಾರಿಶ್ ಚಿತ್ರ ಸ್ವಲ್ಪವೂ ಇಷ್ಟವಾಗಲೇ ಇಲ್ಲ. ಅಷ್ಟು ವರುಷ ಹೋರಾಡಿದ ವ್ಯಕ್ತಿಗೆ ಇದ್ದಕಿದ್ದಂತೇ ಸಾವಿನ ಅಲೋಚನೆ ಬರುವುದು. ಹಾಗೆ ಬಂದಾಗ ಮೊದಲು ಪ್ರತಿಭಟಿಸಿದ ಪ್ರೇಯಸಿ.. ಆಮೇಲೆ ತಾನೇ ಸ್ವತಃ ದಯಾಮರಣ ಕಲ್ಪಿಸುವುದು.. ಅದರ ಬದಲು ಆತನ ಮನಸ್ಸನ್ನೇ ಬದಲಿಸಿದ ಕಾನ್ಸೆಪ್ಟ್ ತೆಗೆದುಕೊಂಡಿದ್ದರೆ ಉತ್ತಮ ಚಿತ್ರವಾಗುತ್ತಿತ್ತು.

ಇದೇ ಕಥೆಯನ್ನಾಧರಿಸಿ ಒಂದು ಹೊಸ ಕತೆ ಬರೆದಿರುವೆ. ಆದರೆ ಅಂತ್ಯ ಮಾತ್ರ ಇದಲ್ಲ.... :)

ಚೆನ್ನಾಗಿದೆ ಲೇಖನ. ಹೊಸ ಪುಸ್ತಕ ಪರಿಚಯ ಮಾಡಿದ್ದೀರ. ಇದರ ಬಗ್ಗೆ ಮತ್ತಷ್ಟು ಬರೆಯಿರಿ.

Subrahmanya said...

ಶಿವು ಸರ್,

ನಿಮಗೆ ಧನ್ಯವಾದಗಳು.

Subrahmanya said...

ತೇಜಸ್ವಿನಿಯವರೆ,


’ಗುಜಾರಿಶ್’ ಸೋತಿರುವುದೆ ನೀವು ಹೇಳಿದ ಪಾಯಿಂಟಿನಲ್ಲಿ.
ಕೊನೆಕೊನೆಗಂತೂ ಸುಮ್ಮನೆ ಎಳೆದಿದ್ದಾರೆ ಅನಿಸುತ್ತದೆ ಅದೂ aimless ಆಗಿ.

ನಿಮ್ಮ ಕತೆಯನ್ನು ಓದುವ ಕಾತುರವಿದೆ. ಧನ್ಯವಾದಗಳು.

ಮನಸು said...

chennagide lekhana... daye annodanna huDukabekide eega haha... saraLavaagi ellarigoo artavaaguvante barediddeeri..