Dec 15, 2009

ಭಾಷಾಭಿಮಾನ !

" ಕನ್ನಡದ್ಮಕ್ಳು ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಪ್ರಾರಂಭಿಸಿ ಕನ್ನಡ ಭಾಷೆಯ ಆಭಿವೃಧ್ದಿಗಾಗಿ ಹಗಲಿರುಳೂ ಶ್ರಮಿಸಬೇಕು. ಕನ್ನಡದ ಸಂಪೂರ‍್ಣ ಅನುಷ್ಟಾನಕ್ಕಾಗಿ ನಿಮ್ಮ ಶಾಲೆಗಳು, ಮನೆ, ಹಾಗೂ ಎಲ್ಲೆಡೆಯಲ್ಲಿಯೂ ಕನ್ನಡ ಭಾಷೆಯಲ್ಲಿಯೆ ಮಾತನಾಡಬೇಕು. ನಿಮಗೆ ಕನ್ನಡ ಭಾಷೆ ಅತ್ಯಂತ ಸರಳ ಎನ್ನಿಸಬೇಕೆಂದರೆ ಹೆಚ್ಚು ಕನ್ನಡ ಕಾದಂಬರಿಗಳು, ಲೇಖನಗಳು, ಹಾಗೂ ಕವನ ಗಳನ್ನು ಓದಬೇಕು ! ಇನ್ನೂ ಸರಳವಾಗಿ ಹೇಳಬೇಕೆಂದರೆ ನನ್ನ ಲೇಖನಗಳು , ಕಾದಂಬರಿಗಳನ್ನು ನೀವು ಕೊಂಡು ಓದಿದಲ್ಲಿ ನಿಮ್ಮ ಕನ್ನಡಾಭಿಮಾನ ಉತ್ತುಂಗಕ್ಕೇರುವುದರಲ್ಲಿ ಯಾವುದೇ ಸಂದೇಹವಿಲ್ಲ. ಉದಾಹರಣೆಗೆ ನನ್ನ ಮಕ್ಕಳನ್ನೇ ತೆಗೆದುಕೊಳ್ಳಿ...(ಸನ್ಮಾನ್ಯರು ’ಮಗಳು’ ಎನ್ನಲಿಲ್ಲಾವಲ್ಲಾ ಎಂದು ಸಂಭು ವಿನ ಚಡಪಡಿಕೆ !!) ಈದಿನ ಅವರೆಲ್ಲಾ ಆಮೇರಿಕಾದಲ್ಲಿ ವೈದ್ಯರಾಗಿದ್ದಾರೆ ! ಹೇಗೆ ಹೇಳಿ ನೋಡೋಣ ? ಅವರೆಲ್ಲಾ ನಿಮ್ಮಂತೆ ಕನ್ನಡ ಮಾಧ್ಯಮದಲ್ಲಿ ಓದ್ದೇ ಇದ್ದರೂ ಸಹ ಕೇವಲ ನನ್ನ ಕಾದಂಬರಿ , ಪ್ರಬಂಧ ಗಳನ್ನು ಓದಿ ಪ್ರಭಾವಿತರಾಗಿ ಈದಿನ ಉತ್ತುಂಗದಲ್ಲಿದ್ದಾರೆ ! ( ಕೂಸುಗಳು ಕರತಾಡಿಸಿದವು !) ..ಮಕ್ಕಳೇ....ನಿಮ್ಮ ತಂದೆ-ತಾಯಿಯರನ್ನು ಮಮ್ಮಿ-ಡ್ಯಾಡಿ ಎನ್ನುವ ಬದಲು ಅಪ್ಪ-ಅಮ್ಮ ಎನ್ನಿ, ಅದರಲ್ಲಿ ಪ್ರೀತಿ ತುಂಬಿರುತ್ತೆ. ನನ್ನ ಮಕ್ಕಳು ನನ್ನನ್ನು ಡ್ಯಾಡಿಅಂತ್ಲೇ ಕರೆಯೋದು...ಆದ್ರೇ ನಾನ್ಯಾವತ್ತೂ ಅದಕ್ಕೆ ಬೆಲೆ ಕೊಡಲಿಲ್ಲ..ತಿದ್ದಲೂ ಇಲ್ಲ.. ಅವ್ರು ಹಾಗ ಕರೆದಾಕ್ಷಣ ಕನ್ನಡಕ್ಕೆ ಯಾವ ಅವಮಾನವೂ ಆಗೋಲ್ಲ ಆಲ್ವೇ, ನೀವು ಹಾಗೇ ಇದ್ಬಿಡಿ ಅಷ್ಟೇ...!! ನೋಡಿ ಕನ್ನಡಕ್ಕೆ ಈಗ ಶಾಸ್ತ್ರೀಯ ಸ್ಥಾನ ಸಿಕ್ಕಿದೆ ( ಹಾಗಂದ್ರೇನು? ಅಂತ ಮಕ್ಳು ಕೇಳ್ಳಿಲ್ಲ ಅನ್ನೋದೆ ಸಂಬು ವಿಗೆ ಸಮಾಧಾನ), ಕನ್ನಡದ ಘನತೆ ಹೆಚ್ಚಾಗಿದೆ,
ಆದ್ದರಿಂದ ನೀವು ಪ್ರತಿನಿತ್ಯ ಕನ್ನಡವನ್ನೇ ಉಂಡು, ಕನ್ನಡವನ್ನೇ ಹೊದ್ದು ಮಲಗಿ, ಕನ್ನಡದಲ್ಲೇ ಹೇ....(ಸೆನ್ಸಾರ್ ಕಟ್ !) ಕನ್ನಡವನ್ನು ಉಳಿಸಿ ..( ಸನ್ಮಾನ್ಯರಿಗೆ ಜಂಗಮಗಂಟೆಯ ಕರೆ ಬರುತ್ತದೆ...ಅದೇನೋ ಆಂಗ್ಲ ಭಾಷೆಯಲ್ಲಿ ಮಾತನಾಡಿ ...)
ಮಕ್ಕಳೆ ನನಗೊಂದು ಆಂಗ್ಲ ಶಾಲೆಯ ತುರ್ತು ಉದ್ಘಾಟನಾ ಕಾರ್ಯವಿದೆ...ಇನ್ನೊಮ್ಮೆ ಸಿಗುವೆ...ಬರಲೇ..
( ತಮ್ಮ ಫ಼ಾರಿನ್ ಕಾರ್ ಹತ್ತಿ ಬುರ್ ಎಂದು ಹೋಗುತ್ತಾರೆ ! ಕೂಸುಗಳು ಕೊಬ್ರಿ ಬಿಸ್ಕತ್ ತಿನ್ನುತ್ತವೆ ! )
ಸಂದರ್ಭ :- ಕನ್ನಡ ರಾಜ್ಯೋತ್ಸವ ದಂದು ಕನ್ನಡದ ನೆಚ್ಚಿನ ಮೆಚ್ಚಿನ ಸಾಹಿತಿಯೊಬ್ಬರು ಮುಖ್ಯ ’ಅತಿಥಿ’
ಯಾಗಿ ಆಂಗ್ಲ ಶಾಲೆಯೊಂದರಲ್ಲಿ ಆಂಗ್ಲ ಭಾಷೆಯಲ್ಲಿ ಮಾಡಿದ ಭಾಷಣದ ಕನ್ನಾಡಾನುವಾದ !!
ಅನುವಾದಕರು :- ಸಂಭುಲಿಂಗ.

Dec 14, 2009

ರಾಜ್ಕೀಯದ್ ಮಾತು

ಸಿವನೇ ಸಂಬುಲಿಂಗ..........
ಇದೆಂಥಾ ಇಸ್ಯ ಬಿಡ್ಲಾ.....ಧಾರವಾಡ ದಿಂದ ಗೋವಾಕ್ಕೋದ್ರೆ ಏನ್ಲಾ ಬತ್ತದೆ ? ಗೋವಾದ್ಲೇನು ಇಲ್ಲಾ ಕಣಾಪ ಈಗ ...ಎಲ್ಲಾರ್ನು ಓಡಿಸ್ಬಿಟ್ಟವ್ರಂತೆ ಆಲ್ಲಿಂದಾ...ಆದ್ರೂ ನಮ್ ಮೆಂಬ್ರಿ ಗಳಿಗೂ ಯೇಗ ಬಂತು ಕಣಪಾ..ನೂರಿನ್ನೂರು ಕೆಬ್ರಿಕಾತ ಇದ್ದ ಐಕ್ಳು ಏಕ್ದ್ಂ ಸಾವಿರ , ಲಕ್ಸ ನೋಡಂಗಾದ್ರಲಾ...ಆದೇ ದೋಡ್ ಸಾದ್ನೆ ಬಿಡ್ಳಾ !! ಎಲ್ಲಾ ಲಕ್ಸಮಿ ಆಸೀರ್ವಾದ ಕನ್ಲೆ...ಬರೀ ಲಕ್ಸ್ಮಿ ಆಲಾ ಕನ್ಲಾ ..ವರಮಾಲಕ್ಸ್ಮಿ ಅಂತೆ !! ಪಾಪ ನಮ್ ಗೌಡ್ರು ಪನ್ಚೆ ಮ್ಯಾಗಿನ್ ಧೂಳ್ ಕೊಡ್ವಕಳದೇ ಆಯ್ತು....ಒಂದೀಸ್ಲಾದ್ರು ಇಂಗ್ ಮಜಾ ಮಾಡ್ಲಿಲ್ಲಾ ಕಣ್ಳಾ...!! ಆ ಐಕ್ಳಿಗಾದ್ರು ವಸಿ ಮರ್ವಾದಿ ಬ್ಯಾಡ್ವೆ ? ಓಟ್ಳಾಗೆ ಬರೀ ಚಡ್ಡೀಲೇ ಓತ್ಲಾ ವಡೀತಿದ್ರಂತೆ...ಆ ವಯ್ಯ ಅಮುಲ್ದಾರ್ರು ಓದೇಟ್ ಗೆ ಲುಂಗಿ ಸುತ್ಕ್ಂಡ್ವಂತೆ....ಏನ್ ಕಾಲ ಬಂತ್ಲಾ ದೇಸಕ್ಕೆ... ಒಂದ್ ಇಸ್ಯ ನಿಂತಾವ್ಲೆ ಇರ್ಲಿ....ಓಟ್ಳಾಗೆ ಮೂಗ್ ಬಟ್ಟಿಗೂ ಯವಸ್ತೆ ಆಗಿತ್ತಂತೆ...ಆಮುಲ್ದಾರ್ರು ಓಗಿ ಎಲ್ಲಾ ನೆಗೆದ್ ಬಿತ್ತಂತೆ ಕಣ್ಳಾ...(ಕಿಸ ಕಿಸ ನಗು !!) .....ಒತ್ತಾತು ನಡೀಲೇ....ಆಮ್ಯಾಕ್ ಸಿಗನಾ!!!

...........................................................